Advertisement
ವಿದೇಶಗಳಲ್ಲಿ ಹವಾಮಾನವು ಬೆಚ್ಚಗಾಗುತ್ತಿದ್ದಂತೆ ಕೆಲವು ರಾಜ್ಯಗಳು ತನ್ನ ಲಾಕ್‌ಡೌನ್ ಅನ್ನು ತೆರೆಯಲು ಮುಂದಾಗಿವೆ. ನ್ಯೂಯಾರ್ಕ್‌ನ ಕೆಲವು ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರ ಬಂದಿದ್ದಾರೆ. ಇಲ್ಲಿನ ಬ್ರೂಕ್ಲಿನ್ ಪಾರ್ಕ್ ನಲ್ಲಿ ಜನರು ವಿಹರಿಸ ತೊಡಗಿದ್ದಾರೆ. ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧನೆ ದೇಶದಲ್ಲಿ “ಜನರು ಮನೆಯಲ್ಲಿ ಇರಿ’ ಎಂಬ ಆದೇಶವನ್ನು ಮುರಿಯುತ್ತಿದ್ದಾರೆ ಎಂದಿದೆ. ಹೆಚ್ಚಿನ ಜನರು ಹೊರಗೆ ಹೋಗುತ್ತಿ¨ªಾರೆ. ಮನೆಯನ್ನು ಬಿಟ್ಟು ತಮ್ಮ ಹಳೆಯ ಜೀವನ ಕ್ರಮಕ್ಕೆ ಬರುತ್ತಿದ್ದಾರೆಂದೂ ಹೇಳಿದೆ. ಮೊಬೈಲ್‌ನ ಲೊಕೇಶನ್ ಡೇಟಾವನ್ನು ಬಳಸಿಕೊಂಡು ಜನರನ್ನು ಟ್ರ್ಯಾಕ್ ಮಾಡಲಾಗಿದೆ.
Related Articles
Advertisement
ನಿಯಮಗಳು ಲೆಕ್ಕಕ್ಕಿಲ್ಲಅಮೆರಿಕದ ವಿವಿಧ ರಾಜ್ಯಗಳಲ್ಲಿ ಕೋವಿಡ್ ವೈರಸ್‌ಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದರಿಂದ ಅಲ್ಲಿನ ಜನರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಜನರು ಇದೇ ರೀತಿ ಹೊರ ಹೋಗಲು ಪ್ರಾರಂಭಿಸಿದರೆ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಅಪಾಯ ಇದೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ಗಳನ್ನು ಧರಿಸಬೇಕು, ಮನೆಯಲ್ಲಿಯೇ ಇರಬೇಕು ಎಂಬ ಸರಕಾರ ಆದೇಶವನ್ನು ಅಲ್ಲಗೆಳೆದು ಸಮುದ್ರ ತೀರದಲ್ಲಿ ಉದ್ಯಾನವನಗಳಲ್ಲಿ ಸೇರುತ್ತಿರುವುದು ಸರ್ವಥಾ ಸರಿಯಲ್ಲ. ಜನರು ಹೊರಗೆ ಹೋದಾಗ ಗೆಳೆಯರನ್ನು ಭೇಟಿಯಾದಾಗ ಸಾಮಾಜಿಕ ಅಂತರದ ಮಾರ್ಗಸೂಚಿಗಳನ್ನು ಅನುಸರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಮನೆಯೊಳಗೆ ಇರುವುದೇ ಸೂಕ್ತ. ಸಾಮಾಜಿಕ ಅಂತರವನ್ನು ಅನುಸರಿಸದೇ ಇದ್ದರೆ ವೈರಸ್ ಉಲ್ಬಣಗೊಳ್ಳಬಹುದು ಎಂದು ತಜ್ಞರು ಎಚ್ಚರಿಸಿ¨ªಾರೆ. ಕೆಲವು ರಾಜ್ಯಗಳು ತಮ್ಮ ಆರ್ಥಿಕತೆಯ ಕಾರಣಕ್ಕೆ ಕೆಲವು ಭಾಗಗಳನ್ನು ಕ್ರಮೇಣ ತೆರೆಯಲು ಮುಂದಾಗಿವೆ. ಇದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮೇರಿಲ್ಯಾಂಡ್ ಸಂಸ್ಥೆಯ ಸಂಶೋಧನೆಯು ಸೆಲ್ ಫೋನ್ ಸ್ಥಳ ಡೇಟಾವನ್ನು ಆಧರಿಸಿದೆ. ವ್ಯಕ್ತಿಯ ಮನೆಯಿಂದ ಒಂದು ಮೈಲಿಗಿಂತ ಹೆಚ್ಚಿನ ಪ್ರಯಾಣ ಅದಾಗಿದ್ದರೆ ಮತ್ತು ಅವರು 10 ನಿಮಿಷಗಳಿಗಿಂತ ಹೆಚ್ಚು ಕಾಲ ಅಲ್ಲಿಯೇ ಇದ್ದರೆ ಅದನ್ನು ಪ್ರವಾಸವನ್ನು ಎಂದು ಪರಿಗಣಿಸಲಾಗುತ್ತದೆ.