Advertisement
ಇಲ್ಲೊಬ್ಬ ಭೂಪ ಸಿಗರೇಟ್‌ಗಾಗಿ ಪಕ್ಕದ ದೇಶಕ್ಕೆ ಹೋಗಿ ಅಪಾ ಯವನ್ನು ಎದುರಿಸಿ 120 ಪೌಂಡ್ ದಂಡ ಪಾವತಿಸಿ ದ್ದಾನೆ. ಅದೃಷ್ಟವಶಾತ್ ಪೊಲೀಸರು ಮತ್ತೆ ಮನೆಗೆ ತಂದು ಬಿಟ್ಟಿದ್ದಾರೆ.
ಪೊಲೀಸರ ಆದೇಶದಂತೆ ಮನೆಗೆ ಹಿಂದಿರುಗಿದವನೇ ಮತ್ತೂಂದು ಉಪಾಯ ಹುಡುಕಿದೆ. ತಾನು ವಾಸವಿರುವ ಸ್ಥಳದಿಂದ ಸ್ಪೇನ್‌ನ ಲಾ ಜಾನ್ ಕ್ವೆರಾಕ್ಕೆ ಅಂದಾಜು 40 ಕಿ.ಮೀ. ದೂರ. ಕಾಲ್ನಡಿಗೆಯಲ್ಲೇ ಹೊರಡಲು ಅನುವಾದ. ಅರ್ಧ ದಿನದ ಪಯಣವೆಂದು ಭಾವಿಸಿ ಪೊಲೀಸರ ಕಣ್ತಪ್ಪಿಸಿ ಬೆಟ್ಟ, ಕಂದಕ ದಾಟಲು ಹೊರಟ.
Related Articles
ಆದರೆ ಹೀಗೆ ಗುಡ್ಡ ಪ್ರದೇಶಗಳ ಮಧ್ಯೆ ಹೊರಟವನು ಪೈರೆನೀಸ್ ಬೆಟ್ಟಗಳ ನಡುವೆ ಸಾಗುವಾಗ ಆಯತಪ್ಪಿ ಕಂದಕಕ್ಕೆ ಬಿದ್ದ. ಆಪಾಯ ಸಿಲುಕಿ ಮುಂದೇನು ಮಾಡುವುದು ಎಂದು ಯೋಚಿಸುತ್ತಿದವನಿಗೆ ತನ್ನ ಮೊಬೈಲ್ ನೆನಪಾಯಿತು. ತತ್‌ಕ್ಷಣ ಫೋನ್ ತಗೆದುಕೊಂಡು ಎಸ್‌ಒಎಸ್ ಸಂದೇಶ ರವಾನಿಸಿದ. ಮೌಂಟೇನ್ ಪೊಲೀಸರು ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ಆಗಮಿಸಿ ಕಂದಕಕ್ಕೆ ಬಿದ್ದವನನ್ನು ಎತ್ತಿದರು.
Advertisement
ದಂಡ ತೆತ್ತಸುರಕ್ಷಿತವಾಗಿ ಪುನಃ ಆತನ ನಿವಾಸದ ಬಳಿ ಬಿಟ್ಟ ಪೊಲೀಸರು ಲಾಕ್‌ಡೌನ್ ನಿಯಮ ಉಲ್ಲಂ ಸಿ ಸಿಗರೇಟ್ ಖರೀದಿಗೆ ತೆರಳಿದ್ದಕ್ಕೆ 120 ಪೌಂಡ್ ದಂಡ ವಿಧಿಸಿದರು. ಸದ್ಯ ಫ್ರಾ®Õ…ನಲ್ಲಿ ಪರಿಸ್ಥಿತಿ ಹೇಗಿದೆ ಅಂದರೆ ಯಾದ ದಾಖಲೆಗಳಿಲ್ಲದೆ ಯಾರಾದರೂ ರಸ್ತೆಗೆ ಇಳಿದರೆ 50 ಪೌಂಡ್‌ಗಿಂತಲೂ ಹೆಚ್ಚು ದಂಡ ತೆರಲೇಬೇಕು. ಸುಷ್ಮಿತಾ ಜೈನ್