Advertisement

ಲೋಕ ಅದಾಲತ್‌: 2,055 ಪ್ರಕರಣ ಇತ್ಯರ್ಥ

04:59 PM Dec 16, 2019 | Suhan S |

ಮಂಡ್ಯ: ಜಿಲ್ಲೆಯ ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ 2,055 ಪ್ರಕರಣಗಳನ್ನು ರಾಜಿ- ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಚ್‌.ಜಿ.ವಿಜಯಕುಮಾರಿ ಹೇಳಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲಾದ್ಯಂತ ಒಟ್ಟು 8,328 ಪ್ರಕರಣಗಳಲ್ಲಿ 2,055 ಪ್ರಕರಣಗಳನ್ನು ಪರಿಹರಿಸಲಾಗಿದೆ.ಒಟ್ಟು ಪ್ರಕರಣಗಳಲ್ಲಿ 27.77 ಕೋಟಿ ರೂ ರಾಜಿಯಾಗಿದ್ದು, ಮಂಡ್ಯದಲ್ಲೇ ಎಂಇಸಿ ಪ್ರಕರಣ ಸೇರಿದಂತೆ ಒಟ್ಟು 16.69 ಕೋಟಿ ರೂ.ರಾಜಿಯಾಗಿದೆ. ಇದಲ್ಲದೆ ಪ್ರೀ-ಲಿಟಿಗೇಷನ್‌ ಪ್ರಕರಣದಲ್ಲಿ ಎಸ್‌ಬಿಐ, ಸಿಂಡಿಕೇಟ್‌, ಇಂಡಿಯನ್‌, ಕಲ್ಪತರು ಕಾವೇರಿ ಗ್ರಾಮೀಣ ಬ್ಯಾಂಕ್‌ಗಳ ಅಧಿಕಾರಿಗಳೂ ಹಾಜರಾಗಿ ಕೆಲ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರು. ಕೆ.ಆರ್‌.ಪೇಟೆ ತಾಲೂಕಿನಲ್ಲಿ 170, ಮದ್ದೂರು 442, ನಾಗಮಂಗಲ 133, ಶ್ರೀರಂಗಪಟ್ಟಣ 269, ಪಾಂಡವಪುರ 175, ಮಂಡ್ಯ 758, ಮಳವಳ್ಳಿ 86 ಪ್ರಕರಣ ರಾಜಿಯಾಗಿದೆ ಎಂದರು.

ಜನಜಂಗುಳಿ: ಲೋಕ ಅದಾಲತ್‌ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ನ್ಯಾಯಾಲಯ ಎದುರು ನೂರಾರು ಜನರು ಹಾಜರಾಗಿದ್ದರು. ಮಧ್ಯಸ್ಥಿಕೆ ವಹಿಸುವ ಮೂಲಕ ತಮ್ಮ ಪ್ರಕರಣಗಳ ಇತ್ಯರ್ಥ ಪಡಿಸಿಕೊಂಡರು. ಕೋರ್ಟ್‌, ಕೇಸು ಎಂದು ವರ್ಷಗಟ್ಟಲೇ ಅಲೆಯುವ ಬದಲು ಒಂದೇ ದಿನದಲ್ಲಿ ರಾಜಿ ಮಾಡಿಕೊಂಡು ಇತ್ಯರ್ಥಪಡಿಸಿಕೊಳ್ಳಲು ದೂರದ ಊರು ಗಳಿಂದ ಬಂದಿದ್ದರು. ಗಂಟೆಗಟ್ಟಲೆ ಕಾಯ್ದು ತಮ್ಮ ಸರದಿ ಬಂದಾಗ ಮಧ್ಯಸ್ಥಿಕೆ ವಹಿಸಿ ಒಪ್ಪಿತವಾದ ನಂತರ ರಾಜಿ ಮಾಡಿ ಕೊಂಡು ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರು

Advertisement

Udayavani is now on Telegram. Click here to join our channel and stay updated with the latest news.

Next