ಮದ್ಯ ಮಾರಾಟ ಸ್ಥಗಿತಗೊಂಡ ಅನಂತರದ ಹತ್ತು ದಿನಗಳಲ್ಲಿ ಅಪರಾಧ, ಅಪಘಾತ ಪ್ರಕರಣ ಸಂಖ್ಯೆಯಲ್ಲಿನ ಇಳಿಕೆ ಅಂಶ ಇದನ್ನು ದೃಢಿಕರಿಸುತ್ತಿದೆ.
Advertisement
ಮನೆಗಳಲ್ಲಿ ನೆಮ್ಮದಿ ಹೆಚ್ಚುಮದ್ಯ ಸೇವನೆಯಿಂದ ಕೌಟುಂಬಿಕ ಕಲಹ ಗಳು ಹೆಚ್ಚಾಗಿದ್ದ ಕುಟುಂಬಗಳಲ್ಲಿ ಈಗ ನೆಮ್ಮದಿ ಮೂಡಿದೆ. ಪತಿ-ಪತ್ನಿ, ಮಕ್ಕಳ ನಡುವಿನ ಸಂಘರ್ಷ ಕಡಿಮೆಯಾಗಿದೆ.
Related Articles
ಅವಿಭಜಿತ ಜಿಲ್ಲೆಯಲ್ಲಿನ ಠಾಣೆಗಳಲ್ಲಿ ಪ್ರತಿ ದಿನ ಪ್ರಕರಣ ದಾಖಲಾಗುತ್ತಿತ್ತು. ಪತಿ, ಪತ್ನಿ ಜಗಳ, ನೆರೆ ಹೊರೆ ಜಗಳ ಹೀಗೆ ನಾನಾ ಪ್ರಕರಣಗಳು ಕಂಡು ಬರುತಿದ್ದವು. ಇದರಲ್ಲಿ ಮದ್ಯ ಸೇವನೆಯಿಂದಲೂ ಇಂತಹ ಅಪರಾಧ ಕಂಡು ಬಂದ ದೃಷ್ಟಾಂತಗಳಿವೆ. ಈಗ ಆ ಪ್ರಮಾಣ ಶೂನ್ಯದತ್ತ ಸಾಗಿದೆ. ಅಕ್ರಮ ಮದ್ಯ ತಯಾರಿ ಹೊರತುಪಡಿಸಿ ಉಳಿದಂತೆ ಮದ್ಯಸೇವನೆ ಪರಿಣಾಮದ ಅಪರಾಧ ಪ್ರಕರಣ ಗಳು ನಿಯಂತ್ರಣಕ್ಕೆ ಬಂದಿದೆ ಎನ್ನುತ್ತವೆ ಪೊಲೀಸ್ ಇಲಾಖೆಯ ಅಂಕಿ ಅಂಶಗಳು.
Advertisement
ಅಪಘಾತ ಇಳಿಕೆಮಾಣಿ-ಮೈಸೂರು ರಸ್ತೆಯಲ್ಲೇ 3 ತಿಂಗಳಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಾಣ ತೆತ್ತಿದ್ದರು. ಇದರಲ್ಲಿ ಶೇ.25ರಿಂದ 30ರಷ್ಟು ಮದ್ಯ ಸೇವಿಸಿದ ಚಾಲನೆಯಿಂದ ಆಗಿದೆ. ಉಳಿದಂತೆ ಅತಿ ವೇಗ, ಅಜಾಗರೂಕತೆಗಳಿಂದ ಅಪಘಾತಗಳು ಸಂಭವಿಸಿವೆ. ಕಳೆದ 10 ದಿನಗಳಿಂದ ಇದು ಪೂರ್ಣ ನಿಯಂತ್ರಣದಲ್ಲಿದೆ. ಜತೆಗೆ ವಾಹನ ಸಂಚಾರ ನಿರ್ಬಂಧದ ಹಿನ್ನೆಲೆ ಕೂಡ ಉಳಿದ ಅಪಘಾತ ಪ್ರಕರಣಗಳು ಕೂಡ ಇಳಿಕೆ ಕಂಡಿವೆ.