Advertisement

ಮೇ 3ಕ್ಕೆ ಮುಗಿಯಲ್ಲ ರಾಜ್ಯದಲ್ಲಿ ಲಾಕ್ ಡೌನ್: ಸಚಿವ ಸುಧಾಕರ್ ಏನು ಹೇಳಿದ್ರು ಗೊತ್ತಾ?

08:57 AM Apr 21, 2020 | Hari Prasad |

ಚಿಕ್ಕಬಳ್ಳಾಪುರ: ಈ ಲಾಕ್ ಡೌನ್ ಒಮ್ಮೆ ಮುಗಿದ್ರೆ ಸಾಕಪ್ಪಾ ಅಂತ ನೀವಂದುಕೊಂಡಿದ್ರೆ ಅದಕ್ಕೆ ನೀವು ಮೆ 3ರ ನಂತರವೂ ಕಾಯಬೇಕಾಗುತ್ತಾ? ಈ ಸಂದೇಹಗಳಿಗೆ ಕರ್ನಾಟಕದ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಕೆ. ಸುಧಾಕರ್ ಅವರೇ ಸ್ವತಃ ಉತ್ತರಿಸಿದ್ದಾರೆ.

Advertisement

ಮೇ 3ರವರೆಗೆ ದೇಶಾದ್ಯಂತ ಲಾಕ್ ಡೌನ್ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಮುಂದುವರಿಸಿದೆ. ಆ ಬಳಿಕ ಲಾಕ್ ಡೌನ್ ತೆರವು ಮಾಡುವ ವಿಚಾರ ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಆದರೆ ಕೋವಿಡ್ 19 ಸೋಂಕಿತರು‌ ಹೆಚ್ಚಾಗಿದ್ದು ಈಗಾಗಲೇ ಕೇಂದ್ರ ಸರಕಾರದಿಂದ ರೆಡ್ ಜೋನ್ ಪ್ರದೇಶಗಳೆಂದು ಗುರುತಿಸಲ್ಪಟ್ಟಿರುವ ಪ್ರದೇಶಗಳಲ್ಲಿ ಮೇ 3ರ ನಂತರವು ಲಾಕ್ ಡೌನ್ ಮುಂದುವರಿಕೆ ಅಗತ್ಯವೆಂದು ಸಚಿವ ಡಾ.ಕೆ.ಸುಧಾಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ‌ ದೇಶದಲ್ಲೇ ಕರ್ನಾಟಕ 11ನೇ ಸ್ಥಾನದಲ್ಲಿದೆ. ಇನ್ನು ಟೆಸ್ಟ್ ರೇಟ್ ನಲ್ಲಿ ಕರ್ನಾಟಕದ ಮೊದಲ‌‌‌‌‌ ಸ್ಥಾನದಲ್ಲಿದೆ. ಎರಡನೇ ಸ್ಥಾನ ಹರಿಯಾಣ, ಮೂರನೇ ‌ಸ್ಥಾನದಲ್ಲಿ ಕೇರಳ ಇದೆ ಎಂದರು.

ಕೇಂದ್ರ ಸರಕಾರ ಘೋಷಿಸಿರುವ ಈ ಲಾಕ್ ಡೌನ್ ಮೇ 3ರವರೆಗೆ ಯಥಾ ಸ್ಥಿತಿಯಲ್ಲೇ ಮುಂದುವರಿಯುತ್ತದೆ ಆ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಸರಕಾರ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ನುಡಿದರು.

Advertisement

ಆದರೆ ಈ ಲಾಕ್ ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ಸಂಪೂರ್ಣ ಸಡಿಲಗೊಳಿಸಲಾಗಿದೆ ಎಂದು ಅವರು ತಿಳಿಸಿದರು.


ಇದೇ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್, ಚಿಕ್ಕಬಳ್ಳಾಪುರ ನಗರದಲ್ಲಿ ಕೋವಿಡ್-19 ಪ್ರಯುಕ್ತ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿ ನಗರದ 17 ನೇ ವಾರ್ಡ್, 13 ನೇ ವಾರ್ಡ್ ಹಾಗೂ 05 ನೇ ವಾರ್ಡ್ ಗಳಿಗೆ ಭೇಟಿ ನೀಡಿ ತಮ್ಮ ನೇತೃತ್ವದ ಶ್ರೀ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿ಼ಯಾ ತರನ್ನಮ್, ಎಸ್.ಪಿ. ಮಿಥುನ್ ಕುಮಾರ್, ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next