Advertisement

ಲಾಕ್ ಡೌನ್ ನಿಂದಾಗಿ ಹಲವು ವಿಷಯ ಕಲಿಯಲು ಸಹಕಾರಿಯಾಯ್ತು….

08:24 PM May 03, 2020 | Nagendra Trasi |

ಕಾಲೇಜಿನಲ್ಲಿ ಕ್ಲಾಸ್, ಅಸೈನ್ ಮೆಂಟ್ ಅಂತ ಅದೇ ಮಾಡಬೇಕಿತ್ತು ಬೇರೆ ಏನಾದರೂ ಕಲಿಯಲು ಸಮಯ ಸಾಕಾಗುತ್ತಿರಲಿಲ್ಲ. ಈಗ ಲಾಕ್ ಡೌನ್ ನಿಂದ ಮನೇಲಿರುವುದರಿಂದ ಇನ್ನಷ್ಟು ಏನನ್ನಾದರೂ ಕಲಿಯಲು ಸಮಯ ಸಿಕ್ಕಿದೆ. ಎರಡು ದಿನ ಸುಮ್ಮನೆ ಸಮಯ ವ್ಯರ್ಥ ಮಾಡಿದೆ. ದೀಪ ಹಚ್ಚಲು ದೇವರಕೋಣೆಗೆ ಹೋದಾಗ ನನ್ನ ಕಣ್ಣಿಗೆ ಕಾಣಿಸಿದ್ದು ಭಗವದ್ಗೀತೆ ಪುಸ್ತಕ. ಓದಲು ಕುಳಿತೆ ಅದನ್ನು ಒಂದೆ ದಿನದಲ್ಲಿ ಮುಗಿಸಲು ಸಾಧ್ಯವಿಲ್ಲ ಇನ್ನೂ ವರೆಗೂ ಕೂಡ ಮುಗಿಯಲಿಲ್ಲ. ಇದರಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಸಲಹೆ ನೀಡುವ ಮೂಲಕ ಜೀವನದ ಸಾರವನ್ನು ವಿವರಿಸಿದ್ದಾರೆ.

Advertisement

ನನಗೆ ಇದರಿಂದ ಒಂದು ಅರ್ಥವಾಗಿದ್ದು ಏನೆಂದರೆ ಭಗವದ್ಗೀತೆ ಗಿಂತ ಬೇರೆ ಪ್ರೇರಣೆ ಪುಸ್ತಕ ಆಗಲಿ ಅಥವಾ ಪ್ರೇರಣೆ ಭಾಷಣಕಾರರು ಬೇಡ ಇದರಲ್ಲಿ ಹೇಳಿದ ಸಾಲುಗಳನ್ನು ನಮ್ಮ ಜೀವನಕ್ಕೆ ಪ್ರೇರಣೆಯಾಗಿ ಅಳವಡಿಸಿಕೊಳ್ಳಬಹುದು. ಮಧ್ಯೆ ಮಧ್ಯೆ ಸೀರಿಸ್ ನೋಡುತ್ತಿದ್ದೆ ನನಗೆ ತುಂಬಾ ಇಷ್ಟವಾದ ಸೀರಿಸ್ ಕೋಟಾ ಫ್ಯಾಕ್ಟರಿ.

ಯಾಕೆಂದರೆ ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಹಾಸ್ಟೆ ಲ್ ಜೀವನ ಹೇಗಿರುತ್ತದೆ ಎಂಬುದನ್ನು ಇದರಲ್ಲಿ ತೋರಿಸಿದ್ದಾರೆ. ಇದನ್ನು ನೋಡಿ ನಾನು ಹಾಸ್ಟೆಲ್ ನಲ್ಲಿ ಕಳೆದ ಕಾಲ ನೆನಪಿಗೆ ಬಂತು. ಹೀಗೆ ತುಂಬಾ ಸೀರಿಸ್ ನೋಡಿದ್ದೇನೆ. ಹೊಸ ಹೊಸ ತಿನಿಸುಗಳನ್ನು ಯೂಟ್ಯೂಬ್ ನಲ್ಲಿ ನೋಡಿ ಮಾಡುವುದು ಮತ್ತು ಡಾನ್ಸ್ ಕಲಿಯುವುದು. ಹೀಗೆ ಹೊಸ ಹೊಸದನ್ನು ಕಲಿಯುವುದರ ಮೂಲಕ ಲಾಕ್ ಡೌನ್ ಕಳೆಯಲು ನಿರ್ಧರಿಸಿದ್ದೇನೆ.

ಮಹಾಲಕ್ಷ್ಮೀ. ಏ. ಜೆ.

Advertisement

Udayavani is now on Telegram. Click here to join our channel and stay updated with the latest news.

Next