Advertisement

ಆರ್ಥಿಕ ಹಿತದೃಷ್ಟಿಗಾಗಿ ಲಾಕ್‌ಡೌನ್‌ ತೆರವುಗೊಳಿಸಿದ ನ್ಯೂಯಾರ್ಕ್‌

07:01 PM Jun 22, 2020 | sudhir |

ನ್ಯೂಯಾರ್ಕ್‌: ಕೋವಿಡ್ ನಿಂದ ಕಂಗೆಟ್ಟ ನ್ಯೂಯಾರ್ಕ್‌ ನಿಧಾನವಾಗಿ ಸಹಜ ಸ್ಥಿತಿಗೆ ಮರಳು ಬರುತ್ತಿದ್ದು, ಅತಿಹೆಚ್ಚು ಕೋವಿಡ್ ಪೀಡಿತವಾಗಿದ್ದ ವಿಶ್ವದ ದೊಡ್ಡ ಮಹಾನಗರಿಯಲ್ಲೀಗ ಜನ ಜೀವನ ಮತ್ತು ವ್ಯಾಪಾರ ಚಟುವಟಿಕೆಗಳು ನಿಧಾನವಾಗಿ ಪ್ರಾರಂಭವಾಗುತ್ತಿವೆ.

Advertisement

ಹೌದು ದಾಖಲೆ ಮಟ್ಟದ ಸೋಂಕು ಪ್ರಕರಣಗಳನ್ನೊಳಗೊಂಡ ದೇಶಗಳ ಪೈಕಿ ಅಗ್ರಸ್ಥಾನದಲ್ಲಿದ್ದ ನ್ಯೂಯಾರ್ಕ್ ‌ನಲ್ಲಿ ಇದೀಗ ಚೇತರಿಕೆಯ ಗಾಳಿ ಬೀಸ ತೊಡಗಿದ್ದು, ಸೋಂಕು ಪ್ರಸರಣ ಮಟ್ಟ ಸಂಪೂರ್ಣವಾಗಿ ಕಡಿಮೆಯಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ಲಾಕ್‌ಡೌನ್‌ ನಿಬಂಧನೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಅಲ್ಲಿನ ಆಡಳಿತ ಅಧಿಕಾರಿಗಳು ತಿಳಿಸಿದ್ದು, ಸರಕಾರ ಆರ್ಥಿಕತೆಯ ಹಿತದೃಷ್ಟಿಯಿಂದ ಮತ್ತು ಸಹಜ ಜೀವನಕ್ಕೆ ಮರಳುವ ದೃಷ್ಟಿಯಿಂದ ಲಾಕ್‌ಡೌನ್‌ ಸಡಿಲಿಕೆ ಮಾಡುತ್ತಿದ್ದಾರೆ.

ಆರ್ಥಿಕವಾಗಿ ದೇಶವನ್ನು ಸದೃಢಗೊಳಿಸುವ ಯೋಜನೆ ರೂಪಿಸುವುದಾಗಿ ತಿಳಿಸಿದೆ.

ಇನ್ನು ಭಾನುವಾರ ನ್ಯೂಯಾರ್ಕ್‌ನಲ್ಲಿ 664 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, 1142 ಜನ ಹಾಸ್ಪಿಟಲೈಸೇಷನ್‌ ಆಗುವುದರೊಂದಿಗೆ 15 ಮಂದಿ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next