Advertisement

ಲಾಕ್‌ಡೌನ್‌ ಅಸ್ತ್ರ ತೋರಿಸಿಕೊಟ್ಟ ಚೀನ

03:29 PM Apr 09, 2020 | mahesh |

ವುಹಾನ್‌: ಕೋವಿಡ್‌-19 ವೈರಸ್‌ನ ತವರು ವುಹಾನ್‌ನಗರ ಅಂತಿಮವಾಗಿ ಲಾಕ್‌ಡೌನ್‌ನಿಂದ ಮುಕ್ತವಾಗಿದೆ. ಈ ಮೂಲಕ ಕೋವಿಡ್‌ 19 ಹರಡದಂತೆ ತಡೆಯಲು ಕ್ವಾರಂಟೈನ್‌ ಒಳ್ಳೆಯ ಅಸ್ತ್ರ ಎಂಬುದಕ್ಕೆ ಸಾಕ್ಷ್ಯಒದಗಿಸಿದೆ.

Advertisement

ಒಟ್ಟು 76 ದಿನಗಳ ಬಳಿಕ ಚೀನದ ಅತ್ಯಂತ ಈ ಸೂಕ್ಷ್ಮ ಪ್ರದೇಶ ಮೊದಲಿ ನಂತೆ ತೆರೆದುಕೊಂಡಿದೆ. ರೈಲು ಸೇವೆ ಪುನರಾರಂಭಗೊಂಡಿದೆ. ಬುಧವಾರ ಬೆಳಗ್ಗೆ ವುಹಾನ್‌ ನಗರದಲ್ಲಿ ಮೊದಲ ರೈಲು ಪ್ರಯಾಣಿಸಿದೆ. ಜನರು ತಮ್ಮ ಮೊದಲಿನ ಜೀವನಕ್ಕೆ ಮರಳಿದ್ದಾರೆ.

ಎರಡೂವರೆ ತಿಂಗಳುಗಳಿಗಿಂತಲೂ ಹೆಚ್ಚು ಕಾಲ ಮನೆಯೊಳಗೆ ಬಂಧಿಯಾಗಿದ್ದ ಜನರು ಹೊರಗೆ ಬಂದಿದ್ದಾರೆ. ಈ ಮೂಲಕ ಸೋಂಕು ಹರಡದಂತೆ ತಡೆಯಲು ಲಾಕ್‌ಡೌನ್‌ ಪ್ರಬಲ ಅಸ್ತ್ರ ಎಂಬುದನ್ನು ಜಗತ್ತಿಗೆ ವುಹಾನ್‌ನಗರ ತೋರಿಸಿ ಕೊಟ್ಟಿದೆ. ಗೊತ್ತಿರುವಂತೆಯೇ ಡಿಸೆಂಬರ್‌ತಿಂಗಳಲ್ಲಿ ಕೋವಿಡ್‌ ವೈರಸ್‌ ಮೊಟ್ಟ ಮೊದಲ ಬಾರಿಗೆ ಇಲ್ಲಿಯೇ ಪತ್ತೆಯಾಗಿತ್ತು.ಇಲ್ಲಿನ ಪ್ರಾಣಿ   ಗಳ ಮಾರುಕಟ್ಟೆ ಯಿಂದ ಈ ವೈರಸ್‌ ಹರಡಿದೆ ಎಂದು ವೈದ್ಯರು ಹೇಳಿ ದ್ದರು. ಬಳಿಕ ಸಾಂಕ್ರಾಮಿಕ ರೋಗ ಎಂದು ಅರಿತ ಚೀನ, ವೈರಸ್‌ ವಿರುದ್ಧ ಹೋರಾಡಲು ಲಾಕ್‌ಡೌನ್‌ಘೋಷಿಸಿತ್ತು. ವಿಶೇಷವಾಗಿ ವುಹಾನ್‌ ನಗರವನ್ನು ಸಂಪೂರ್ಣ  ವಾಗಿ ಬಂದ್‌ ಮಾಡಲಾಗಿತ್ತು. ಮನೆ  ಯಿಂದ ಹೊರಗೆ ಯಾರೂ ಬರದಂತೆ ಕಣ್ಗಾವಲಿ  ನಲ್ಲಿಡಲಾಗಿತ್ತು. ಈ ಎಲ್ಲಾ ಕಾರಣಕ್ಕೆ ಸೋಂಕು ನಿಯಂತ್ರಣಕ್ಕೆ ಬಂದಿತು. ಚೀನ ಸರಕಾರ ಹೇಳುವಂತೆಯೇ ಕೋವಿಡ್‌ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಇಳಿಕೆ ಯಾ ಗಿದೆ. ಈ ಕಾರಣಕ್ಕೆ ಕಳೆದ ತಿಂಗಳ ಕಡೇ ವಾರ ಚೀನ  ಲಾಕ್‌ಡೌನ್‌ತೆರವುಗೊಳಿಸಲಾಗಿತ್ತು. ಆದರೆ ವುಹಾನ್‌ ನಗರದಲ್ಲಿ ಲಾಕ್‌ಡೌನ್‌ಮುಂದುವರಿದಿತ್ತು.

ಚೀನದಲ್ಲಿ ಕೋವಿಡ್‌ 19 ಪತ್ತೆಯಾದಾಗ ಇತರ ರಾಷ್ಟ್ರಗಳು ಚುರುಕಾಗಲಿಲ್ಲ. ಚೀನದಲ್ಲಿ ಸಾವಿನ ಸಂಖ್ಯೆ ಏರುತ್ತಿದ್ದಂತೆಯೇ ಜಗತ್ತು ಎಚ್ಚೆತ್ತುಕೊಂಡಿತು. ಚೀನ ಅನುಸರಿಸಿದ ಲಾಕ್‌ ಡೌನ್‌ ಅಸ್ತ್ರವನ್ನು ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಅನುಸರಿಸಿದವು. ಇದರ ಪರಿಣಾಮವಾಗಿ ಸೋಂಕು ಹರಡುವ ಸಾಧ್ಯತೆ ಕ್ಷೀಣಿಸಿತು. ಮಾತ್ರವಲ್ಲದೆ ಧನಾತ್ಮಕ ಫಲಿತಾಂಶವನ್ನು ಕಾಣುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next