Advertisement
ಜಿಲ್ಲೆ ಹಸುರು ವಲಯವಾಗಿ ಪರಿವರ್ತನೆ ಯಾದ ಅನಂತರ ಗ್ರಾಮೀಣ ಭಾಗದಲ್ಲಿ ನಿರ್ಮಾಣ ಹಂತದ ಕೆಲಸಗಳು, ಕೃಷಿ ಹೀಗೆ ರಿಯಾಯಿತಿ ಕ್ಷೇತ್ರಗಳ ಚಟುವಟಿಕೆಗಳು ಆರಂಭಗೊಂಡಿವೆ. ಇದನ್ನು ಹೊರತುಪಡಿಸಿ ಜನಜೀವನ ಲಾಕ್‌ಡೌನ್‌ನ ಈ ಹಿಂದಿನ ಸ್ಥಿತಿಯಲ್ಲೇ ಮುಂದುವರಿದಿತ್ತು.
ಲಾಕ್‌ಡೌನ್ ಸಡಿಲಿಸಿದ್ದರೂ ಬೇಕಾಬಿಟ್ಟಿ ಓಡಾಟಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳು ಮುಂಚಿತವಾಗಿಯೇ ಸೂಚಿಸಿದ್ದರು. ನಿಯಮವನ್ನು ಮೀರಿದವರ ವಿರುದ್ಧ ಕ್ರಮ ಜರಗಿಸುವುದಾಗಿಯೂ ತಿಳಿಸಿದ್ದಾರೆ.ಜನರು ಅದನ್ನು ಪಾಲಿಸಿದ್ದಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಪೊಲೀಸರು ಕೂಡ ನಗರದ ಅಲ್ಲಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನ ಗಳನ್ನು ತಪಾಸಣೆ ನಡೆಸುತ್ತಿದ್ದರು.
Related Articles
ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡ ಕಾಮಗಾರಿ ಸಹಿತ ಇನ್ನಿತರ ಕಾಮಗಾರಿಗಳು ಪ್ರಾರಂಭಗೊಂಡಿದ್ದವು. ಸ್ವತ್ಛತೆಗೆ ಧಕ್ಕೆ ಬಾರದಂತೆ ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿಯೂ ಕಾರ್ಯ ಚಟುವಟಿಕೆಗಳು ಸರಕಾರ ನೀಡಿದ ಸೂಚನೆಗನುಸಾರ ಬೆಳಗ್ಗಿನಿಂದ ಸಂಜೆಯ ವರೆಗೆ ನಡೆದವು.
ಎಲೆಕ್ಟ್ರಿ àಶಿಯನ್, ಪ್ಲಂಬರ್‌ಗಳಿಗೆ ಅವಕಾಶ ಎಲೆಕ್ಟ್ರಿಶೀಯನ್ ಮತ್ತು ಪ್ಲಂಬರ್‌ಗಳು ಮನೆಗಳಿಗೆ ಹೋಗಿ ಕೆಲಸ ನಿರ್ವಹಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ.
Advertisement
ಕೃಷಿ, ಕಟ್ಟಡ ನಿರ್ಮಾಣ, ಅಭಿವೃದ್ಧಿ ಕೆಲಸಗಳ ಸಹಿತ ಕೆಲವು ಚಟುವಟಿಕೆ ಗಳಿಗೆ ಅವಕಾಶ ನೀಡಲಾಗಿದ್ದು, ಈ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲೇ ಬೇಕು. ಅದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅವರು ಚಟುವಟಿಕೆಗಳ ಮೇಲೆ ಕಣ್ಣಿಡಲಿದ್ದಾರೆ.
– ಜಿ. ಜಗದೀಶ್ ಉಡುಪಿ ಜಿಲ್ಲಾಧಿಕಾರಿ