ಬೆಂಗಳೂರು: ಲಾಕ್‌ಡೌನ್ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ನಗರದಲ್ಲಿ ತುರ್ತು ಸೇವೆಗಳು ಹಾಗೂ ಅಗತ್ಯ ಸೇವೆಗಳು ಹೊರತು ಪಡಿಸಿ ಇತರೆ ವಾಹನಗಳ ಸಂಚಾರ ಹಾಗೂ ಸೇವೆಗಳು ನಿರ್ಬಂಧಿಸಲಾಗಿದೆ. ಆಸ್ಪತ್ರೆ, ಪ್ರಾವಿಜನ್ ಸ್ಟೋರ್, ದಿನ ಬಳಕೆ ವಸ್ತುಗಳು, ಹೋಟೆಲ್ , ಮಾಂಸದಂಗಡಿಗಳು, ತರಕಾರಿ, ಮೆಡಿಕಲ್ ಸೇರಿ ಕೆಲವೊಂದು ಅಗತ್ಯ ಸೇವೆಗಳು ಕಾರ್ಯ ನಿರ್ವಹಿಸಲಿವೆ. ಭಾನುವಾರ ಸಂಪೂರ್ಣ ಲಾಕ್‌ಡೌನ್ ಇರುವುದರಿಂದ ಅನಗತ್ಯವಾಗಿ ಓಡಾಡುವ ವಾಹನಗಳನ್ನು ಜಪ್ತಿ ಮಾಡಲಾಗುವುದು. ಅವುಗಳ ವಿರುದ್ಧ ಪ್ರಕರಣ ದಾಖಲಿಸಲಾಗು ವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಗಿ ಭದ್ರತೆ: ಸೋಮವಾರ ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶಿವಾಜಿನಗರ, ಫ್ರೆಜರ್ ಟೌನ್, ಕಮರ್ಸಿಯಲ್ ಸ್ಟ್ರೀಟ್, ಪಾದರಾಯನಪುರ ಸೇರಿ ಮುಸ್ಲಿಂ ಸಮುದಾಯಯವರು ಹೆಚ್ಚಿರುವ ಪ್ರದೇಶ ಗಳಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿತ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಗತ್ಯ ಸೇವೆ ಹೊರತುಪಡಿಸಿ ಉಳಿದಿದ್ದೆಲ್ಲ ಬಂದ್: ಭಾನುವಾರ ಸಂಪೂರ್ಣ ಲಾಕ್‌ಡೌನ್ ಇರಲಿದ್ದು, ಜನ ಸಹಕಾರ ನೀಡಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಆದೇಶಿದ್ದು, ಇದರಂತೆ (ಇಂದು) ನಗರದಲ್ಲಿ ಸಂಪೂರ್ಣ ಲಾಕ್‌ಡೌನ್ ಇರಲಿದೆ. ಅಗತ್ಯ ಸೇವೆಯಾದ ದಿನಸಿ, ಔಷಧಿ ಮಳಿಗೆಗಳನ್ನು ಹೊರತು ಪಡಿಸಿ, ಉಳಿದ ಎಲ್ಲ ಅಂಗಡಿಗಳು ಮುಚ್ಚಿರಲಿವೆ ಎಂದರು. ಈ ಹಿಂದೆ ಲಾಕ್‌ಡೌನ್-1ರಲ್ಲಿ ಇದ್ದ ಕಠಿಣ ಕ್ರಮಗಳನ್ನು ಇಂದು ಪಾಲಿಸಲಾ ಗುವುದು. ಆರೋಗ್ಯ ಸಮಸ್ಯೆ ಇರುವ ವರಿಗೆ ಆಸ್ಪತ್ರೆಗೆ ಹೋಗಲು, ಔಷಧಿ ಖರೀದಿಸಲು ಅವಕಾಶ ನೀಡಲಾಗಿದೆ. ಉಳಿದಂತೆ ಸಾರ್ವಜನಿಕರಿಗೆ ಸಂಚಾರ ಸೌಲಭ್ಯ ನಿರ್ಬಂಧಿಸಲಾಗಿದೆ ಎಂದರು.
ಮಾಂಸ ಮಾರಾಟಕ್ಕೆ ಅವಕಾಶ: ನಗರದಲ್ಲಿ ಭಾನುವಾರ ಕೋಳಿ, ಕುರಿ, ಮೀನು ಸೇರಿದಂತೆ ಸರ್ಕಾರದಿಂದ ಮಾಂಸ ಮಾರಾಟಕ್ಕೆ ಅವಕಾಶ ನೀಡ ಲಾಗಿರುವ ಪ್ರಾಣಿಗಳ ಮಾಂಸ ಮಾರಾ ಟಕ್ಕೆ ಅವಕಾಶವಿರಲಿದೆ ಎಂದು ಬಿಬಿಎಂಪಿಯ ಪಶುಪಾಲನೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಶಶಿಕುಮಾರ್ ಎಸ್ ತಿಳಿಸಿದ್ದಾರೆ. ಮಾಂಸ ಮಾರಾಟವೂ ಅಗತ್ಯ ವಸ್ತುಗಳ ಅಡಿಯಲ್ಲಿ ಬರುವುದರಿಂದ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಲಾಗಿದೆ.
ಕಾನೂನು ಸುವ್ಯವಸ್ಥೆ: ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರು ವುದರಿಂದ ಸೋಮವಾರ ರಂಜಾನ್ ಇರುವುದರಿಂದ ಈಗಾಗಲೇ ಎಲ್ಲ ಐಜಿಪಿ, ಎಸ್‌ಪಿ ಗಳಿಗೆ ಕಾನೂನು ಸುವ್ಯವಸ್ಥೆ ಕುರಿತು ಕಟ್ಟುನಿಟ್ಟಿನ ಕ್ರಮಕಗೊಳ್ಳಲು ಸೂಚಿಸಲಾಗಿದೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಮರ್ ಕುಮಾರ್ ಪಾಂಡೆ ಹೇಳಿದರು.
ಕಬ್ಬನ್ ಪಾರ್ಕ್, ಲಾಲ್‌ಬಾಗ್ ಪ್ರವೇಶ ಇಲ್ಲ: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾನುವಾರ ಲಾಲ್‌ಬಾಗ್, ಕಬ್ಬನ್ ಪಾರ್ಕ್, ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನಗಳನ್ನು ತೆರೆಯುವುದಿಲ್ಲ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮೇ 19ರಿಂದ ಲಾಕ್‌ಡೌನ್ ಸಡಿಲಗೊಳಿಸಿದ್ದರಿಂದ ಉದ್ಯಾನಗಳನ್ನು ವಾಯುವಿಹಾರಿಗಳಿಗಾಗಿ ಬೆಳಗ್ಗೆ ಮತ್ತು ಸಂಜೆ ತೆರೆಯಲಾಗುತ್ತಿತ್ತು. ಆದರೆ ಸರ್ಕಾರದ ಆದೇಶದಂತೆ ಭಾನುವಾರದಂದು ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಮತ್ತು ಎರಡನೇ ಹಂತದ ಲಾಕ್‌ಡೌನ್ ಸಂದರ್ಭದಲ್ಲಿ ಜಾರಿಯಲ್ಲಿದ್ದ ಕಾನೂನುಗಳೇ ಈ ಬಾರಿಯೂ ಮುಂದುವರಿಯಲಿವೆ. ಹದ್ದು ಮೀರಿ ನಡೆದರೆ ಕಾನೂನು ಕ್ರಮಕೈಗೊಳ್ಳಲಾಗುವುದು.
-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ