Advertisement
ಕರ್ಫ್ಯೂ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಎಪಿಎಂಸಿಗಳಲ್ಲಿ ಬೆಳಿಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಷ್ಟು ಕಡಿಮೆಅವಧಿಯಲ್ಲಿ ದೂರದ ಹಳ್ಳಿಗಳಿಂದ ತರಕಾರಿಯನ್ನುಮಾರುಕಟ್ಟೆಗೆ ತಂದು ಮಾರಾಟ ಮಾಡಲು ರೈತರಿಗೆಸಾಧ್ಯವಾಗುತ್ತಿಲ್ಲ. 10ಗಂಟೆಯಾಗುತ್ತಲೇ ವ್ಯಾಪಾರ ಬಂದ್ ಮಾಡುತ್ತಿರುವುದರಿಂದ ಕ್ವಿಂಟಲ್‌ಗಟ್ಟಲೆ ತರಕಾರಿಮಾರಾಟವಾಗದೆ ಉಳಿಯುತ್ತಿದೆ. ಹೀಗಾಗಿ ರೈತರುಒಂದೆರಡು ದಿನ ಕಾದು ನೋಡಿ ಕೊನೆಗೆ ವ್ಯಾಪಾರಸ್ಥರುಕೇಳಿದಷ್ಟು ದರಕ್ಕೆ ಕೊಟ್ಟು ಹೋಗುವಂತಾಗಿದೆ.
Related Articles
Advertisement
ಕೆಲವು ರೈತರು ಪ್ರತಿ ದಿನ ಸಂಜೆಯೇ ತರಕಾರಿಗಳನ್ನು ಎಪಿಎಂಸಿಗೆ ತರುತ್ತಿದ್ದಾರೆ. ಆದರೆ, ವ್ಯಾಪಾರ ಮಾಡಲುಅವಕಾಶ ಇಲ್ಲದೇ ಇರುವುದರಿಂದ ಬೆಳಿಗ್ಗೆವರೆಗೆ ಕಾದುಬೆಳಿಗ್ಗೆ 6ಗಂಟೆಯಿಂದ 10ಗಂಟೆಯೊಳಗೆ ವ್ಯಾಪಾರಮುಗಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ವ್ಯಾಪಾರಸ್ಥರುಸಹ ಎಪಿಎಂಸಿಯಿಂದ ತರಕಾರಿ ಖರೀದಿಸಿ, ತಮ್ಮಅಂಗಡಿಯಲ್ಲಿಟ್ಟು ಮಾರಾಟ ಮಾಡಲು ಸಹ ಬೆಳಿಗ್ಗೆ 10ಗಂಟೆವರೆಗೆ ಮಾತ್ರ ಅವಕಾಶ ಇರುವುದರಿಂದ ಅವರೂದೊಡ್ಡ ಪ್ರಮಾಣದಲ್ಲಿ ತರಕಾರಿ ಖರೀದಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ತರಕಾರಿ ದರ ಕುಸಿತ ಕಂಡರೂ ಚಿಲ್ಲರೆಖರೀದಿಯಲ್ಲಿ ಮಾತ್ರ ದರ ಕಡಿಮೆಯಾಗಿಲ್ಲ. ಬಹುತೇಕವ್ಯಾಪಾರಸ್ಥರು ಮೊದಲಿನ ದರದಲ್ಲಿಯೇ ತರಕಾರಿಮಾರುತ್ತಿದ್ದಾರೆ. ಕರ್ಫ್ಯೂನಿಂದ ತರಕಾರಿ ಖರೀದಿಗೂ ಕೇವಲನಾಲ್ಕು ತಾಸು ಅವಕಾಶ ಇರುವುರಿಂದ ವ್ಯಾಪಾರಿಗಳು ಹೇಳಿದಷ್ಟು ಬೆಲೆಗೆ ತರಕಾರಿ ಖರೀದಿಸುವಂತಾಗಿದೆ.
ಸಿಎಂಗೆ ಮನವಿ :
ಎಪಿಎಂಸಿಯಲ್ಲಿ ವ್ಯಾಪಾರಕ್ಕೆ ಬೆಳಿಗಿನ ಅವಧಿ ಕೇವಲ ನಾಲ್ಕು ತಾಸು ಮಾತ್ರ ಅವಕಾಶಮಾಡಿಕೊಟ್ಟಿದ್ದರಿಂದ ರೈತರ ಉತ್ಪನ್ನಮಾರಾಟಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದಈ ಅವಧಿಯನ್ನು ಮಧ್ಯಾಹ್ನ 2ಗಂಟೆವರೆಗೆವಿಸ್ತರಿಸಬೇಕು ಎಂದು ಮುಖ್ಯಮಂತ್ರಿಯವರರಾಜಕೀಯ ಕಾರ್ಯದರ್ಶಿ, ಶಾಸಕರೇಣುಕಾಚಾರ್ಯ ಹಾಗೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರಿಗೆ ಪತ್ರ ನೀಡಿ ಮನವಿ ಮಾಡಿಕೊಂಡಿದ್ದಾರೆ.
ಶೇ.40 ತರಕಾರಿ ನಷ್ಟ :
ಶುಕ್ರವಾರ ದಾವಣಗೆರೆ ಎಪಿಎಂಸಿಯಲ್ಲಿ ಆವಕವಾದ ತರಕಾರಿ ಪ್ರಮಾಣ ಅವಲೋಕಿಸಿದರೆ, ಮಾರುಕಟ್ಟೆಗೆ 35ಕ್ವಿಂಟಲ್ ಹಸಿಮೆಣಸು, 20ಕ್ವಿಂ. ದೊಣ್ಣಮೆಣಸು, 30ಕ್ವಿಂ. ನುಗ್ಗೆ, 15ಕ್ವಿಂ.ಬೀಟರೂಟ್, 20ಕ್ವಿಂ. ಹಾಗಲಕಾಯಿ, 25ಕ್ವಿಂ.ಕ್ಯಾರೇಟ್, 20ಕ್ವಿಂ. ಬೆಂಡೆಕಾಯಿ, 15ಕ್ವಿಂ. ಟೊಮೆಟೋ,15ಕ್ವಿಂ. ಹಿರೇಕಾಯಿ, 10ಕ್ವಿಂ.ತೊಂಡೆಕಾಯಿ, 25ಕ್ವಿಂ. ಹುರಳಿಕಾಯಿ ಬಂದಿತ್ತು.ಎಲ್ಲವೂ ಸರಾಸರಿ ಶೇ. 40ರಷ್ಟು ತರಕಾರಿ ವ್ಯಾಪಾರವಾಗದೆ ಉಳಿದಿದೆ.
ಹೊರಗಡೆ ದೊಡ್ಡ ಪ್ರಮಾಣದಲ್ಲಿ ತರಕಾರಿಹೋಗುತ್ತಿಲ್ಲ. ತರಕಾರಿ ಮಾರಾಟ ಸ್ಥಳೀಯವ್ಯಾಪಾರವನ್ನೇ ಅವಲಂಬಿಸಿದೆ. ಇತ್ತ ತರಕಾರಿಮಾರುವ ರೈತರಿಗೂ, ವರ್ತಕರಿಗೂ ವ್ಯಾಪಾರ ಮಾಡುವ ಅವಧಿ ಸಾಕಾಗುತ್ತಿಲ್ಲ. ನಂದಿನ ಹಾಲಿನಅಂಗಡಿಯಂತೆ ತರಕಾರಿ ಮಾರಾಟ, ವ್ಯಾಪಾರಕ್ಕೂ ರಾತ್ರಿ 8ಗಂಟೆವರೆಗೆ ಅವಕಾಶ ನೀಡಬೇಕು. -ಹನುಮಂತ, ವರ್ತಕ, ಎಚ್.ಎಂ.ವಿ. ವೇಜಿಟೇಬಲ್ಸ್.
ಸರ್ಕಾರದ ಮಾರ್ಗಸೂಚಿಯಂತೆಎಪಿಎಂಸಿಯಲ್ಲಿ ಬೆಳಿಗ್ಗೆ 6ರಿಂದ10ಗಂಟೆವರೆಗೆ ವ್ಯಾಪಾರ ನಡೆಯುತ್ತಿದೆ. ಕರ್ಫ್ಯೂ ಕಾರಣದಿಂದ ಮಾರಾಟ ಪ್ರಮಾಣ ಸ್ವಲ್ಪ ಕುಸಿದಿದೆ.ಸ್ಥಳೀಯ ಬೇಡಿಕೆಗೆ ತಕ್ಕಂತೆ ರೈತರು ಉತ್ಪನ್ನಗಳನ್ನುತರುತ್ತಿದ್ದಾರೆ. ವ್ಯಾಪಾರ ಅವಧಿ ವಿಸ್ತರಣೆಬಗ್ಗೆ ಸರ್ಕಾರದಿಂದ ಮಾರ್ಗಸೂಚಿ ಬಂದರೆ ಅನುಷ್ಠಾನಗೊಳಿಸಲಾಗುವುದು. -ದೊರೆಸ್ವಾಮಿ, ಕಾರ್ಯದರ್ಶಿ, ಎಪಿಎಂಸಿ.
ಮಾರುಕಟ್ಟೆಯಲ್ಲಿ ತಾಜಾ ತರಕಾರಿಗೆ ಉತ್ತಮ ಬೆಲೆ ಸಿಗುತ್ತದೆ. ಹಾಗಾಗಿ ನಾವು ಸಂಜೆ ಅಥವಾ ಬೆಳಗ್ಗೆ ಜಮೀನಿನಲ್ಲಿ ತರಕಾರಿ ಕೀಳುತ್ತೇವೆ.ಅದನ್ನು ಎಪಿಎಂಸಿಗೆ ತರುವಷ್ಟರಲ್ಲಿ ಬೆಳಗ್ಗೆ 8-9ಗಂಟೆಆಗುತ್ತದೆ. 10ಗಂಟೆ ಆಗುತ್ತಲೇ ಎಪಿಎಂಸಿಯವರುವ್ಯಾಪಾರ ಬಂದ್ ಮಾಡಿಸುತ್ತಾರೆ. ಇದರಿಂದ ತಂದತರಕಾರಿ ಮಾರಾಟವಾಗದೆ ಹಾಗೇ ಉಳಿಯುತ್ತಿದೆ. ಸರ್ಕಾರ ವ್ಯಾಪಾರದ ಅವಧಿ ವಿಸ್ತರಿಸಬೇಕು.– ಪ್ರಕಾಶ್ ದೇವಿಕೆರೆ, ರೈತ
-ಎಚ್.ಕೆ. ನಟರಾಜ