Advertisement
ರಾಜ್ಯದಲ್ಲಿ ಅಂದಾಜು 6.50 ಲಕ್ಷ ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿದ್ದು, 2.80 ಕೋಟಿ ಕಾರ್ಮಿಕರಿದ್ದಾರೆ. ಈಗ ಆ ಉದ್ಯಮ ಹಾಗೂ ಕಾರ್ಮಿಕರೆಲ್ಲರೂ ಅತಂತ್ರರಾಗಲಿದ್ದಾರೆ. ಅಲ್ಲದೆ, ರಾಜ್ಯದ ಆರ್ಥಿಕ ವೃದ್ಧಿಯಲ್ಲಿ ಈ ಕ್ಷೇತ್ರ ಶೇ. 40ರಷ್ಟು ಕೊಡುಗೆ ನೀಡುತ್ತಿದೆ. ಇದರಲ್ಲೂ ಖೋತಾ ಆಗಲಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಆತಂಕ ವ್ಯಕ್ತಪಡಿಸುತ್ತಾರೆ.
Related Articles
Advertisement
ಕಳೆದ ಬಾರಿ ಆತ್ಮನಿರ್ಭರ ಭಾರತದಡಿ ಶೇ. 20ರಷ್ಟು ಸಾಲ ಸೌಲಭ್ಯ ಕಲ್ಪಿಸಲಾಯಿತು. ಆದರೆ, ಅದಕ್ಕೆ ಎರಡು ತಿಂಗಳು ಸಾಲದ ಕಂತು (ಇಎಂಐ) ಬಾಕಿ ಇಟ್ಟುಕೊಂಡವರಿಗೆ ಮಾತ್ರ ಎಂಬ ನಿಯಮ ವಿಧಿಸಲಾಯಿತು. ಹಾಗಾಗಿ, ಬಹುತೇಕರಿಗೆ ಅದರ ಲಾಭ ಸಿಗಲಿಲ್ಲ. ಈ ಸಲ ಅದು ಪುನರಾವರ್ತನೆ ಆಗದಿರಲಿ ಎಂದು ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳು ಆಗ್ರಹಿಸುತ್ತಾರೆ.
ಸರಕಾರದಿಂದ ನಿರೀಕ್ಷೆ :
- ಲಾಕ್‌ಡೌನ್ ಅವಧಿಯಲ್ಲಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು.
- ಇಎಂಐ ಅನ್ನು ಆರು ತಿಂಗಳ ಕಾಲ ವಿಸ್ತರಿಸಬೇಕು.
- ಕಚ್ಚಾವಸ್ತುಗಳ ಬೆಲೆಗೆ ಕಡಿವಾಣ ಅಗತ್ಯ.
- ಜಿಎಸ್‌ಟಿ ಪಾವತಿಗೆ 3 ತಿಂಗಳು ಅವಕಾಶ.
- ಆರ್ಥಿಕ ನೆರವು ಕಲ್ಪಿಸಬೇಕು.
- ಕಳೆದ ಲಾಕ್‌ಡೌನ್‌ನಿಂದ ಶೇ. 10ರಷ್ಟು ಕೈಗಾರಿಕೆಗಳು ಸ್ಥಗಿತಗೊಂಡಿದ್ದು, ಈಗ ಇದರ ಪ್ರಮಾಣ ಹೆಚ್ಚಲಿದೆ.
- 80 ಕಾರ್ಮಿಕರು ದುಡಿಯು ತ್ತಿದ್ದು, ಅವರಿಗೆ ವೇತನ ಪಾವತಿ ಸವಾಲಾಗಲಿದ್ದು, ಅವರ ಜೀವನವೂ ಕಷ್ಟವಾಗಲಿದೆ.
- ಈಗಾಗಲೇ ಶೇ. 30-35ರಷ್ಟು ಎನ್‌ಪಿಎ ಇದೆ. ಇದರ ಪ್ರಮಾಣ ಹೆಚ್ಚಲಿದೆ.
- ಮತ್ತಷ್ಟು ಕಾರ್ಮಿಕರು ಬಿಟ್ಟುಹೋಗಲಿದ್ದು, ಉದ್ಯಮಗಳ ಮೇಲೆ ಒತ್ತಡ ಬೀಳಲಿದೆ.