ಮೈಸೂರು: ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ಸಡಿಲಿಕೆ ಮಾಡಿ, ಭಾನುವಾರ ಮಾತ್ರ ಲಾಕ್‌ಡೌನ್ ಘೋಷಣೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಕೊರೊನಾ ತಡೆಗೆ ಸಂಪೂರ್ಣ ವಿಫಲವಾಗಿದೆ.
ದಿನಕ್ಕೆ ನೂರರ ಮೇಲೆ ಪ್ರಕರಣಗಳು ಬರುತ್ತಿವೆ, ಇದಕ್ಕೆ ಕಾರಣ ಮಹಾರಾಷ್ಟ್ರದಿಂದ ಬರು ವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಂದ ರ್ಭದಲ್ಲಿ ಸರ್ಕಾರ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ, ಕೇವಲ ಪೊಲೀಸರ ನಿಯೋಜನೆ ಮಾಡಿದೆ, ಗಡಿಗಳಲ್ಲಿ ಯಾರಿಗೂ ಆರೋಗ್ಯ ತಪಾಸಣೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಬೇಜವಾಬ್ದಾರಿ ಹೇಳಿಕೆ: ಜ್ಯುಬಿಲಿಯಂಟ್ ಸರ್ಕಾರಕ್ಕೆ ನೀಡಿರುವ ಕಿಕ್ ಬ್ಯಾಕ್ ಧ್ರುವನಾರಾಯಣ್ ನೋಡಿರಬೇಕು ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಒಬ್ಬ ಜಿಲ್ಲಾ ಉಸ್ತುವಾರಿ ಸಚಿವನಾಗಿ ತನಿಖೆಯನ್ನು ನಡೆಸಲಾರದೇ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ.
ಜ್ಯುಬಿಲಿ ಯಂಟ್ 10 ಗ್ರಾಮಗಳನ್ನು ದತ್ತು ಪಡೆದು 50 ಸಾವಿರ ದಿನಸಿ ಕಿಟ್ ನೀಡಿದ್ದನ್ನು ಸರ್ಕಾರವೇ ಹೇಳಿಕೆ ನೀಡಿತ್ತಲ್ಲ, ಅದನ್ನೇ ಕಿಕ್‌ಬ್ಯಾಕ್ ಎಂದಿದ್ದೇನೆ. ಇದನ್ನು ಅರ್ಥ ಮಾಡಿ ಕೊಳ್ಳದ ಸಚಿವರಿಂದ ಇನ್ನೇನು ಮಾಡಲು ಸಾಧ್ಯ ಎಂದು ಹೇಳಿದರು. ದೆಹಲಿಯಲ್ಲಿ ತಬ್ಲೀ ಪ್ರಕರಣ ಬಂದ ತಕ್ಷಣ ದೆಹಲಿ ಸರ್ಕಾರ ಮತ್ತು ಪೊಲೀಸರ ಮೇಲೆ ಕೇಸ್ ದಾಖಲಿಸಲು ನಿಮಗೆ ಹಕ್ಕಿದೆ.
ಆದರೆ, ಮೈಸೂರಿನಲ್ಲಿ 90 ಪ್ರಕರಣ ಗಳ ಪೈಕಿ 74 ಜ್ಯುಬಿಲಿ ಯಂಟ್ ಪ್ರಕರಣ ಗಳಿದ್ದರೂ ಯಾವುದೇ ಕ್ರಮವಿಲ್ಲ, ಅಲ್ಲದೇ ಶಾಸಕರೇ ದಿ® ಕ್ಕೊಂದು ಹೇಳಿಕೆ ನೀಡುತ್ತಾ ಇದ್ದಾರೆ. ಇದನ್ನು ಬಿಟ್ಟು ಯಾರಿಂದ ಲಾದರೂ ತನಿಖೆ ಮಾಡಿಸಿ ಇಲ್ಲೂ ನಿಮ್ಮದೇ ಸರ್ಕಾರ, ಕೇಂದ್ರದಲ್ಲೂ ನಿಮ್ಮದೇ ಸರ್ಕಾರವಿದೆ ಒಟ್ಟಿನಲ್ಲಿ ಜನರಿಗೆ ಸತ್ಯಾಂಶ ತಿಳಿಯಲಿ ಎಂದು ಹೇಳಿದರು.