Advertisement

ಅಲ್ಲಲ್ಲಿ ಮತ್ತೆ ಲಾಕ್‌ಡೌನ್‌: ಪುಣೆೆ, ಬೆಂಗಳೂರು ರೀತಿ ಕೆಲವು ನಗರಗಳಿಗೆ ಲಾಕ್‌ಡೌನ್‌ ಬಿಸಿ

01:01 PM Jul 13, 2020 | sudhir |

ಹೊಸದಿಲ್ಲಿ: ದೇಶಾದ್ಯಂತ ಕೊರೊನಾ ಪ್ರಕರ ಣ ಗಳು ಹೆಚ್ಚಾಗುತ್ತಲೇ ಇವೆ. ಕರ್ನಾಟಕದಲ್ಲಿ ನಿಯಂತ್ರಣ ಮೀರಿ ಪ್ರಕರಣಗಳು ದಾಖ ಲಾದ ಹಿನ್ನೆಲೆಯಲ್ಲಿ, ಒಂದು ವಾರದ ಕಾಲ ಲಾಕ್‌ಡೌನ್‌ ನಡೆಸಲು ಸಿದ್ಧತೆಗಳು ಆರಂಭ ವಾಗಿವೆ. ಕೆಲವೆಡೆ ಪ್ರಕರಣಗಳು ಹೆಚ್ಚಾಗಿರುವ ನಗರಗಳು, ಪ್ರಾಂತ್ಯಗಳಲ್ಲಿ ಲಾಕ್‌ಡೌನ್‌ನನ್ನು ಕೆಲವು ದಿನಗಳ ಕಾಲ ವಿಸ್ತರಿಸಲು ನಿರ್ಧರಿಸಲಾಗಿದ್ದರೆ, ಮತ್ತೂ ಕೆಲವೆಡೆ ಭಾಗಶಃ ಲಾಕ್‌ಡೌನ್‌ ಅಂದರೆ ವೀಕೆಂಡ್‌ ಅಥವಾ ನಿರ್ದಿಷ್ಟ ದಿನಗಳಲ್ಲಿ ಮಾತ್ರ ಲಾಕ್‌ಡೌನ್‌ ಮಾಡಲು ತೀರ್ಮಾನಿಸಲಾಗಿದೆ.

Advertisement

ಬೆಂಗಳೂರಿನಲ್ಲಿ ಮಂಗಳವಾರದಿಂದ ಜಾರಿಗೆ ಬರುವಂತೆ 7 ದಿನಗಳ ಕಾಲ ಲಾಕ್‌ಡೌನ್‌ಗಾಗಿ ನಿರ್ಧರಿಸಿದೆ. ಆದರೆ ಉತ್ತರ ಪ್ರದೇಶ, ತಮಿಳುನಾಡು, ಜಮ್ಮು- ಕಾಶ್ಮೀರ ದಲ್ಲಿ ಕೆಲವು ಕಡೆ ಲಾಕ್‌ಡೌನ್‌ ಜಾರಿಗೊಳಿ ಸಲಾಗಿದೆ. ಅಸ್ಸಾಂನಲ್ಲಿ ಗುವಾಹಾಟಿ ಹಾಗೂ ಕಾಮರೂಪ್‌ಗ್ಳಲ್ಲಿ ಮಾತ್ರ 14 ದಿನಗಳವರೆಗೆ ಲಾಕ್‌ಡೌನ್‌ ಜಾರಿಗೊಳಿ ಸಲು ತೀರ್ಮಾನಿಸಲಾಗಿದೆ.

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ದಿನೇದಿನೆ ಪ್ರಕರಣಗಳು ಹೆಚ್ಚಾಗ ತೊಡಗಿ ರುವ ಹಿನ್ನೆಲೆಯಲ್ಲಿ ವೀಕೆಂಡ್‌ಗಳಲ್ಲಿ ಲಾಕ್‌ಡೌನ್‌ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳ ಲಾಗಿದೆ. ಅಸಲಿಗೆ, ರಾಜ್ಯಪೂರ್ತಿ ಲಾಕ್‌ಡೌನ್‌ ಜಾರಿ ಮಾಡುವಂತೆ ಒತ್ತಾಯಗಳು ಕೇಳಿಬಂದಿವೆ. ಶನಿವಾರದಂದು, ಅಲ್ಲಿ ಒಂದೇ ದಿನ 35,000 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಲಾಕ್‌ಡೌನ್‌ ಅನಿವಾರ್ಯ ಎಂಬಂತಾಗಿದ್ದು, ಅದರ ಮೊದಲ ಹೆಜ್ಜೆ ಯಾಗಿ ಶನಿವಾರ ಹಾಗೂ ರವಿವಾರದಂದು ರಾಜ್ಯಾದ್ಯಂತ ಲಾಕ್‌ಡೌನ್‌ ಮಾಡಬೇಕೆಂದು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲಿನ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ (ಗೃಹ ಮತ್ತು ಮಾಹಿತಿ ತಂತ್ರಜ್ಞಾನ) ಅವನೀಶ್‌ ಅವಾಸ್ತಿ, ಈ ವಿಷಯ ಪ್ರಕಟಿಸಿದ್ದಾರೆ. ಜನನಿಬಿಡ ಸ್ಥಳಗಳಾದ ಮಾರುಕಟ್ಟೆ, ಕಚೇರಿಗಳು, ಸಿನೆಮಾ ಗೃಹಗಳು ಇತ್ಯಾದಿ ಕಡೆಗಳಲ್ಲಿ ಜನರು ಹೆಚ್ಚೆಚ್ಚು ಸಂಖ್ಯೆ ಯಲ್ಲಿ ಜಮಾಯಿಸುವುದರಿಂದ ಅಲ್ಲಿ ಪ್ರಕರಣಗಳು ಹೆಚ್ಚಾಗಿರುವ ಸಾಧ್ಯತೆಗಳಿರು ತ್ತವೆ. ಈ ಹಿನ್ನೆಲೆಯಲ್ಲಿ ವೀಕೆಂಡ್‌ಗಳಲ್ಲಿ ಲಾಕ್‌ಡೌನ್‌ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಗುರುವಾರ, ಉತ್ತರ ಪ್ರದೇಶ ಸರಕಾರ 55 ಗಂಟೆಗಳ ಲಾಕ್‌ಡೌನ್‌ ಜಾರಿಗೊಳಿಸುವುದಾಗಿ ಘೋಷಿಸಿತ್ತು. ಶುಕ್ರವಾರ
ರಾತ್ರಿ 10 ಗಂಟೆಯಿಂದ ಶುರುವಾಗಿದ್ದ ಲಾಕ್‌ಡೌನ್‌, ಸೋಮವಾರ ಬೆಳಗ್ಗೆ 5 ಗಂಟೆಯ ವರೆಗೂ ಜಾರಿಯಲ್ಲಿತ್ತು. ಆ ಸಂದರ್ಭದಲ್ಲಿ, ಅಗತ್ಯ ಸೇವೆಗಳನ್ನು ಜಾರಿಯಲ್ಲಿಡಲಾಗಿತ್ತು. ಅದೇ ಮಾದರಿಯಲ್ಲಿ, ವೀಕೆಂಡ್‌ ಲಾಕ್‌ಡೌನ್‌ಗಳ ವೇಳೆಯಲ್ಲೂ ಅಗತ್ಯ ಹಾಗೂ ತುರ್ತು ಸೇವೆಗಳನ್ನು ಜಾರಿಯಲ್ಲಿಡಲಾಗುತ್ತದೆ ಎಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರ: ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಆಂಶಿಕ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಕೊರೊನಾ ಪ್ರಕರಣಗಳು ಜಾಸ್ತಿಯಿರುವ ಸುಮಾರು 68 ಪ್ರಕರಣಗಳನ್ನು ಗುರುತು ಮಾಡಲಾಗಿದ್ದು, ಆ ಪ್ರಾಂತ್ಯಗಳನ್ನು ಕಡ್ಡಾಯವಾಗಿ ಸೀಲ್‌ಡೌನ್‌ ಮಾಡುವುದು ಹಾಗೂ ಕೆಂಪು ವಲಯಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್‌ ಜಾರಿಗೊಳಿಸುವ ನಿರ್ಧಾರವನ್ನು ಕೈಗೊಳ್ಳ ಲಾಗಿದೆ. ಈ ಪ್ರಾಂತ್ಯಗಳಲ್ಲಿ ವಾಹನ ಹಾಗೂ ಜನರ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿ ಸಲಾಗಿದೆ. ಕಳೆದೊಂದು ವಾರದಲ್ಲಿ ಶ್ರೀನಗರದಲ್ಲಿ 1,600ಕ್ಕೂ ಹೆಚ್ಚು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಅಸ್ಸಾಂ-ಮೇಘಾಲಯ: ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅಸ್ಸಾಂ ಸರಕಾರ, ಗುವಾಹಾಟಿ ಹಾಗೂ ಪ್ರಕರಣಗಳು ಹೆಚ್ಚಾಗಿರುವ ಕಾಮರೂಪ್‌ (ಮೆಟ್ರೋ) ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿಯಮಗಳನ್ನು 14 ದಿನಗಳ ಮುಂದುವರಿಸಲು ನಿರ್ಧರಿಸಿದೆ. ಜು. 19ರ ವರೆಗೆ ಈ ನಿರ್ಬಂಧ ಮುಂದುವರಿಯಲಿದೆ. ಮೇಘಾಲಯದಲ್ಲಿ ಸೋಮವಾರ ಹಾಗೂ ಮಂಗಳವಾರದ ಲಾಕ್‌ಡೌನ್‌ ಜಾರಿಗೊಳಿಸಲಾಗುತ್ತದೆ.

ಸ್ವಯಂ ದೃಢೀಕರಣ ಘೋಷಣೆ ಅವಧಿ ಇಳಿಕೆ
ಹೊಸದಿಲ್ಲಿ: ವಿಮಾನಯಾನಕ್ಕೆ ಮುಂಚಿತವಾಗಿ ಪ್ರಯಾಣಿಕರು ಸ್ವಯಂ ಘೋಷಣ ಫಾರ್ಮ್ ಸಲ್ಲಿಸಿ, 3 ವಾರಗಳ ಅವಧಿಯಲ್ಲಿ ಕೋವಿಡ್ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಅಂಥವರಿಗೆ ಪ್ರಯಾಣಿಸಲು ಅವಕಾಶ ನೀಡಿ ಎಂದು ಕೇಂದ್ರ ಸೂಚಿಸಿದೆ. ಮೇ 21ರಂದು ಈ ಸಂಬಂಧ ಆದೇಶ ಹೊರಡಿಸಿದ್ದ ಸಚಿವಾಲಯ, ಪ್ರಯಾಣಕ್ಕೂ ಮುಂಚೆ ಪ್ರಯಾಣಿಕರು 2 ತಿಂಗಳ ಅವಧಿಯಲ್ಲಿ ಕೋವಿಡ್ ಪಾಸಿಟಿವ್‌ ಇಲ್ಲ ಎಂಬ ಬಗ್ಗೆ ಸ್ವಯಂ ದೃಢೀಕರಣ ಸಲ್ಲಿಸಲು ಸೂಚಿಸಿತ್ತು. ದೇಶದಲ್ಲಿ ಚೇತರಿಕೆಯ ಪ್ರಮಾಣ ಹೆಚ್ಚಿದೆ. ಹೀಗಾಗಿ, ಘೋಷಣ ಫಾರ್ಮ್ ಸಲ್ಲಿಕೆ ಅವಧಿ ಇಳಿಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next