ಪ್ಯಾರಿಸ್: ಕೋವಿಡ್ 19 ವೈರಸ್ ನಾಗಾಲೋಟಕ್ಕೆ ಬಲಿಯಾಗಿರುವ ಪ್ರತಿ ರಾಷ್ಟ್ರವೂ ಈ ಮಹಾಮಾರಿಯ ರುದ್ರ ನರ್ತನವನ್ನು ನಿಲ್ಲಿಸಲು ಶ್ರಮಿಸುತ್ತಿವೆ. ಈ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಲಾಕ್‌ಡೌನ್ ನಿಯಮವನ್ನು ವಿಸ್ತರಿಸುತ್ತಿದೆ. ಈಗಾಗಲೇ ಕೋವಿಡ್ 19 ಸಾವಿನ ಸಂಖ್ಯೆ 37,000 ದಾಟಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳೂ ಸಂಕಷ್ಟಕ್ಕೆ ಸಿಲುಕಿವೆ.
ಭರವಸೆ ಕಳೆದುಕೊಂಡ ರಾಷ್ಟ್ರಗಳು : ವೈರಸ್ ಅಟ್ಟಹಾಸದಿಂದ ಆಘಾತಕ್ಕೊಳಗಾಗಿರುವ ಇಟಲಿ ಮತ್ತು ಸ್ಪೇನ್‌ನಲ್ಲಿ ಈಗ ಭರವಸೆಯೇ ಮಾಯವಾಗಿದೆ. ಇಟಲಿಯ ಲಾಕ್‌ಡೌನ್ ಕನಿಷ್ಠ ಎಪ್ರಿಲ್ 12ರವರೆಗೆ ಮುಂದುವರಿಯಲಿದ್ದು, ಜಗತ್ತಿನ ಒಟ್ಟು ಜನಸಂಖ್ಯೆಯ ಎರಡು – ಐದನೇ ಭಾಗದಷ್ಟು ಜನಸಂಖ್ಯೆ ಮನೆಯೊಳಗೆ ಬಂಧಿಯಾಗಿದ್ದಾರೆ.
ಬಣಗುಡುತ್ತಿವೆ ರಸ್ತೆಗಳು : ರಷ್ಯಾದ ಮಾಸ್ಕೋ ಮತ್ತು ನೈಜೀರಿಯಾದ ಲಾಗೋಸ್ ನಗರದ ರಸ್ತೆಗಳು ಬಣಗುಡುತ್ತಿದ್ದು, ಅಮೆರಿಕದ ವರ್ಜೀನಿಯಾ, ಮೇರಿಲ್ಯಾಂಡ್ ಮತ್ತು ಕಾನ್ಸಾಸ್ ನಗರಗಳಲ್ಲಿ ತರ್ತು ಲಾಕ್‌ಡೌನ್ ಜಾರಿಯಲ್ಲಿದೆ. ಇನ್ನೂ ಇಟಲಿಯಲ್ಲಿ ರಾಷ್ಟ್ರಿಯ ಲಾಾಕ್‌ಡೌನ್ ನಿಯಮ ಜಾರಿಯಲ್ಲಿದ್ದು, ಕೇವಲ 24 ಗಂಟೆಗಳಲ್ಲಿ 812 ಮಂದಿ ಬಲಿಯಾಗಿದ್ದಾರೆ. ದೇಶದ ಒಟ್ಟಾರೆ ಸಾವಿನ ಪ್ರಮಾಣ 11,591ಕ್ಕೆ ತಲುಪಿದೆ ಇಟಲಿಯ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವಾದ ಲೊಂಬಾರ್ಡಿಯ ಮುಖ್ಯ ವೈದ್ಯಾಧಿಕಾರಿ ಗಿಯುಲಿಯೊ ಗಲೆರಾ ಹೇಳಿದರು. ಇನ್ನೂ ಸ್ಪೇನ್ ಕೂಡ ಕೇವಲ 24 ಗಂಟೆಗಳಲ್ಲಿ 812 ಸೋಂಕು ಪೀಡಿತರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದೆ.
ಮಿಲಿಟರಿ ವೈದ್ಯಕೀಯ ಹಡಗಿನ ಮೊರೆ : ಇನ್ನೊಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಉತ್ತುಂಗಕ್ಕೇರಿದ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಮೇಲಿನ ಅತಿಯಾದ ಒತ್ತಡವನ್ನು ನಿವಾರಿಸಲು ನ್ಯೂಯಾರ್ಕ್ ಯುಎಸ್ ಮಿಲಿಟರಿ ವೈದ್ಯಕೀಯ ಹಡಗಿನ ಮೊರೆ ಹೋಗಿದೆ.
ಹಸಿವಿನಿಂದ ಬಳಲುತ್ತಿರುವ ಆಫ್ರಿಕಾ/ ಏಷ್ಯಾ ಬಡ ನಗರಗಳು : ಇನ್ನೂ ಕೋವಿಡ್ 19 ನಿಯಂತ್ರಣಕ್ಕಾಗಿ ಪ್ರಪಂಚದಾದ್ಯಂತ ಜಾರಿ ಮಾಡಿರುವ ಲಾಕ್‌ಡೌನ್ ಹಲವಾರು ಸಮಸ್ಯೆ ಮತ್ತು ಸಂಕಷ್ಟಗಳನ್ನು ಸೃಷ್ಟಿಸಿದೆ. ಸೋಂಕು ಅನ್ನು ತಡೆಗಟ್ಟಲು ಆಫ್ರಿಕಾ ಕೂಡ ಲಾಕ್‌ಡೌನ್ ಮೊರೊ ಹೋಗಿದ್ದು, ಅಲ್ಲಿನ ಸಾರ್ವಜನಿಕರು ಅಗತ್ಯ ವಸ್ತುಗಳ ಕೊರತೆಯಿಂದ ಬಳಲುತವಂತಾಗಿದೆ.
ಬದುಕುಳಿಯುವುದು ಹೇಗೆ ? : ಇನ್ನೂ ಜಿಂಬಾಬ್ವೆ ನಿವಾಸಿ ಐರೀನ್ ರುವಿಸಿ ತರಕಾರಿ ವ್ಯಾಪಾರ ನಡೆಸುತ್ತಿದ್ದು, ಸದ್ಯ ಉತ್ಪನ್ನ ಸರಬರಾಜು ಅಗುತ್ತಿಲ್ಲ. ಪ್ರತಿನಿತ್ಯ ಜನರು ಅಂಗಡಿ ಬಳಿ ಬಂದು ಖಾಲಿ ಕೈಯಲ್ಲಿ ಹಿಂದಿರುಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ “ನಾವು ಹೇಗೆ ಬದುಕುಳಿಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಒಟ್ಟಾರೆ ಕೋವಿಡ್ 19 ಸೋಂಕಿನಿಂದ ಈಗಾಗಲೇ ಲಕ್ಷಾಂತರ ಜನರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಈ ಪ್ರಾಂತ್ಯದ ಜನರು ಆರ್ಥಿಕ ನೆರವು ಘೋಷಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.