ಜರ್ಮನ್: ಕೋವಿಡ್ 19ರ ಹರಡುವಿಕೆಯನ್ನು ತಡೆಯುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿರ್ಬಂಧ ನಿಯಮ ಸಡಿಲಗೊಳಿಸುವುದರ ವಿರುದ್ಧ ಹೆಚ್ಚಿನ ಜರ್ಮನ್ನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೆಚ್ಚು ಜನರು ಸೇರುವ ಕೂಟಗಳ ನಿಷೇಧ ಹಾಗೂ ಅಂಥ ಉದ್ಯಮಗಳನ್ನು ಮುಚ್ಚುವುದೂ ಸೇರಿದಂತೆ ನಿರ್ಬಂಧ ಎ. 19ರವರೆಗೆ ಜಾರಿಯಲ್ಲಿದೆ. ಆ ಬಳಿಕ ಇದನ್ನು ಸಡಿಲಗೊಳಿಸಬೇಕೋ ಅಥವಾ ಮುಂದುವರಿಸಬೇಕೋ ಎಂಬ ಕುರಿತು ಯುಗೋವ್ ಡಿಪಿಎ ಸಂಶೋಧನಾ ಸಂಸ್ಥೆ ನಡೆಸಿದ ಹೊಸ ಸಮೀಕ್ಷೆಯಲ್ಲಿ 44 ಪ್ರತಿಶತದಷ್ಟು ಜನರು ಲಾಕ್‌ಡೌನ್ ಕ್ರಮಗಳ ವಿಸ್ತರಣೆಯನ್ನು ಬಯಸಿದರೆ, 12 ಪ್ರತಿಶತದಷ್ಟು ಜನರು ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಪರವಾಗಿದ್ದಾರೆ. 8 ಪ್ರತಿಶತದಷ್ಟು ಜನರು ನಿರ್ಬಂಧಗಳನ್ನು ರದ್ದುಗೊಳಿಸಬೇಕೆಂದು ಬಯಸಿದ್ದಾರೆ.
ಪ್ರಸ್ತುತ ಶೇ.78 ರಷ್ಟು ಜನರು ನಿರ್ಬಂಧಗಳನ್ನು ಪುರ್ಣವಾಗಿ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಜನರು ತಾಳ್ಮೆಯಿದ ಇರಬೇಕು ಮತ್ತು ಸುಳ್ಳು ಮಾಹಿತಿಗಳಿಗೆ ಕಿವಿಗೊಡಬಾರದು. ಕೋವಿಡ್ 19 ಸೊಂಕಿನ ಪ್ರಕರಣಗಳ ಪರಿಣಾಮಕಾರಿಯನ್ನು ಪರೀಶೀಲಿಸಿ ನಿರ್ಬಂಧಗಳನ್ನು ನಿಧಾನವಾಗಿ ತೆಗೆದು ಹಾಕಲಾಗುವುದು. ಈ ಸಂಬಂಧ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರಕಾರ ತಿಳಿಸಿದೆ.
ಜರ್ಮನಿಯಲ್ಲಿ 1,27,800 ಕ್ಕೂ ಹೆಚ್ಚು ಕೊವಿಡ್ 19 ಪ್ರಕರಣಗಳು ದೃಢಪಟ್ಟಿದೆ ಎಂದು ಜಾನ್ಸ್ ಹಾಪಿRನ್ಸ್ ವಿಶ್ವವಿದ್ಯಾಲಯದ ಅಂಕಿ ಅಂಶಗಳು ತಿಳಿಸಿವೆ. ಒಟ್ಟು 60,260 ಜನರು ಸಂಪುರ್ಣವಾಗಿ ಚೇತರಿಸಿಕೊಂಡಿದ್ದು, 3000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಜರ್ಮನಿಯಲ್ಲೂ ಸಂಪೂರ್ಣವಾಗಿ ನಿರ್ಬಂಧಗಳನ್ನು ತೆಗೆದು ಹಾಕಿದರೆ ಸೋಂಕು ಮತ್ತೆ ಹರಡಬಹುದೇ ಎಂಬ ಭೀತಿ ಇದೆ. ಆ ಹಿನ್ನೆಲೆಯಲ್ಲಿ ಬೇರೆ ರಾಷ್ಟ್ರಗಳ ಕ್ರಮಗಳನ್ನೂ ಗಂಭೀರವಾಗಿ ಗಮನಿಸಲಾಗುತ್ತಿದೆ.