ಹಾವೇರಿ: ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿಯೇ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಸೋಮವಾರ ಶಿಗ್ಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯ ಮಟ್ಟದ ಕಾರ್ಯಪಡೆಯವರು ನಾಳೆ ಇಲ್ಲವೇ ನಾಡಿದ್ದು ಕೊರೊನಾ ಕುರಿತ ಅಂಕಿ-ಅಂಶಗಳನ್ನು ನೀಡಲಿದ್ದಾರೆ. ಲಾಕ್‌ಡೌನ್ ವಿಚಾರ ಸಚಿವ ಸಂಪುಟದ ಮುಂದೆ ಇರುವುದರಿಂದ ಅಲ್ಲಿಯೇ ಈ ಕುರಿತು ಚರ್ಚೆ ಮಾಡಿ, ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಇಲ್ಲಿಯ ತಹಸೀಲ್ದಾರ್ ಕಚೇರಿಯಲ್ಲಿ ಮುಖ್ಯಮಂತ್ರಿಗಳ ವಿಡಿಯೋ ಸಂವಾದ ಸಭೆಯಲ್ಲಿ ಭಾಗಿಯಾದ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳಿದ್ದು ಫಿಜಿಶಿಯನ್ ವೈದ್ಯರ ಕೊರತೆ ಇದೆ.
ಇದನ್ನೂ ಓದಿ :ರಾಜಕೀಯ ನಾಯಕರ ತನಿಖೆ ಪ್ರಕರಣ : ದೆಹಲಿ ಪೊಲೀಸರಿಗೆ ಹೈಕೋರ್ಟ್ ತರಾಟೆ
ಫಿಜಿಶಿಯನ್ ವೈದ್ಯರ ಕೊರತೆ ನೀಗಿಸಬೇಕು. ಹೆಚ್ಚುವರಿ ಆಕ್ಸಿಜನ್ ಟ್ಯಾಂಕರ್ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು. ಜತೆಗೆ ಜಿಲ್ಲೆಯಲ್ಲಿ ಕಪ್ಪು ಶಿಲೀಂದ್ರ ಪ್ರಕರಣ ಈವರೆಗೆ ಕಂಡು ಬಂದಿಲ್ಲ ಎಂದು ತಿಳಿಸಿದರು.