Advertisement

ಲಾಕ್‌ಡೌನ್‌: ನಿತ್ಯ 35 ಸಾವಿರ ಕೋಟಿ ನಷ್ಟ

09:27 AM Apr 06, 2020 | mahesh |

ನವದೆಹಲಿ: ಕೋವಿಡ್‌ 19 ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ 21 ದಿನಗಳ ಲಾಕ್‌ ಡೌನ್‌ ಘೋಷಿಸಲಾಗಿದೆ. ಅಷ್ಟೇ ಅಲ್ಲ ವ್ಯವಹಾರ, ವಿಮಾನ, ರೈಲು, ಬಸ್‌ ಸೇರಿದಂತೆ ಎಲ್ಲಾ ರೀತಿಯ ವಾಹನ ಸಂಚಾರ ಬಂದ್‌ ಆಗಿದ್ದು, ಇದರಿಂದ ಪ್ರತಿನಿತ್ಯ ಭಾರತ 35ಸಾವಿರ ಕೋಟಿ ನಷ್ಟ ಅನುಭವಿಸುವಂತಾಗಿದೆ.
21 ದಿನಗಳ ಲಾಕ್‌ ಡೌನ್‌ನಿಂದಾಗಿ ದೇಶದ ಆರ್ಥಿಕತೆಗೆ ಸುಮಾರು 98 ಬಿಲಿಯನ್‌ ಅಮೆರಿಕನ್‌ (ಅಂದಾಜು 7.35ಲಕ್ಷ ಕೋಟಿ) ಡಾಲರ್‌ ನಷ್ಟು ನಷ್ಟ ಸಂಭವಿಸಲಿದೆ ಎಂದು ಆ್ಯಕ್ಯೂಟ್‌ ರೇಟಿಂಗ್‌ ಅಂಡ್‌ ರಿಸರ್ಚ್‌ ಲಿಮಿಟೆಡ್‌ ತಿಳಿಸಿದೆ.

Advertisement

ವೈರಸ್‌ ಕೇವಲ ಜಾಗತಿಕ ಆರ್ಥಿಕತೆಯನ್ನು ಮಾತ್ರ ಹಾಳುಗೆಡವಿಲ್ಲ. ಅದು ಭಾರತದ ವಿವಿಧ ರಾಜ್ಯಗಳಲ್ಲಿ ಮಾರ್ಚ್‌ ಮೊದಲ ವಾರದಲ್ಲಿಯೇ ಶಟ್‌ ಡೌನ್‌ ಪರಿಸ್ಥಿತಿ ತಂದೊಡ್ಡಿದ್ದು, ಮಾರ್ಚ್‌ 25ರಿಂದ ಸಂಪೂರ್ಣವಾಗಿ ಲಾಕ್‌ ಡೌನ್‌ ಆಗುವಂತಾಗಿತ್ತು ಎಂದು ವರದಿ ವಿವರಿಸಿದೆ. ದೇಶಾದ್ಯಂತ ಜಾರಿಯಾಗಿರುವ 21 ದಿನಗಳ ಲಾಕ್‌ ಡೌನ್‌ ಏಪ್ರಿಲ್‌ 14ರಂದು ಕೊನೆಗೊಳ್ಳಲಿದೆ. ಆದರೆ ಈ ಲಾಕ್‌ ಡೌನ್‌ ಮುಂದುವರಿಯಲಿದೆಯಾ ಅಥವಾ ಕೊನೆಗೊಳ್ಳಲಿದೆಯಾ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ. ಆದರೆ ಈ ಆರ್ಥಿಕ ಹೊಡೆತದ ಪರಿಣಾಮದಿಂದ ಸುಧಾರಿಸಿಕೊಳ್ಳಲು ಕೆಲವು ಸಮಯ ಬೇಕಾಗಲಿದೆ ಎಂದು ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ ತಿಳಿಸಿದೆ.

ಈಗಾಗಲೇ ಒಂಬತ್ತು ದಿನಗಳಿಂದ ದೇಶಾದ್ಯಂತ ಲಾಕ್‌ಡೌನ್‌ ಚಾಲ್ತಿಯಲ್ಲಿದೆ. ಎಲ್ಲ ಕೈಗಾರಿಕೆಗಳು, ಉದ್ಯಮಗಳು, ಗುಡಿ ಕೈಗಾರಿಕೆ ಗಳೂ ಸ್ಥಗಿತಗೊಂಡಿವೆ. ಬೆರಳೆಣಿಕೆಯಷ್ಟು ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿದರೆ, ಬೇರಾ ವ ವಲಯದಲ್ಲೂ ಕಾರ್ಮಿಕರಿಗೆ ಕೆಲಸ ಇಲ್ಲವಾಗಿದೆ. ಇದೇ ಸ್ಥಿತಿ ಬಹುತೇಕ ದೇಶಗಳಲ್ಲಿದ್ದು, ಬಡ ಮತ್ತು ಮಧ್ಯಮ ವರ್ಗದವರ ಬದುಕು ಸಂಕಷ್ಟಕ್ಕೀಡಾಗಿದೆ ಮತ್ತೆ ಆರ್ಥಿಕತೆಯನ್ನು ಹಳಿಗೆ ತರಲು ಹರಸಾಹಸ ಪಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next