ಮುಂಬಯಿ: ಥಾಣೆಯ 11 ಹಾಟ್ ಸ್ಪಾಟ್ ಗಳಲ್ಲಿ ಮಾರ್ಚ್ 13ರಿಂದ 31ರವರೆಗೆ ಲಾಕ್ ಡೌನ್ ಮಾಡುವುದಾಗಿ ಥಾಣೆ ನಗರಾಡಳಿತ ಮಂಗಳವಾರ(ಮಾರ್ಚ್ 09) ಘೋಷಿಸಿದೆ.
ಇದನ್ನೂ ಓದಿ:ತಮಿಳುನಾಡು ಚುನಾವಣೆ : ಬಿಜೆಪಿ ಮೈತ್ರಿಯಿಂದ ಹೊರ ಬಂದ ಡಿಎಂಡಿಕೆ
ಥಾಣೆ ಮುನ್ಸಿಪಲ್ ಕಮಿಷನರ್ ವಿಪಿನ್ ಶರ್ಮಾ ಈ ಆದೇಶವನ್ನು ಜಾರಿಗೊಳಿಸಿದ್ದು, ಕಳೆದ ಕೆಲವು ದಿನಗಳಿಂದ ಥಾಣೆಯ 11 ಪ್ರದೇಶಗಳಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಈ ಹಿಂದೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದಾಗ ಇದ್ದ ಎಲ್ಲಾ ನಿರ್ಬಂಧಗಳು ಕೂಡಾ ಮಾರ್ಚ್ 13ರಿಂದ ಆರಂಭವಾಗುವ ಲಾಕ್ ಡೌನ್ ಗೂ ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೇ ಹಾಟ್ ಸ್ಪಾಟ್ ಹೊರವಲಯದಲ್ಲಿ ಕೆಲವೊಂದು ವಹಿವಾಟು, ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು ಎಂದು ಆದೇಶದಲ್ಲಿ ಹೇಳಿದೆ.
ದೇಶಾದ್ಯಂತ ಲಾಕ್ ಡೌನ್ ಹೇರಿದ್ದಾಗ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ನಿರ್ಬಂಧದಂತೆ, ಎಲ್ಲಾ ತುರ್ತು ಸೇವೆಗಳಿಗೆ ಅವಕಾಶ ನೀಡಲಾಗುವುದು, ಇನ್ನುಳಿದಂತೆ ಎಲ್ಲಾ ವ್ಯಾಪಾರ, ವಹಿವಾಟು, ಮಾರುಕಟ್ಟೆ ಬಂದ್ ಮುಂದುವರಿಯಲಿದೆ ಎಂದು ತಿಳಿಸಿದೆ.