Advertisement

ನಾಲತವಾಡ : ಪ.ಪಂ. ಗೆ ಬಾಡಿಗೆ ಕಟ್ಟದ ವಾಣಿಜ್ಯ ಮಳಿಗೆಗೆ ಬೀಗ

01:12 PM Jul 06, 2021 | Team Udayavani |

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ  ನಾಲತವಾಡ ಪಟ್ಟಣದಲ್ಲಿ ಪಟ್ಟಣ ಪಂಚಾಯತ್ ಗೆ ಬಾಡಿಗೆ ನೀಡದ ವಾಣಿಜ್ಯ ಮಳಿಗೆಗಳಿಗೆ ಮಂಗಳವಾರ  ಬೀಗ ಜಡಿಯಲಾಯಿತು.

Advertisement

ಪಟ್ಟಣದಲ್ಲಿರುವ ಪಟ್ಟಣ ಪಂಚಾತ್  ಮಾಲೀಕತ್ವದ ವಾಣಿಜ್ಯ ಸಂಕೀರ್ಣದಲ್ಲಿ 10 ಮಳಿಗೆ ಇವೆ. ಬಾಡಿಗೆ ನೀಡಿದ್ದು, ಬಾಡಿಗೆ ಪಡೆದ ವ್ಯಾಪಾರಿಗಳು 2016-17 ರಿಂದ ಬಾಡಿಗೆ ಕಟ್ಟಿಲ್ಲ.

ವಾಣಿಜ್ಯ ಸಂಕೀರ್ಣದಲ್ಲಿ ಪ್ರದೇಶಕ್ಕೆ ಪೊಲೀಸರೊಂದಿಗೆ ತೆರಳಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ, ವ್ಯಾಪಾರಿ ಮಳಿಗೆಗಳಿಗೆ ಬೀಗ ಜಡಿದು,  ಸೀಲ್ ಹಾಕಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ  ಮುದ್ದೇಬಿಹಾಳ ಪೊಲೀಸ್ ಠಾಣೆ ಎಎಸೈ ಎ.ಐ.ಸಾಲಿ ನೇತೃತ್ವದಲ್ಲಿ S.B.ನ್ಯಾಮಣವರ ಸಹಿತ ಪೊಲೀಸರು ಭದ್ರತೆ ಕಲ್ಪಿಸಿದ್ದರು.

ಪಟ್ಟಣ ಪಂಚಾಯತನ ಅನೀಲ್ ಚಟ್ಟೇರ, ಚಂದ್ರಶೇಖರ ಸಗರ ಸೇರಿದಂತೆ ಇತರೆ ಸಿಬ್ಬಂದಿ ಈ‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next