Advertisement

ಅನಧಿಕೃತ ವಾಣಿಜ್ಯ ಮಳಿಗೆಗೆ ಬೀಗ

09:02 AM Jan 09, 2019 | |

ಬೆಂಗಳೂರು: ವಸತಿ ಪ್ರದೇಶ ಹಾಗೂ ವಸತಿ ಕಟ್ಟಡಗಳಲ್ಲಿ ಅನಧಿಕೃತವಾಗಿ ವಾಣಿಜ್ಯ ಚಟುವಟಿಕೆ ನಡೆಸುವವರ ಪರವಾನಗಿ ರದ್ದುಗೊಳಿಸಿ ಕೂಡಲೇ ಮಳಿಗೆಗಳಿಗೆ ಬೀಗ ಹಾಕುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್‌ ಅಧಿಕಾರಿಗಳಿಗೆ ಆದೇಶಿಸಿದರು.

Advertisement

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವವರ ವ್ಯಾಪಾರ ಪರವಾನಗಿ ರದ್ದು, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಸೇರಿ ಇತರೆ ವಿಷಯಗಳ ಕುರಿತು ಬಿಡಿಎ, ಬಿಬಿಎಂಪಿ, ಬೆಸ್ಕಾಂ, ಬಿಡಬ್ಲೂಎಸ್‌ಎಸ್‌ಬಿ ಅಧಿಕಾರಿಗಳೊಂದಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆಸಿದರು.

ವ್ಯಾಪಾರ ಪರವಾನಗಿ ಇಲ್ಲದ ಮಳಿಗೆಗಳಿಗೆ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ನೀಡಿರುವ ಬಗ್ಗೆಯೂ ಅಧಿಕಾರಿಗಳನ್ನು ಡಿಸಿಎಂ ತರಾಟೆಗೆ ತೆಗೆದುಕೊಂಡರು. ಇನ್ನುಮುಂದೆ ಪರವಾನಗಿ ಇಲ್ಲದವರಿಗೆ ಯಾವುದೇ ಸಂಪರ್ಕ ಕೊಡುವಂತಿಲ್ಲ. ಕೆಲವೇ ದಿನಗಳಲ್ಲಿ ಅನಧಿಕೃತ ವಾಣಿಜ್ಯ ಮಳಿಗೆ, ಬಾರ್‌ ಮತ್ತು ರೆಸ್ಟೋರೆಂಟ್‌, ಪಬ್‌ಗಳು ತೆರೆದಿರಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಹುತೇಕ ರಸ್ತೆಗಳ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಅಂಗಡಿ ಇಟ್ಟಿ¨ªಾರೆ. ಎಷ್ಟು ಫ‌ುಟ್‌ಪಾತ್‌ಗಳು ಒತ್ತುವರಿಯಾಗಿವೆ ಎಂಬ ಮಾಹಿತಿ ಕೂಡ ಇಲ್ಲ. ಹೀಗಾಗಿ ಕೂಡಲೇ ಇದರ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸುವ ಕೆಲಸ ಪ್ರಾರಂಭಿಸಿ. ಟ್ರಾಫಿಕ್‌ ಸಿಗ್ನಲ್‌ಗ‌ಳಲ್ಲಿ ಭಿûಾಟನೆ ಮಾಡುವವರನ್ನು ವಶಕ್ಕೆ ಪಡೆದು ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿ. ಈ ಕಾರ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯ ಸಹಕಾರ ಪಡೆಯಲು ಸೂಚಿಸಿದರು.

ಅನಧಿಕೃತ ಆಪ್ಟಿಕಲ್‌ ಫೈಬರ್‌ ಕೇಬಲ್‌ಗ‌ಳ ತೆರವು ಕಾರ್ಯ ಮುಂದುವರಿಸಬೇಕು. 8 ಸಾವಿರ ಕಿ.ಮೀ ಮಾರ್ಗದಲ್ಲಿ ಅನಧಿಕೃತ ಕೇಬಲ್‌ ತೆರವುಗೊಳಿಸಲಾಗಿದೆ. ಪ್ಲಾಸ್ಟಿಕ್‌ ಬ್ಯಾನ್‌ ಮಾಡಿದ್ದರೂ, ಕೆಲ ಕೈಗಾರಿಕೆಗಳು ಪ್ಲಾಸ್ಟಿಕ್‌ ತಯಾರಿಸುತ್ತಿ¨ªಾರೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

Advertisement

ಕೆರೆಗಳಿಗೆ ಕೊಳಚೆ ನೀರನ್ನು ಹರಿಬಿಡುವ ಕೈಗಾರಿಕೆ, ಕಾರ್ಖಾನೆಗಳಿಗೆ ನೋಟಿಸ್‌ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಬೀಗ ಹಾಕಿಸಿ. ರಾತ್ರೋರಾತ್ರಿ ಮಾಲಿನ್ಯನಿಯಂತ್ರಣ ಮಂಡಳಿಯವರು ಪೊಲೀಸರ ಸಹಕಾರದೊಂದಿಗೆ ಕೈಗಾರಿಕೆಗಳಿಗೆ ಬೀಗ ಹಾಕಿಸಿದರೆ ಕೊಳಚೆ ನೀರನ್ನು ಕೆರೆಗೆ ಬಿಡುವುದನ್ನು ನಿಯಂತ್ರಣಕ್ಕೆ ತರಬಹುದು ಎಂದು ಸಲಹೆ ನೀಡಿದರು.

ಧೂಮಪಾನ ನಿಷೇಧ ಕಾಯ್ದೆ ಅನ್ವಯ ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ದೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಈ ಸಂಬಂಧ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಕೆಳಮಹಡಿಯನ್ನು ವಾಹನ ನಿಲ್ದಾಣಕ್ಕೆ ಬಳಸದೇ ಆ ಜಾಗದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವುದನ್ನು ರದ್ದುಗೊಳಿಸಿ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿದರು.

ಮನೆ ನಿರ್ಮಿಸಲು ಅನುದಾನ ಬಳಸಿ: ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಬಿಬಿಎಂಪಿಗೆ ನೀಡಿರುವ ಅನುದಾನವನ್ನು ನಗರದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮನೆ ನಿರ್ಮಾಣ, ರಸ್ತೆ, ನೀರು, ಶಿಕ್ಷಣಕ್ಕೆ ಬಳಕೆ ಮಾಡುವಂತೆ ಡಾ.ಜಿ. ಪರಮೇಶ್ವರ್‌ ಸೂಚಿಸಿದರು.

ಎಸ್‌ಸಿಪಿ-ಟಿಎಸ್‌ಪಿ ಅಡಿಯಲ್ಲಿ ಎಸ್ಸಿ, ಎಸ್ಟಿಯವರಿಗಾಗಿ ಪ್ರತಿ ಇಲಾಖೆಗೂ ಅನುದಾನ ನೀಡಲಾಗುತ್ತಿದೆ. ಈ ಹಣ ಯಾವುದೇ ಕಾರಣಕ್ಕೂ ಬೇರೆ ಕೆಲಸಕ್ಕೆ ಬಳಸುವಂತಿಲ್ಲ. ಎಸ್ಸಿ, ಎಸ್ಟಿಯವರು ವಾಸವಿರುವ ಕಾಲೋನಿಗಳನ್ನು ಗುರುತಿಸಿ, ಆ ಭಾಗದಲ್ಲಿ ಅವರಿಗೆ ನಿವಾಸ, ಕುಡಿಯುವ ನೀರು, ಶಿಕ್ಷಣ ಇತರೆ ಮೂಲಸೌಕರ್ಯ ಒದಗಿಸಲು ಹಣ ಬಳಸಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next