Advertisement

ಲಾಕ್‌ಡೌನ್‌ ಸಡಿಲಿಕೆ ಸರಿಯಲ್ಲ

12:53 PM Apr 25, 2020 | mahesh |

ಶ್ರೀರಂಗಪಟ್ಟಣ: ಲಾಕ್‌ಡೌನ್‌ ಸಡಿಲಿಕೆ ವಿಚಾರದಲ್ಲಿ ಸರ್ಕಾರ ಜನಸಾಮಾನ್ಯರ ಪ್ರಾಣದ ಜೊತೆ ಚಲ್ಲಾಟವಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಕೆಆರ್‌ಎಸ್‌ನಲ್ಲಿ ಬಡವರಿಗೆ ದಿನಸಿ ಹಾಗೂ ತರಕಾರಿ ವಿತರಿಸಿ ಮಾತನಾಡಿದ ಅವರು, ಆರೋಗ್ಯದ ಸಮಸ್ಯೆಯನ್ನು ಸರ್ಕಾರ ಲಘುವಾಗಿ ತೊಗೆದುಕೊಳ್ಳದೆ ಮುಂಜಾಗ್ರತೆ ವಹಿಸುವುದು ಅತ್ಯಗತ್ಯ. ಇದೊಂದು ಸಾಂಕ್ರಾಮಿಕ ಸೋಂಕು ಎಂದು ಹೇಳಿದರು.

Advertisement

ರಾಮನಗರಕ್ಕೆ ಪಾದರಾಯನಪುರ ಆರೋಪಿಗಳ ಶಿಫ್ಟ್ ವಿಚಾರದಲ್ಲಿ ಆರಂಭದಲ್ಲೇ ಕರೆತರುವುದನ್ನು ವಿರೋಧ ಮಾಡಿದ್ದೆ. ಈ ಬಗ್ಗೆ ಸರ್ಕಾರಕ್ಕೂ ತಿಳಿಸಿದ್ದೇನೆ. ಮುಖ್ಯಮಂತ್ರಿ, ಗೃಹಮಂತ್ರಿ ಶಿಫ್ಟ್ ಮಾಡದಿರಲು ಇದಕ್ಕೆ ಒಪ್ಪಿದ್ದರೂ ರಾಮನಗರಕ್ಕೆ ಅವರನ್ನು ಕರೆತರುವ ಪ್ರಮೇಯವೇನಿತ್ತು. ಬೆಂಗಳೂರಿನಲ್ಲಿ ಕ್ವಾರಂಟೈನಲ್ಲಿಟ್ಟು ನಿಗಾ ವಹಿಸಬಹುದಿತ್ತಲ್ಲವಾ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈಗ ರಾಮನಗರ ಕಾರಾಗೃಹವನ್ನು ಸಂಪೂರ್ಣ ಕ್ವಾರಂಟೈನ್‌ ಮಾಡಬೇಕಿದೆ.

ಕಾರಾಗೃಹದ ಸಿಬ್ಬಂದಿ ಮೇಲೂ ನಿಗಾ ವಹಿಸಬೇಕಿದೆ. ಸರ್ಕಾರವನ್ನು ತಪ್ಪು ದಾರಿಗೆ ಎಳೆದ ಅಧಿಕಾರಿಗಳ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದರು. ಮಂಡ್ಯದಲ್ಲಿ ಆಶಾ ಕಾರ್ಯಕರ್ತೆ ಮೇಲೆ ದೌರ್ಜನ್ಯ ನಡೆದಿದೆ. ಆಶಾ ಕಾರ್ಯಕರ್ತೆಯನ್ನು ಸರ್ಕಾರ ಇಲ್ಲಿವರೆಗೆ ಭೇಟಿ ಮಾಡಿ ವಿಚಾರಿಸಿಲ್ಲ. ಪತ್ರಿಕೆಗಳಿಗೆ ಹೇಳಿಕೆ ನೀಡುವುದಕ್ಕಷ್ಟೇ ಸೀಮಿತವಾಗಿರುವ ಸರ್ಕಾರ, ಕೋವಿಡ್ ಶ್ರಮಿಕರ ಮೇಲೆ ದೌರ್ಜನ್ಯವೆಸಗಿದರೆ 3 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ್ದರೂ ಪೊಲೀಸ್‌ ಠಾಣೆಯಲ್ಲಿ ಬೇಲ್‌ ನೀಡಿ ಆರೋಪಿಗಳನ್ನು  ಮನೆಗೆ ಕಳುಹಿಸಿದ್ದಾರೆ.

ಪರಿಜ್ಞಾನವಿದೆಯಾ: ಸರ್ಕಾರ ಮೈ
ಮರೆತಿಲ್ಲವೆಂದಿದ್ದ ಡಿಸಿಎಂ ಅಶ್ವತ್ಥನಾರಾಯಣಗೌಡ ಕಾರಾಗೃಹದಲ್ಲಿರುವ ಕೈದಿಗಳನ್ನು ತಪಾಸಣೆ ಮಾಡಿ ಶಿಫ್ಟ್ ಮಾಡಲಾಗಿದೆ ಎಂಬ ಹೇಳಿಕೆ ನೀಡುತ್ತಾರೆ. ಸರ್ಕಾರಕ್ಕೆ ಮೆದುಳೇ ಇಲ್ಲ. ಕೋವಿಡ್ ಹೆಸರಿನಲ್ಲಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್‌, ಶಾಸಕ ರವೀಂದ್ರ ಶ್ರೀಕಂಠಯ್ಯ ಟಿ.ನರಸೀಪುರ ಶಾಸಕ ಅಶ್ವಿ‌ನ್‌ ಕುಮಾರ್‌, ಜಿಪಂ ಸದಸ್ಯೆ ಸವಿತಾ ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.

ಆಶಾ ಕಾರ್ಯಕರ್ತೆ ಯೋಗಕ್ಷೇಮ ವಿಚಾರಿಸಿದ ಎಚ್ಡಿಕೆ
ತಾಲೂಕಿನ ಹುರುಳಿ ಕ್ಯಾತನಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಶಾ ಕಾರ್ಯಕತೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗ್ರಾಮದಲ್ಲಿ ಇನ್ನು ಮುಂದೆ ನಿಮಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದೆಂದರು. ಈ ಸಂಬಂಧ ಗೃಹ ಸಚಿವರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next