Advertisement
ಬಾಪೂಜಿನಗರಕ್ಕೆ ಹೊಂದಿ ಕೊಂಡೇ ಗಾಳಿ ಆಂಜನೇಯ ದೇವಸ್ಥಾನ ವಾರ್ಡ್ ಇದೆ. ಅರೀತಿ, ಹಂಪಿನಗರ ಪಕ್ಕದಲ್ಲೇ ಅತ್ತಿರಾಧಾಕೃಷ್ಣ ದೇವಸ್ಥಾನ ವಾಡ್‌ಸಂಜಯನಗರ ವಾರ್ಡ್ ದೂರದಲ್ಲಿರುವ ತಮ್ಮೊಂದಿಗೆ ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಗಂಟುಮೂಟೆ ಕಟ್ಟಿಕೊಂಡು ತವರಿನತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ, ತಾವು ಹೋಗುವಂತಿಲ್ಲ. ಕೂಡಿ ಆಡಿದ ವಾರಿಗೆಯ ಕೂಲಿ ಕಾರ್ಮಿಕರ ಮಕ್ಕಳು, ಕೆಲಸ ಮುಗಿಸಿಕೊಂಡು ಜೋಪಡಿ ಅಂಗಳದಲ್ಲಿ ಹರಟುತ್ತಿದ್ದ ಕಾರ್ಮಿಕ ಮಹಿಳೆಯರಿಗೆ ಈ ಪ್ರತ್ಯೇಕತೆ ನುಂಗಲಾರದ ತುತ್ತಾಗಿದೆ.
Related Articles
ಬೆಂಗಳೂರು: ಕಳೆದ ನಾಲ್ಕು ದಿನಗಳಲ್ಲಿ ರಾಜಧಾನಿಯಿಂದ ಸರಿಸುಮಾರು ಲಕ್ಷ ಕಾರ್ಮಿಕರು ಊರುಗಳಿಗೆ ತಲುಪಿದ್ದಾರೆ ಎಂದು ಅಂದಾಜಿಸಲಾಗಿದೆ. ಮೇ 2ರಿಂದ ಬೆಂಗಳೂರಿನಲ್ಲಿರುವ ಕಾರ್ಮಿಕರನ್ನು ಊರಿಗೆ ಕಳುಹಿಸುವ ಪ್ರಕ್ರಿಯೆ ಸರ್ಕಾರ ಆರಂಭಿಸಿತ್ತು. ಮೊದಲ ದಿನ 192 ಬಸ್‌ಗಳಲ್ಲಿ 5,760 ಕಾರ್ಮಿಕರನ್ನು ಊರಿಗೆ ಕಳುಹಿಸಲಾಗಿತ್ತು. ಮೇ 3ರಂದು 25,890 ಹಾಗೂ
4ರಂದು 28,238 ಮತ್ತು 5ರಂದು 24 ಸಾವಿರ ಕಾರ್ಮಿಕರನ್ನು ಉಚಿತವಾಗಿ ಕಳುಹಿಸಲಾಗಿದೆ. ಬುಧ ವಾರ ಈ ಸಂಖ್ಯೆ ಕಡಿಮೆಯಾಗಿದ್ದು, ಸುಮಾರು 250 ಬಸ್‌ಗಳಲ್ಲಿ 7 ಸಾವಿರ ಜನ ತೆರಳಿದ್ದಾರೆ.
Advertisement
ಈ ಮಧ್ಯೆ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಬ್ಯಾಂಕ್ ಖಾತೆಗೆ 2 ಸಾವಿರ ರೂ. ನೇರ ವರ್ಗಾವಣೆಯ ಜತೆಗೆ ಹೆಚ್ಚುವರಿಯಾಗಿ 3 ಸಾವಿರ ರೂ.ಗಳನ್ನು ಒದಗಿಸಲು ನಿರ್ಧರಿಸಿದೆ. ಇದರಿಂದ ಬಹುತೇಕ ಕಾರ್ಮಿಕರು ಬೆಂಗಳೂರಿನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. “ಸರ್ಕಾರದಿಂದ ಸೂಕ್ತ ಹಣಕಾಸಿನ ಸೌಲಭ್ಯದ ಭರವಸೆ ಬಂದಿದೆ. ಆದರೆ, ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. ಸ್ವಲ್ಪ ದಿನ ಇಲ್ಲೇ ಇರುತ್ತೇವೆ. ಕೆಲಸ ಆರಂಭವಾದರೆ ಜೀವನವಾದರೂ ನಡೆಸಬಹುದು. ಊರಲ್ಲೂ ಕಷ್ಟ ಇದೆ. ಅಲ್ಲಿ ಹೋದರೂ ಕೆಲಸ ಮಾಡಲು ಏನೂ ಇಲ್ಲ ಹೀಗಾಗಿ ಇಲ್ಲಿಯೇ ಸ್ವಲ್ಪ ದಿನ ಇರುತ್ತೇವೆ’ ಎಂದು ವಿಜಯನಗರದಲ್ಲಿ ವಾಸವಿರುವ ಕಟ್ಟಡ ಕಾರ್ಮಿಕ ನಾಗರಾಜ್ ತಿಳಿಸಿದರು.
“ನಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಬಿಜಾಪುರ ಹಾಗೂ ಬೀದರ್ ಭಾಗದ ಅನೇಕರು ಸರ್ಕಾರಿ ವ್ಯವಸ್ಥೆಯಲ್ಲೇ ಊರಿಗೆ ಹೋಗಿದ್ದಾರೆ. ನಾವು ಹೋಗಲು ಸಿದಟಛಿರಿದ್ದೆವು. ಸರ್ಕಾರದಿಂದ ಸೌಲಭ್ಯಗಳ ಭರವಸೆ ದೊರೆತಿದೆ. ಅಲ್ಲದೆ, ಕಟ್ಟಡ ನಿರ್ಮಾಣ ಕಾಮಗಾರಿಗಳ ಪುನರಾರಂಭ ಭರವಸೆಯೂ ಸಿಕ್ಕಿದೆ. ಹೀಗಾಗಿ ನಾವು ಕೆಲವರು ಇಲ್ಲಿಯೇ ಉಳಿದುಕೊಂಡಿದ್ದೇವೆ’ ಎಂದರು.
ಕಾಮಗಾರಿಗಳಿಗೆ ಲಾಕ್‌ಡೌನ್ ಗಡುವುಬೆಂಗಳೂರು: ಲಾಕ್‌ಡೌನ್ ಅವಧಿ ಮುಗಿಯುವಷ್ಟರಲ್ಲಿ ಪ್ರಗತಿಯಲ್ಲಿರುವ ಸಾಧ್ಯವಾದಷ್ಟು ಎಲ್ಲ ಕಾಮಗಾರಿಗಳು ಪೂರ್ಣಗೊಳಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್. ವಿಜಯ್ ಭಾಸ್ಕರ್ ನಗರದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದರು. ಬಿಬಿಎಂಪಿ, ಬಿಡಿಎ, ಜಲಮಂಡಳಿ ಸೇರಿದಂತೆ ಎಲ್ಲ ಅಧಿಕಾರಿಗಳೊಂದಿಗೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿ, ಲಾಕ್‌ಡೌನ್ ಅವಧಿಯೊಳಗೆ ಸಾಧ್ಯವಾದಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇದಕ್ಕೆ ಸಂಚಾರ ಪೊಲೀಸರು ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು. ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳು ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ಆರಂಭಿಸಬೇಕು. ಇದರಿಂದ ವಲಸೆ ಹೋಗುವ ಕಾರ್ಮಿಕರನ್ನು ತಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ “ನಮ್ಮ ಮೆಟ್ರೋ’ ಯೋಜನೆಯಲ್ಲಿ ವಿವಿಧ ಶಿಬಿರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಕಾರ್ಮಿಕರು ವಲಸೆ ಹೋಗದಂತೆ ಬಿಎಂಆರ್‌ಸಿಎಲ್ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಗಳ ಪ್ರಗತಿಯಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂದರು. ಕೆಪಿಟಿಸಿಎಲ್ ಕೈಗೆತ್ತಿಕೊಂಡ ಕಾಮಗಾರಿಗೆ ಬಿಡಿಎಯಿಂದ ಅಗತ್ಯ ಭೂಮಿ ಮಂಜೂರು, ಜಲಮಂಡಳಿಯು ಗ್ರಾಫೈಟ್ ಜಂಕ್ಷನ್‌ನಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಪೂರ್ಣಗೊಳಿಸುವುದು, ಅರ್ಧಕ್ಕೆ ನಿಂತಿರುವ ಸ್ಮಾರ್ಟ್‌ಸಿಟಿ ಯೋಜನೆಗಳಿಗೆ ಮರುಚಾಲನೆ ಮತ್ತಿತರ ಅಂಶಗಳು ಚರ್ಚೆಗೆ ಬಂದವು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು. ಯಶವಂತಪುರ ಖಾಸಗಿ ನರ್ಸಿಂಗ್ ಹೋಂ ಸೀಲ್‌ಡೌನ್
ಬೆಂಗಳೂರು: ನಗರದ ಯಶವಂತಪುರದ ಕೆ.ಎನ್.ಬಡಾವಣೆಯ ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 49 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಕೋವಿಡ್ ವೈರಸ್ ಸೋಂಕು ತಗುಲಿರುವುದು ಖಾಸಗಿ ಪ್ರಯೋಗಾಲಯ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಮಹಿಳೆಯು ಕಳೆದ ಮೂರು ದಿನಗಳಿಂದ ಚಿಕೂನ್ ಗುನ್ಯಾ ಹಿನ್ನೆಲೆ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚುವರಿಯಾಗಿ ಖಾಸಗಿ ಪ್ರಯೋಗಾಲಯ ಮೂಲಕ ಕೋವಿಡ್ ಪರೀಕ್ಷೆಯನ್ನು ಮಾಡಲಾಗಿತ್ತು. ಬುಧವಾರ ವರದಿ ಪಾಸಿಟಿವ್ ಎಂದು ಬಂದಿದೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ನರ್ಸಿಂಗ್ ಹೋಂ ಬಂದ್ ಮಾಡಿ ರೋಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಹಿಸಿದ್ದಾರೆ. “ನರ್ಸಿಂಗ್ ಹೋಂನಲ್ಲಿದ್ದ ಇತರೆ ರೋಗಿಗಳು, ಸಿಬ್ಬಂದಿ, ಮಹಿಳೆ ಸಂಬಂಧಿ ಸೇರಿ 13 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಜತೆಗೆ ಮಹಿಳೆಗೆ ಮತ್ತೂಮ್ಮೆ ಸೋಂಕು ಪರೀಕ್ಷೆ ಮಾಡಲಾಗುತ್ತದೆ’ ಎಂದು ಬಿಬಿಎಂಪಿ ಮಲ್ಲೇಶ್ವರ ವೈದ್ಯಾಧಿಕಾರಿ ಡಾ. ಸುರೇಶ್ ರುದ್ರಪ್ಪ ತಿಳಿಸಿದ್ದಾರೆ. ನಮ್ಮ ಅಂದಾಜು ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಅದರಲ್ಲಿ ಪುರುಷರು ಮತ್ತು ಮಹಿಳೆಯರು ಎಷ್ಟಿದ್ದಾರೆ ಹಾಗೂ ಎಲ್ಲೆಲ್ಲಿದ್ದಾರೆ ಎಂಬ ಲೆಕ್ಕ ಇದೆ. ಆದರೆ, ಕಂಟೈನ್ಮೆಂಟ್ ವಲಯಗಳ ಕಾರ್ಮಿಕರೆಂದು ವರ್ಗೀಕರಣ ಮಾಡಿಲ್ಲ. ಈ ನಿರ್ಬಂಧಿತ ಪ್ರದೇಶದಲ್ಲಿದ್ದವರನ್ನು ಊರಿಗೆ ಕಳುಹಿಸಲು ಅವಕಾಶವೂ ಇಲ್ಲ.
ಬಿ.ಎಚ್. ಅನಿಲ್ ಕುಮಾರ್, ಆಯುಕ್ತರು, ಬಿಬಿಎಂಪಿ. ಕಟ್ಟಡ ಕಾರ್ಮಿಕರಿಗೆ ಉಚಿತ ರೈಲು ಮತ್ತು ಬಸ್ ವ್ಯವಸ್ಥೆಯನ್ನು ಮುಂದುವರಿಸಿ ಅವರುಗಳು ಊರಿಗೆ ತೆರಳಲು ಸರ್ಕಾರ ಅನುಕೂಲ ಮಾಡಿಕೊಡಬೇಕು. ಊರಿಗೆ ತೆರಳಲು ಇಚ್ಛಿಸುವ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಕಳುಹಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು.
● ಕೆ.ಸೋಮಶೇಖರ್, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ರಾಜ್ಯಾಧ್ಯಕ್ಷ