ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹರಡುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ (ಏ.19) ರಾತ್ರಿ 10ಗಂಟೆಯಿಂದ 26ರ ಮುಂಜಾನೆ 5ಗಂಟೆವರೆಗೆ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ:ಲಾಕ್ ಡೌನ್ ಬೇಡ್ವೇ ಬೇಡ, 144 ಸೆಕ್ಷನ್ ಜಾರಿ ಮಾಡಿ : ವಿಪಕ್ಷ ನಾಯಕರ ಆಗ್ರಹ
ದೆಹಲಿಯಲ್ಲಿ ಪ್ರತಿದಿನ ಸುಮಾರು 25 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದೆ. ಒಂದು ವೇಳೆ ಪ್ರತಿದಿನ ಇದೇ ವರದಿ ಮುಂದುವರಿದಲ್ಲಿ, ರಾಷ್ಟ್ರರಾಜಧಾನಿಯಲ್ಲಿನ ಆರೋಗ್ಯ ವ್ಯವಸ್ಥೆ ಹದಗೆಡಲಿದೆ ಎಂಬ ಆತಂಕ ಎದುರಾಗಿದೆ ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದರು.
ತುರ್ತು ಸೇವೆ, ಆಹಾರ ಸರಬಹರಾಜು, ವೈದ್ಯಕೀಯ ಸೇವೆಗಳು ಎಂದಿನಂತೆ ಲಭ್ಯವಾಗಲಿದೆ. ಮದುವೆ ಕಾರ್ಯಕ್ರಮಗಳನ್ನು ಕೇವಲ 50 ಮಂದಿ ಅಥಿತಿಗಳೊಂದಿಗೆ ನಡೆಸಬೇಕು, ಇದಕ್ಕಾಗಿ ಪ್ರತ್ಯೇಕ ಪಾಸ್ ಗಳನ್ನು ನೀಡಲಾಗುವುದು ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದರು.
Related Articles
ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಜ್ರಿವಾಲ್ ದೆಹಲಿಯಲ್ಲಿ ಒಂದು ವಾರಗಳ ಕಾಲ ಮಿನಿ ಲಾಕ್ ಡೌನ್ ಜಾರಿಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದಕ್ಕೆಲ್ಲಾ ವಿನಾಯ್ತಿ ಇದೆ, ಯಾವುದಕ್ಕೆ ಕಠಿಣ ನಿರ್ಬಂಧ ವಿಧಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ…
ಯಾವುದಕ್ಕೆ ವಿನಾಯ್ತಿ:
*ಸರ್ಕಾರಿ ಕಚೇರಿ ಅಧಿಕಾರಿಗಳಿಗೆ ವಿನಾಯ್ತಿ ನೀಡಲಾಗಿದ್ದು, ಇವರು ಪ್ರಯಾಣದ ವೇಳೆ ತಮ್ಮ ಅಧಿಕೃತ ಗುರುತು ಪತ್ರ ತೋರಿಸಬೇಕು.
*ತುರ್ತು ಸೇವೆಗಳಾದ ಪೊಲೀಸ್ ಇಲಾಖೆ, ನಾಗರಿಕ ರಕ್ಷಣೆ, ಅಗ್ನಿಶಾಮಕ ದಳ, ವೈದ್ಯಕೀಯ, ಕಾರಾಗೃಹ, ಸ್ಯಾನಿಟೇಶನ್ ಸೇರಿದಂತೆ ವಿವಿಧ ಸರ್ಕಾರಿ ಅಧಿಕಾರಿಗಳು ಸಿಬ್ಬಂದಿಗಳಿಗೆ ವಿನಾಯ್ತಿ.
*ಎಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರು, ಕೋರ್ಟ್ ಸಿಬಂದಿಗಳಿಗೆ ವಿನಾಯ್ತಿ
*ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರುಗಳು, ನರ್ಸ್ ಗಳು, ಪ್ರಯೋಗಾಲಯದ ಸಿಬಂದಿಗಳು, ವೈದ್ಯಕೀಯ ಉಪಕರಣಗಳ ಸರಬರಾಜುದಾರರಿಗೆ ವಿನಾಯ್ತಿ
*ಗರ್ಭಿಣಿಯರಿಗೆ, ಅನಾರೋಗ್ಯ ಪೀಡಿತ ವ್ಯಕ್ತಿಗಳ ವೈದ್ಯಕೀಯ ಸೇವೆಗಳಿಗೆ ವಿನಾಯ್ತಿ, ಇವರು ತಮ್ಮ ಅಧಿಕೃತ ಗುರುತು ಪತ್ರ ಮತ್ತು ವೈದ್ಯರ ಪ್ರಿಸ್ ಕ್ರಿಪ್ಶನ್ ತೋರಿಸಬೇಕು.
*ಕೋವಿಡ್ 19 ಸೋಂಕು ಪರೀಕ್ಷೆ ಮತ್ತು ಲಸಿಕೆ ವಿತರಣೆ ಸಿಬಂದಿಗಳಿಗೆ ವಿನಾಯ್ತಿ
*ರೈಲ್ವೆ ಮತ್ತು ವಿಮಾನ ನಿಲ್ದಾಣದಿಂದ ಆಗಮಿಸುವ ಪ್ರಯಾಣಿಕರಿಗೆ ವಿನಾಯ್ತಿ, ಇವರು ತಮ್ಮ ಪ್ರಯಾಣದ ಟಿಕೆಟ್ ಅನ್ನು ತೋರಿಸಬೇಕು.
*ಮಾಧ್ಯಮದವರಿಗೆ ವಿನಾಯ್ತಿ
*ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ವಿನಾಯ್ತಿ
* ಅಂತರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ
*ತುರ್ತು ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ವಿನಾಯ್ತಿ
ಇವುಗಳಿಗೆ ವಿನಾಯ್ತಿ ಇಲ್ಲ, ಸಂಪೂರ್ಣ ಬಂದ್:
*ಎಲ್ಲಾ ಖಾಸಗಿ ಸಂಸ್ಥೆಗಳು, ಅಂಗಡಿ, ಶಾಪಿಂಗ್ ಸೆಂಟರ್ಸ್, ಮಾಲ್ ಗಳು, ವಾರದ ಮಾರುಕಟ್ಟೆ, ರೆಸ್ಟೋರೆಂಟ್, ಬಾರ್, ಶಿಕ್ಷಣ ಸಂಸ್ಥೆ, ಜಿಮ್, ಸಲೂನ್ಸ್, ಬ್ಯೂಟಿ ಪಾರ್ಲರ್ಸ್, ವಾಟರ್ ಪಾರ್ಕ್ಸ್, ಪಾರ್ಕ್ ಗಳು ಬಂದ್ ಆಗಿರಲಿದೆ.
*ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲಾ ರೀತಿಯ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಬ್ಬಗಳು ಮತ್ತು ಮನೋರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ.
*ವಿವಾಹ ಕಾರ್ಯಕ್ರಮಕ್ಕೆ 50 ಜನರು ಭಾಗವಹಿಸಲು ಅನುಮತಿ, ಈ ಸಂದರ್ಭದಲ್ಲಿ ವಿವಾಹ ಕಾರ್ಯಕ್ರಮಕ್ಕೆ ಆಗಮಿಸುವವರು ಆಮಂತ್ರಣ ಪತ್ರಿಕೆಯನ್ನು ತೋರಿಸಬೇಕು. ಇದಕ್ಕಾಗಿ ವಿಶೇಷ ಪಾಸ್ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
*ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅವಕಾಶ ಇದೆ, ಆದರೆ ದೆಹಲಿ ಮೆಟ್ರೋ ಮತ್ತು ಬಸ್ ಗಳಲ್ಲಿ ಶೇ.50ರಷ್ಟು ಮಾತ್ರ ಪ್ರಯಾಣಿಕರು ಸಂಚರಿಸಲು ಅವಕಾಶ. ಆಟೋ ರಿಕ್ಷಾ ಮತ್ತು ಕ್ಯಾಬ್ ನಲ್ಲಿ ಕೇವಲ 2 ಪ್ರಯಾಣಿಕರಿಗ ಮಾತ್ರ ಅವಕಾಶ, ಮ್ಯಾಕ್ಸಿ ಕ್ಯಾಬ್ ನಲ್ಲಿ ಐದು ಮಂದಿ ಪ್ರಯಾಣಿಸಲು ಅನುಮತಿ.
*ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಅನುಮತಿ ಇದೆ, ಆದರೆ ಯಾವುದೇ ಭಕ್ತರಿಗೆ ಭೇಟಿ ನೀಡಲು ಅವಕಾಶವಿಲ್ಲ.