Advertisement

ಲಾಕ್‌ಡೌನ್‌ 2.0; ಪೊಲೀಸರಿಂದ ಬಿಗಿ ಕ್ರಮ

05:16 PM Apr 16, 2020 | Suhan S |

ಹಾವೇರಿ: ಕೋವಿಡ್ 19 ಸೋಂಕು ನಿಯಂತ್ರಿಸಲು ಸರ್ಕಾರ ಹೊರಡಿಸಿರುವ ಎರಡನೇ ಹಂತದ ಲಾಕ್‌ಡೌನ್‌ನ ಮೊದಲ ದಿನ ಬುಧವಾರವೂ ಪೊಲೀಸರು ಬಿಗಿ ಕ್ರಮ ಮುಂದುವರಿಸಿದರು.

Advertisement

ಬೈಕ್‌ ವಶ, ದಂಡ, ಪ್ರಕರಣ ದಾಖಲು, ಪೆಟ್ರೋಲ್‌ಗೆ ಪಾಸ್‌ ಕಡ್ಡಾಯ, ಎಲ್ಲೆಡೆ ಬ್ಯಾರಿಕೇಡ್‌ ಹಾಕಿದ್ದರಿಂದ ಅನಗತ್ಯ ವಾಹನ ಸಂಚಾರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಎಲ್ಲ ವ್ಯಾಪಾರಸ್ಥರು ಈಗ ಮನೆ ಬಾಗಿಲಿಗೆ ಹೋಗಿ ತರಕಾರಿ ಮಾರಾಟ ಮಾಡುವುದು ಮುಂದುವರಿದಿದೆ. ದಿನಸಿ ಅಂಗಡಿಗಳು ತೆರೆದಿದ್ದು ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಿದರು. ಶುದ್ಧ ಕುಡಿಯುವ ನೀರಿನ ಘಟಕ, ಬ್ಯಾಂಕ್‌ ಸೇರಿದಂತೆ ಎಲ್ಲೆಡೆ ಜನ ಸಾಮಾಜಿಕ ಅಂತರಕ್ಕೆ ಮಹತ್ವ ನೀಡುವುದು ಮುಂದುವರಿಯಿತು.

ಬಡವರಿಗೆ, ಕಾರ್ಮಿಕರಿಗೆ, ಸರ್ಕಾರದಿಂದ, ದಾನಿಗಳಿಂದ ಸಂಘ- ಸಂಸ್ಥೆಗಳಿಂದ ಆಹಾರ ಧಾನ್ಯ ಸಹಾಯ, ಪೊಲೀಸರು, ವೈದ್ಯ ಸಿಬ್ಬಂದಿಗೆ ನೀರು,ಉಪಹಾರ ಸೇವೆ ಮುಂದುವರಿಯಿತು. ಬಹುತೇಕ ರಸಗೊಬ್ಬರ, ಬೀಜ ಮಾರಾಟ, ಕೃಷಿ ಸಲಕರಣೆ ಮಾರಾಟ ಹಾಗೂ ಬೇಕರಿ ಅಂಗಡಿಗಳು ಬಂದ್‌ ಆಗಿಯೇ ಇದ್ದವು

ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಅನುಷ್ಠಾನ ಮಾಡಲಾಗುತ್ತಿದ್ದು ಏ. 20ರವರೆಗೆ ಇನ್ನಷ್ಟು ಬಿಗಿ ಕ್ರಮ ಜರುಗಿಸಲಾಗುವುದು. ಕೃಷಿ, ವೈದ್ಯಕೀಯ ತುರ್ತು ಅಗತ್ಯ ಸೇರಿದಂತೆ ವಿನಾಯಿತಿ ಇರುವ ಕೆಲ ಸಂದರ್ಭ ಹೊರತುಪಡಿಸಿ ಉಳಿದೆಲ್ಲದವುಗಳಿಗೆ ಕಠಿಣ ಕ್ರಮ ಮುಂದುವರಿಯಲಿದೆ. ಗಡಿ ಪ್ರದೇಶದ ಚೆಕ್‌ಪೋಸ್ಟ್‌ನಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.  -ಕೆ.ಜಿ. ದೇವರಾಜು, ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next