Advertisement

Dhruva Sarja: ಮಾರ್ಟಿನ್‌ ನನ್ನ ಕೆರಿಯರ್‌ನ ಬೆಸ್ಟ್‌  ಆ್ಯಕ್ಷನ್‌

09:35 AM Oct 08, 2024 | Team Udayavani |

ಭರ್ಜರಿ ಆ್ಯಕ್ಷನ್‌ ಇರುವ “ಮಾರ್ಟಿನ್‌’ ರಿಲೀಸ್‌ಗೆ ರೆಡಿಯಾಗಿದೆ. ನಿಮ್ಮ ಎಕ್ಸೈಟ್‌ಮೆಂಟ್‌ ಹೇಗಿದೆ?

Advertisement

– ನಿಜ ಹೇಳಬೇಕೆಂದರೆ ನಾನಂತೂ ಈ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆಯಿಂದ ಎದುರು ನೋಡುತ್ತಿದ್ದೇನೆ. ಅದಕ್ಕೆ ಕಾರಣ ಸಿನಿಮಾ ಕಥೆ ಹಾಗೂ ಮೇಕಿಂಗ್‌. ಇದು ರೆಗ್ಯುಲರ್‌ ಶೈಲಿ ಸಿನಿಮಾವಲ್ಲ. ಕಥೆ, ಮೇಕಿಂಗ್‌, ಆ್ಯಕ್ಷನ್‌, ಸಾಂಗ್‌, ಪರ್‌ಫಾರ್ಮೆನ್ಸ್‌ ಎಲ್ಲವೂ ನೆಕ್ಸ್ಟ್ ಲೆವೆಲ್‌ಗಿದೆ.

ಮಾರ್ಟಿನ್‌ ಆ್ಯಕ್ಷನ್‌ ಬಗ್ಗೆ ಹೇಳಿ?

– ನನ್ನ ಕೆರಿಯರ್‌ನ ಒನ್‌ ಆಫ್ ದಿ ಬೆಸ್ಟ್‌ ಆ್ಯಕ್ಷನ್‌ ಸಿನಿಮಾ “ಮಾರ್ಟಿನ್‌’ ಎಂದರೆ ತಪ್ಪಲ್ಲ. ಭರ್ಜರಿಯಾದ 4 ಫೈಟ್‌ ಮಾಡಿದ್ದೇನೆ. ಒಂದಕ್ಕಿಂತ ಒಂದು ಡಿಫ‌ರೆಂಟ್‌ ಆಗಿದೆ. ಮುಖ್ಯವಾಗಿ ನಾನು ತಂಡಕ್ಕೆ ನೆನಪು ಮಾಡಿಕೊಳ್ಳಲೇಬೇಕು. ಅವರೆಲ್ಲರೂ ಕಷ್ಟಪಟ್ಟಿದ್ದಾರೆ. ಬೆಂಗಳೂರು, ಮುಂಬೈ, ವೈಜಾಗ್‌ಗಳಲ್ಲಿ ಸಿನಿಮಾದ ಆ್ಯಕ್ಷನ್‌, ಚೇಸ್‌ ಮಾಡಿದ್ದೇವೆ. ಚಿತ್ರದಲ್ಲಿ ಕ್ಲೈಮ್ಯಾಕ್ಸ್‌ ವೇಳೆ ಬರುವ ಫೈಟ್‌ ಸಾಹಸ ಪ್ರಿಯರಿಗೆ ಖುಷಿ ಕೊಡಲಿದೆ.

ಸಾಹಸ ದೃಶ್ಯಗಳ ಬಜೆಟ್‌ ದುಬಾರಿಯಾಗಿದೆಯಂತೆ?

Advertisement

– ದುಬಾರಿ ಅನ್ನೋದಕ್ಕಿಂತ ನಿರ್ಮಾಪಕರು ಯಾವುದಕ್ಕೂ ಕಡಿಮೆ ಮಾಡಿಲ್ಲ. ಏನು ಕೇಳಿದರೂ ಅದನ್ನು ಕೊಟ್ಟಿದ್ದಾರೆ. ಈ ತರಹದ ಸಿನಿಮಾ ಮಾಡೋಕೂ ಒಂದು ಗಟ್ಸ್‌ ಬೇಕು. ಅಂತಿಮವಾಗಿ ಸಿನಿಮಾ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ರಾಜಿಯಾಗಿಲ್ಲ. ಅವರ ಈ

ಸಿನಿಮಾ ಪ್ರೀತಿಗಾಗಿ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲ್ಲಬೇಕು.

ಧ್ರುವ ಬಗ್ಗೆ ಏನಂತೀರಿ?

– ಮೊದಲ ಸಿನಿಮಾದಿಂದಲೇ ಅವರ ಜೊತೆ ಕೆಲಸ ಮಾಡಿದ್ದೇನೆ. ಅಂತಹ ಒಬ್ಬ ಕಲಾವಿದ ಸಿಕ್ಕಿಬಿಟ್ಟರೆ ನಾವೇನು ಕಲ್ಪನೆ ಮಾಡಿಕೊಂಡಿರುತ್ತೇವೋ ಅದನ್ನು ಸುಲಭವಾಗಿ ಸಾಧಿಸಬಹುದು. ಅಂತಹ ಸಪೋರ್ಟ್‌ ಧ್ರುವ ಅವರಿಂದ ಸಿಗುತ್ತದೆ. ಏನು ಬೇಕು ಅದನ್ನು ನೀಡುವ ಜೊತೆಗೆ ನಿರ್ಮಾಪಕರನ್ನು ಕನ್ವಿನ್ಸ್‌ ಮಾಡಿ, ಚಿತ್ರ ಚೆನ್ನಾಗಿ ಬರುವಂತೆ ನೋಡಿಕೊಳ್ಳುತ್ತಾರೆ.

ಹೊರಗಡೆ ಮಾರ್ಟಿನ್‌ ಹವಾ ಹೇಗಿದೆ?

– ಕರ್ನಾಟಕದ ಜೊತೆಗೆ ಹೊರಗಡೆಯೂ ಮಾರ್ಟಿನ್‌ಗಾಗಿ ಕಾಯುತ್ತಿದ್ದಾರೆ. ಅದರಲ್ಲೂಟ್ರೇಲರ್‌ ಝಲಕ್‌ ನೋಡಿದ ಮೇಲಂತೂ ಸಿನಿಮಾದ ಕ್ರೇಜ್‌ ಹೆಚ್ಚಾಗಿದೆ. ಮುಂಬೈನಲ್ಲಿ “ಮಾರ್ಟಿನ್‌’ಗೆ ಸ್ವಲ್ಪ ಹೆಚ್ಚೇ ಡಿಮ್ಯಾಂಡ್‌ ಇದೆ.

ಧ್ರುವ ಅಭಿಮಾನಿಗಳಿಗೆ ಏನು ಹೇಳುತ್ತೀರಿ?

– ದಸರಾ ಹಬ್ಬದ ಸ್ಪೆಷಲ್‌ ಗಿಫ್ಟ್ ಇದು. ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ಇನ್ನು ಅಭಿಮಾನಿಗಳು ಕೈ ಹಿಡಿದು ನಡೆಸಬೇಕು.

 

Advertisement

Udayavani is now on Telegram. Click here to join our channel and stay updated with the latest news.

Next