ತುಮಕೂರು: ಕೋವಿಡ್-19 ಸಾಂಕ್ರಾ ಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ಮಾರ್ಗಸೂಚಿ ಯನ್ವಯ ಭಾನುವಾರ ಅಗತ್ಯ ಸೇವೆ ಹೊರತುಪಡಿಸಿ ಜಿಲ್ಲಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರು ತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ: ಸರ್ಕಾರದ ಆದೇಶದಂತೆ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ಸೇವೆಯಲ್ಲಿರುವ ವರಿಗೆ ಪಾರ್ಸಲ್ ಆಹಾರ ವಿತರಿಸುವ ಹೋಟೆಲ್‌ಗಳು, ದಿನಸಿ, ತರಕಾರಿ, ಹಾಲು, ಮಾಂಸದ ಅಂಗಡಿ, ಔಷಧ ಮಳಿಗೆ, ಆಸ್ಪತ್ರೆ, ಕ್ಲಿನಿಕ್‌ಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ ಈವರೆಗೂ 24 ಕೋವಿಡ್ -19 ಸೋಂಕು ಪ್ರಕರಣಗಳು ವರದಿ ಯಾಗಿದ್ದು, ಈ ಪೈಕಿ 2 ಮೃತಪಟ್ಟಿದ್ದಾರೆ ಹಾಗೂ ಐವರು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಗುಣಮುಖರಾದ ಹಾಗೂ ಮೃತಪಟ್ಟ ವರನ್ನು ಹೊರತುಪಡಿಸಿ ಉಳಿದ 17 ಸೋಂಕಿತ ಪ್ರಕರಣಗಳ ಪೈಕಿ 16 ಮಂದಿ ಸೋಂಕಿತರಿಗೆ ಕೋವಿಡ್-19 ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆ ಲ್ಲರೂ ಆರೋಗ್ಯಕರವಾಗಿದ್ದು, ಯಾವುದೇ ತೊಂದರೆ ಇರುವುದಿಲ್ಲ. ಮತ್ತೋರ್ವ ಸೋಂಕಿತೆ ಗರ್ಭಿಣಿಯಾಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ಆಕೆಗೆ ಹೆರಿಗೆ ಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚು ಕೊರೊನಾ ಪ್ರಕರಣಗಳು ಬರುತ್ತಿದ್ದ ಜಿಲ್ಲೆಯಲ್ಲಿ ಕರಾಳ ಶನಿವಾರ ವಾಗುತ್ತದೆ ಅಷ್ಟರ ಮಟ್ಟಿಗೆ ಸೋಂಕು ಪ್ರಕರಣಗಳು ಬರಬಹುದು ಎಂದು ನಿರೀ ಕ್ಷಿಸಲಾಗಿತ್ತು, ಆದರೆ ಶನಿವಾರ ಯಾವುದೇ ಹೊಸ ಕೋವಿಡ್-19 ಪ್ರಕರಣ ದಾಖ ಲಾಗಿಲ್ಲ ಎಂದು ತಿಳಿಸಿದರು.
ನಗರದ ಪಿಎಚ್ ಕಾಲೋನಿಯನ್ನು ನಿಯಂತ್ರಿತ ವಲಯ ಕಂಟೈನ್ಮೆಂಟ್ ಜೋನ್ ದಿಂದ ತೆರವುಗೊಳಿಸಲಾಗಿದೆ. ಕಳೆದ 28 ದಿನಗಳಿಂದ ಪಿಹೆಚ್ ಕಾಲೋನಿಯಲ್ಲಿ ಯಾವುದೇ ಕೋವಿಡ್-19 ಪ್ರಕರಣ ವರದಿಯಾಗದೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ನಿಯಂತ್ರಿತ ವಲಯವನ್ನಾಗಿ ಪರಿವರ್ತಿಸಿದ್ದ ಅವಧಿ ಯಲ್ಲಿ ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ ಎಂದು ಅವರು ಸ್ಥಳೀಯ ನಿವಾಸಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ತುಮಕೂರು ತಾಲೂಕಿನ ಹೆಬ್ಬೂರು ಹಾಗೂ ಸದಾಶಿವನಗರವನ್ನು ನಿಯಂತ್ರಿತ ವಲಯವನ್ನಾಗಿ ಪರಿವರ್ತಿಸಲಾಗಿದೆ. ಈ ಹಿಂದೆ ಖಾದರ್ ನಗರವನ್ನೂ ಸಹ ನಿಯಂತ್ರಿತ ವಲಯವನ್ನಾಗಿ ಪರಿವರ್ತಿಸ ಲಾಗಿದೆ ಎಂದು ಅವರು ತಿಳಿಸಿದರು.