Advertisement

ಲಾಕ್‌ಡೌನ್‌ ಅವಧಿಯಲ್ಲಿ 10 ಲಕ್ಷ ರೂ. ಕೂಲಿ!

09:24 PM Jun 23, 2021 | Team Udayavani |

ಕುಂದಾಪುರ: ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲರೂ ಕೆಲಸ  ಇಲ್ಲ ಎಂದು ಕೈಕಟ್ಟಿ ಕೂತಿದ್ದರೆ ಸಿದ್ದಾಪುರ ಪಂಚಾಯತ್‌ ಎರಡು ತಿಂಗಳಲ್ಲಿ 10 ಲಕ್ಷ ರೂ.ಗಳ ಕೆಲಸ ನೀಡಿ ಕೂಲಿ ಪಾವತಿಸಿದೆ!  ನರೇಗಾ ಯೋಜನೆಯಲ್ಲಿ ಕೆರೆ, ತೋಡಿನ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ, ನೀರು ಸಂಗ್ರಹಕ್ಕೆ ಚೊಕ್ಕದಾದ ವ್ಯವಸ್ಥೆ, ಗ್ರಾಮದ ಜನರಿಗೆ ಭರ್ತಿ ಸಂಬಳವೂ ದೊರೆಯುವಂತೆ ಮಾಡಿದೆ.

Advertisement

ಕೆಲಸ:

ಲಾಕ್‌ಡೌನ್‌ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡ ಪಂಚಾಯತ್‌ನ ಉತ್ಸಾಹಿ ತಂಡ ಅದಕ್ಕಾಗಿ ಒಂದಷ್ಟು ಯುವಕರನ್ನು ಒಟ್ಟುಗೂಡಿಸಿ ನರೇಗಾದಡಿ ಸಿದ್ದಾಪುರ ಕಾಶಿಕಲ್ಲು ಕೆರೆಯಿಂದ ಜಡ್ಡಿನಬೈಲು ಮತ್ತು ಛತ್ರಿ ಕೆರೆಯಿಂದ ಹಾರ್ದಳ್ಳಿಯವರೆಗಿನ ತೋಡಿನ ಹೂಳೆತ್ತಲಾಯಿತು. ಕೂಡ್ಗಿ ಯಲ್ಲಿ ಮದಗದಿಂದ ಹೂಳೆತ್ತುವ ಮೂಲಕ ನೀರು ಸಂಗ್ರಹವಾಗುವಂತೆ ಮಾಡಲಾಗಿದೆ. ಕಾಶಿಕಲ್ಲು ಕೆರೆಯಿಂದ ಹರಿವ ತೋಡಿನ ಹೂಳೆತ್ತಲು 22 ಜನರು 286 ಮಾನವ ದಿನಗಳ ಕೆಲಸ ಮಾಡಿದ್ದಾರೆ.

ಛತ್ರಿಕೆರೆಯಿಂದ ತೋಡು ಹೂಳೆತ್ತಲು 26 ಜನ 335 ಮಾನವ ದಿನಗಳ ಕೆಲಸ ಮಾಡಿದ್ದಾರೆ. ಕೋಡ್ಗಿ ಮದಗ ಹೂಳೆತ್ತಲು 18 ಜನ 500 ಮಾನವ ದಿನಗಳ ಕೆಲಸ ಮಾಡಿದ್ದಾರೆ. ಒಟ್ಟು 66 ಜನರಿಗೆ 1,121 ಮಾನವ ದಿನಗಳ ಕೆಲಸ ನೀಡಿದಂತಾಗಿದೆ.

ಸ್ವಚ್ಛತೆಗೆ ಆದ್ಯತೆ:

Advertisement

ಗ್ರಾ.ಪಂ. ವ್ಯಾಪ್ತಿಯಲ್ಲಿ 40 ಬಚ್ಚಲು ಗುಂಡಿ ನಿರ್ಮಾಣ ಮಾಡಲಾಗಿದ್ದು, 200  ಬಚ್ಚಲು ಗುಂಡಿ ನಿರ್ಮಿಸುವ ಮೂಲಕ ಗ್ರಾಮ ಸ್ವತ್ಛತೆ ಗುರಿ ಹೊಂದಲಾಗಿದೆ. ಜಲಶಕ್ತಿ ಅಭಿಯಾನದ ಮೂಲಕ ಕೆರೆ ಹೂಳೆತ್ತುವುದು, ತೋಡು ಹೂಳೆತ್ತುವುದು, ಕೊಳವೆ ಬಾವಿ ಮರುಪೂರಣ, ಸಮುದಾಯ ಅರಣ್ಯ ನಿರ್ಮಾಣ ಮೊದಲಾದವುಗಳ ಗುರಿ ಹೊಂದಲಾಗಿದೆ. ಈ ವರ್ಷಕ್ಕೆ 1.4 ಕೋ.ರೂ.ಗಳ ಕಾಮಗಾರಿ ಮಾಡುವ ಇರಾದೆ ಹೊಂದಲಾಗಿದೆ ಎನ್ನುತ್ತಾರೆ  ಗ್ರಾಮಸ್ಥ ಶ್ರೀಕಾಂತ್‌ ನಾಯಕ್‌ ಸಿದ್ದಾಪುರ.

2019-20ರಲ್ಲಿ 4,751 ಮಾನವ ದಿನಗಳ ಕೆಲಸ ಆಗಿ 10 ಲಕ್ಷ ರೂ. ಕೂಲಿ ನೀಡಲಾಗಿತ್ತು. 2020-21ರಲ್ಲಿ 5,803 ಮಾನವ ದಿನಗಳ ಕೆಲಸ ಆಗಿ 14 ಲಕ್ಷ ರೂ. ಕೂಲಿ ನೀಡಲಾಗಿತ್ತು. ಈ ವರ್ಷ ಎರಡೇ ತಿಂಗಳಲ್ಲಿ  3,498 ಮಾನವ ದಿನಗಳ ಕೆಲಸ ಆಗಿ 10.23 ಲಕ್ಷ ರೂ. ಕೂಲಿ ನೀಡಲಾಗಿದೆ. 1.28 ಲಕ್ಷ ರೂ.ಗಳನ್ನು ಸಾಮಗ್ರಿಗೆ ವ್ಯಯಿಸಲಾಗಿದೆ.

ಊರ ಯುವಕರು ಸೇರಿ  ಮದಗದ ಹೂಳೆತ್ತುವ ಕೆಲಸ ಮಾಡಿದರು.   ನಮ್ಮ ಊರಿನ ಒಂದು  ಮದಗ ಮಳೆಗಾಲದಲ್ಲಿ ನೀರು ತುಂಬಿ ನೀರಿಂಗಿಸುವ  ಕಾರ್ಯಕ್ರಮದಲ್ಲಿ ನಮ್ಮನ್ನು ತೊಡಗಿಸಿಕೊಂಡ  ಸಾರ್ಥಕತೆ ನಮಗಿದೆ.  –ಶೇಖರ ಕುಲಾಲ್‌,  ಗ್ರಾ. ಪಂ. ಅಧ್ಯಕ್ಷರು,  ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next