ಸದವಕಾಶ ಅಂತಲೇ ನಾನು ಅಂದುಕೊಂಡಿದ್ದೇನೆ. ಆಯಾ ದಿನ ಏನೇನು ಮಾಡಬೇಕೆಂದು “ಟು-ಡೂ-ಸ್ಟ್’ ಮಾಡಿಕೊಂಡಿರುತ್ತೇನೆ. ಆ ಪ್ರಕಾರ, ದಿನಕ್ಕೊಂದು ನಮೂನೆಯ ತಿಂಡಿ, ಅಡುಗೆ, ಸಂಜೆಗೆ ಕುರುಕಲು ತಿಂಡಿ, ಜ್ಯೂಸ್ (ಎಲ್ಲ ಹಿತ- ಮಿತವಾಗಿ) ತಯಾರಿಸುತ್ತೇನೆ. ಯಜಮಾನರ ಸಹಾಯ ದೊಂದಿಗೆ ಒಂದಷ್ಟು ಹಪ್ಪಳ, ಸಂಡಿಗೆಯನ್ನೂ ಮಾಡಲಾಗಿದೆ.
Advertisement
ಮೊದಲಿನಂತೆ, ಲಾಕ್‌ಡೌನ್ ಅವಧಿಯಲ್ಲಿ ನಾನು ಟ್ಯೂಷನ್ ಕ್ಲಾಸ್ ತೆಗೆದುಕೊಳ್ಳುತ್ತಿಲ್ಲ. ಉಳಿದ ಸಮಯದಲ್ಲಿ ಹೊಲಿಗೆ, ಕಥೆ, ಲೇಖನ ಬರೆಯುವುದು, ಪುಸ್ತಕ ಓದುವುದು… ಹೀಗೆಸಮಯ ಸಾಗುತ್ತದೆ. ಯೂಟ್ಯೂಬ್‌ನಲ್ಲಿ ಹೊಸ ನಮೂನೆಯ ಬ್ಲೌಸ್ ಡಿಸೈನ್ಸ್, ನೋಡಿ, ಕಲಿಯುತ್ತಿದ್ದೇನೆ. ಮನೆಯ ದೊಡ್ಡ ಚಾವಡಿಯಲ್ಲಿಯೇ 1 ಗಂಟೆ ವಾಕ್ ಮಾಡುತ್ತೇನೆ. ಚಿಕ್ಕಮಗಳಿಗೆ ಕಥೆಗಳನ್ನು ಹೇಳುತ್ತೇನೆ. ಚೆಸ್, ಚೆನ್ನೆಮಣೆ, ಹಾವು ಏಣಿ… ಮುಂತಾದ ಆಟಗಳನ್ನು ಮನೆ ಮಂದಿಯೆಲ್ಲ ಸೇರಿ ಆಡುತ್ತೇವೆ. ಆಟ ಆಡಿದ ಮೇಲೆ, ಪಾಠವೂ ಇರಬೇಕು ತಾನೇ? ದೊಡ್ಡ ಮಗಳು 10ನೇ ತರಗತಿಯಾದ್ದರಿಂದ ಅವಳಿಗೆ 1 ಗಂಟೆ ಪಾಠ ಹೇಳಿಕೊಡುತ್ತೇನೆ. ಆ ಸಮಯದಲ್ಲಿ ಚಿಕ್ಕಮಗಳು ಯೂಟ್ಯೂಬ್ ನೋಡಿ ಕ್ರಾಫ್ಟ್, ಡ್ರಾಯಿಂಗ್ ಮಾಡುತ್ತಾಳೆ. ಸಂಜೆ, ಎಲ್ಲರೂ ದೇವರನಾಮ ಹಾಡುತ್ತೇವೆ. ಹೀಗೆ, ಲಾಕ್‌ಡೌನ್ ಅವಧಿಯನ್ನು ವ್ಯರ್ಥ ಮಾಡದೆ, ಆರಾಮಾಗಿ ಕಳೆಯುತ್ತಿದ್ದೇವೆ.