Advertisement

ಪೂರ್ವಭಾವಿ ಸಿದ್ಧತೆ ಇಲ್ಲದೇ ಲಾಕ್‌ಡೌನ್‌

05:53 AM May 23, 2020 | Team Udayavani |

ಕೋಲಾರ: ಬಿಜೆಪಿ ಸರ್ಕಾರ ಪ್ರತಿ ಪಕ್ಷಗಳೊಂದಿಗೆ ಚರ್ಚಿಸದೇ ಅವೈಜ್ಞಾನಿಕವಾಗಿ ಲಾಕ್‌ಡೌನ್‌ ಘೋಷಿಸಿದ್ದರಿಂದಾಗಿ ಕೋವಿಡ್‌ 19ಗಿಂತ ಹೆಚ್ಚು ಮಂದಿ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಬಿ. ಕೆ.ಹರಿಪ್ರಸಾದ್‌  ಟೀಕಿಸಿದರು.

Advertisement

ನಗರದ ಹಾರೋಹಳ್ಳಿಯಲ್ಲಿ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರ ನಿವಾಸದ ಬಳಿ ಶುಕ್ರವಾರ ರಂಜಾನ್‌ ಪ್ರಯುಕ್ತ ಮುಸ್ಲಿಮರಿಗೆ ದಿನಸಿ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಏಳು ಬಾರಿ ಸಂಸದರಾಗಿದ್ದ  ಕೆ.ಎಚ್‌.ಮುನಿಯಪ್ಪ ಕೆಳ ಸಮುದಾಯದವರು. ಇದರಿಂದ ಅವರು ಇನ್ನೂ ಹಾಗೇ ಇದ್ದಾರೆ. ಅವರೇನಾದರೂ ಉನ್ನತ ಜಾತಿಯವರಾಗಿದ್ದರೇ ಈಗಾಗಲೇ ರಾಜ್ಯದ ಮುಖ್ಯಮಂತ್ರಿಯಾಗಿರುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

68 ಸಾವಿರ ಕೋಟಿ ರೂ. ಮನ್ನಾ: ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌, ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ 68 ಸಾವಿರ ಕೋಟಿ ರೂ. ಮನ್ನಾ ಮಾಡಿದೆ ಹೊರತಾಗಿ ಬಡ ರೈತರ ಕೃಷಿ ಸಾಲ, ಬಡ್ಡಿ ಮನ್ನಾ ಮಾಡುವಲ್ಲಿ  ವಿಫಲವಾಗಿದೆ ಎಂದು ಟೀಕಿಸಿದರು.

ಕೋಮು ಭಾವನೆಯಡಿ ರಾಜಕಾರಣ: ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಪ್ರಧಾನಿ ಮೋದಿಯವರು ಚುನಾವಣಾ ಸಂದರ್ಭಗಳಲ್ಲಿ ಹಿಂದೂ -ಮುಸ್ಲಿಂ ಎಂದು  ಕೋಮುವಾದವನ್ನು ಮುಂದೆ ಮಾಡಿ ರಾಜಕಾರಣ ಮಾಡುವ ಮೂಲಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳು ತ್ತಿದ್ದಾರೆ. ಆದರೆ, ಈ ಆಟ ಬಹಳ ದಿನ ನಡೆಯುವುದಿಲ್ಲ ಎಂದರು.

ಯಾಮಾರಿಸಿಯೇ ರಾಜಕಾರಣ: ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಮಾತನಾಡಿ, ಚುನಾವಣೆ ಬಂದರೆ ಪಾಕಿಸ್ತಾನವನ್ನು ತೋರಿಸಿ ಜನರನ್ನು ಬೆದರಿಸಿ ಬುಟ್ಟಿಗೆ ಹಾಕಿ ಕೊಳ್ಳುವ ಕಲೆಯನ್ನು ಮೋದಿ ಮಾಡುತ್ತಿದ್ದಾರೆ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

Advertisement

20 ಲಕ್ಷ ಕೋಟಿ ರೂ. ಸುಳ್ಳಿನ ಕಂತೆ: ಕಾಂಗ್ರೆಸ್‌ ಮುಖಂಡ ಸಲೀಂ ಅಹಮದ್‌ ಮಾತನಾಡಿ, ಮಾತಿನಿಂದಷ್ಟೇ ಮೋಡಿ ಮಾಡುವ ಮೋದಿ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ಗಳ ಸುಳ್ಳಿನ ಕಂತೆ ಕಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ಮಾಜಿ  ಸಚಿವ ಕೆ.ಎ. ನಿಸ್ಸಾರ್‌ ಆಹಮದ್‌, ಅಂಜುಮಾನ್‌ ಅಧ್ಯಕ್ಷ ಜಮೀರ್‌ ಆಹಮದ್‌ ಹಾಗೂ ನಗರಸಭಾ ಸದಸ್ಯ ಬಿ.ಎಂ. ಮುಬಾರಕ್‌ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎಲ್‌.ಎ.ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತ ನಾಡಿ,  ಊರುಬಾಗಿಲು ಶ್ರೀನಿವಾಸ್‌ ನಿರೂಪಿಸಿದ ವೇದಿಕೆಯಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಕೆಪಿಸಿಸಿ ವಕ್ತಾರೆ ವಸಂತ ಕವಿತ ಕೆ.ಸಿ.ರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್‌  ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next