Advertisement
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆಗೆ ಆದೇಶ ಮಾಡದಿದ್ದರೆ ಸುಮ್ಮನೆ ಆರೋಪ ಮಾಡಿದರು ಅಂತ ಬಿಜೆಪಿಯವರು ದೂರುತ್ತಾರೆ. ತನಿಖೆ ಮಾಡಿಸಿದರೆ, ಇದು ದ್ವೇಷದ ರಾಜಕಾರಣ ಎನ್ನುತ್ತಾರೆ. ನಾವು ವಿಪಕ್ಷದಲ್ಲಿದ್ದಾಗ ಸ್ಪಷ್ಟವಾಗಿ ಆರೋಪ ಮಾಡಿದ್ದೆವು. ಬೇರೆ ಬೇರೆ ದೂರು, ಮಾಹಿತಿಯಾಧಾರದ ಮೇಲೆ ಪಾರದರ್ಶಕವಾಗಿ ನಿಷ್ಪಕ್ಷಪಾತ ತನಿಖೆ ಮಾಡುತ್ತಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೋ ಭೇಟಿ ವೇಳೆ ರಸ್ತೆ ಬದಿ ನಿಂತಿದ್ದ ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯವಾಡಿದ ಸಚಿವ ದಿನೇಶ್, ಮೋದಿ ಅವರು ನೋಡಲಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷರು ಬೀದಿಯಲ್ಲಿ ನಿಂತಿದ್ದರು. ಆದರೆ ಮೋದಿ ಅವರನ್ನು ತಿರುಗಿಯೂ ನೋಡಲಿಲ್ಲ. ಬಿಜೆಪಿ ರಾಜ್ಯ ಮುಖಂಡರನ್ನು ನೋಡೋಕೆ ಅವರಿಗೆ ಅಸಡ್ಡೆ ಎಂದರು.
ಚುನಾವಣೆ ಪ್ರಚಾರಕ್ಕೆ ಮೋದಿಯವರನ್ನು ಕರೆಯಿಸಿ ಬೀದಿ ಬೀದಿ ಓಡಾಡಿಸಿ ಅವರ ಮಾನ, ಮರ್ಯಾದೆ ತೆಗೆದರು. ಅವರ ಹೆಸರಿನಲ್ಲಿ ವೋಟ್ ಕೇಳಿದರು. ಆದರೆ ಬಂದಿದ್ದು 60 ಸೀಟ್ ಮಾತ್ರ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ವ್ಯಂಗ್ಯ ವಾ ಡಿದರು.
Related Articles
ಬೆಳಗಾವಿ: ಈ ಹಿಂದಿನ ಬಿಜೆಪಿ ಸರಕಾರದ ಅವ ಧಿಯ ಕೋವಿಡ್ ಹಾಗೂ 40 ಪರ್ಸೆಂಟ್ ಕಮಿಷನ್ ಹಗರಣವನ್ನು ತನಿಖೆಗೆ ಒಳಪಡಿಸುವುದು ಸೂಕ್ತ. ಇದರಲ್ಲಿ ಸಂಬಂ ಧಿಸಿದ ಸಚಿವರು ಹಾಗೂ ಅ ಧಿಕಾರಿಗಳು ಭಾಗಿಯಾಗಿದ್ದಾರೆ. ತನಿಖೆ ಆಗುವುದಂತೂ ಖಚಿತ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40 ಪರ್ಸೆಂಟ್ ಕಮಿಷನ್, ಕೊರೊನಾ ವೇಳೆ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ, ನೀರಾವರಿ ಕಾಮಗಾರಿಗಳಲ್ಲಿ ಹಗರಣದ ಬಗ್ಗೆ ನಾವೇ ಆಗ ಆರೋಪ ಮಾಡಿದ್ದೇವೆ. ಈಗ ನಮ್ಮ ಸರಕಾರ ಬಂದಿರುವುದರಿಂದ ತನಿಖೆ ನಡೆಸಲಾಗುವುದು. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿದಾಗ ಎಲ್ಲವೂ ಬಹಿರಂಗವಾಗಲಿದೆ ಎಂದರು. ಬಿಜೆಪಿ ಆಡಳಿತದಲ್ಲಿಯ ಆರೋಗ್ಯ ಸಚಿವರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀ ಶ, ಈಗ ಅವರು ಬರುವುದು, ಬಿಡುವುದು ಎರಡನೇ ಮಾತು. ಆದರೆ ಕೋವಿಡ್ ಹಗರಣ ಕುರಿತು ಸಂಪೂರ್ಣ ಪರಿಶೀಲನೆ ನಡೆಸಲಾಗುವುದು. ಈಗ ಅವರು ಮಾಜಿಯಾಗಿದ್ದಾರೆ. ಅವರಿಗೆ ಏನೂ ಕೆಲಸವಿಲ್ಲ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿ ಕಾರ ಇದೆ. ಕೋವಿಡ್ ಹಗರಣ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
Advertisement