Advertisement
ಈ ಬಗ್ಗೆ ಡಾ| ದೇವಿಶೆಟ್ಟಿ ಅಧ್ಯಕ್ಷತೆಯ ತಜ್ಞರ ಸಮಿತಿ ಬುಧ ವಾರ ಸಿಎಂ ಬಿಎಸ್‌ವೈ ಅವರಿಗೆ ವರದಿ ಸಲ್ಲಿಸಿದೆ. ಎ.30ರ ವರೆಗೆ ಎಸಿ ಬಸ್ ಸೇವೆ ಮತ್ತು ಮೆಟ್ರೋ ಆರಂಭಿಸದಂತೆ ಶಿಫಾ ರಸು ಮಾಡಿದೆ.
-ಸೋಂಕು ಕಂಡುಬಂದ ಪ್ರದೇಶಗಳಲ್ಲಷ್ಟೇ ಲಾಕ್ ಡೌನ್ ವಿಸ್ತರಣೆ.
– ಸಾಮಾಜಿಕ ಅಂತರ ಕಟ್ಟುನಿಟ್ಟು.
– ಮೇ 31ರ ವರೆಗೆ ಶಾಲಾ ಕಾಲೇಜುಗಳಿಗೆ ರಜಾ.
– ಎಸಿ ಇಲ್ಲದ ಅಂಗಡಿ ತೆರೆಯುವಿಕೆ.
– ಐಟಿ, ಬಿಟಿ, ಅವಶ್ಯ ಸೇವಾ ಸರಕಾರಿ ಕಚೇರಿ, ಕಾರ್ಖಾನೆಗಳು ಶೇ. 50 ಸಿಬಂದಿಯೊಂದಿಗೆ ಕಾರ್ಯನಿರ್ವಹಣೆ.
– ಅಂತಾರಾಜ್ಯ ಗಡಿಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ.
– ಅಂತಾರಾಜ್ಯ ರೈಲು, ವಿಮಾನ ಸೇವೆ ಸ್ಥಗಿತ ಮುಂದುವರಿಕೆ.
– ಅನಾವಶ್ಯಕ ಓಡಾಟಕ್ಕೆ ಕಡಿವಾಣ.
– ಖಾಸಗಿ ವಾಹನ ಓಡಾಟಕ್ಕೆ ಸಮ-ಬೆಸ ಸಂಖ್ಯೆ ಸೂತ್ರ.