ಲಖನೌ : ಕೋವಿಡ್ ನಿಂದ ದೇಶವೇ ನಲುಗುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳು ಸೋಂಕು ನಿಯಂತ್ರಣಕ್ಕೆ ಮುಂದಾಗಿವೆ. ಉತ್ತರಪ್ರದೇಶದಲ್ಲಿಯೂ ಕೂಡ ಕೋವಿಡ್ ಆರ್ಭಟ ಮುಂದುವರೆದಿದ್ದು, ಯೋಗಿ ಸರ್ಕಾರ ಮೇ 24 ರವರೆಗೆ ಅಂದ್ರೆ 10 ದಿನಗಳವರೆಗೆ ಲಾಕ್ಡೌನ್ ಅನ್ನು ವಿಸ್ತರಣೆ ಮಾಡಿದೆ.
ಕೋವಿಡ್ ಪರಿಸ್ಥಿತಿಯನ್ನುಕುರಿತಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ದೆಹಲಿಯಲ್ಲಿ ನಾಲ್ಕು ವಾರಗಳಿಂದ ಜಾರಿಯಲ್ಲಿರೋ ಲಾಕ್ ಡೌನ್ ಇಂದು ಮುಕ್ತಾಯವಾಗಲಿದೆ. ಸತತ ಎರಡು ಬಾರಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಲಾಕ್ಡೌನ್ ವಿಸ್ತರಿಸಿದ್ದರು. ಮತ್ತೊಂದು ವಾರ ಇದೇ ರೀತಿ ಲಾಕ್ ಡೌನ್ ಮುಂದುವರೆಸುತ್ತಾರಾ ಕಾದು ನೋಡಬೇಕು .
Advertisement