Advertisement

ಲಾಕ್‌ಡೌನ್‌: ಸ್ಥಳೀಯ ತೀರ್ಮಾನ?

02:08 AM Jul 21, 2020 | Hari Prasad |

ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ತೆರವು ನಿರ್ಧಾರದ ಬೆನ್ನಲ್ಲೇ ದಕ್ಷಿಣ ಕನ್ನಡ ಸಹಿತ ರಾಜ್ಯದ ಇತರ ಜಿಲ್ಲೆಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.

Advertisement

ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಆಯಾ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ತೀರ್ಮಾನಕ್ಕೆ ಬಿಡುವ ಬಗ್ಗೆ ಚಿಂತನೆ ಇದೆ.

ಬಿಬಿಎಂಪಿ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಜತೆಗೆ ದ.ಕ., ಧಾರವಾಡ, ಬೀದರ್‌, ಯಾದಗಿರಿ, ಕಲಬುರಗಿ, ಬೆಳಗಾವಿ, ರಾಯಚೂರುಗಳಲ್ಲಿಯೂ ಲಾಕ್‌ಡೌನ್‌ ಜಾರಿಯಲ್ಲಿದೆ.

ಸೋಮವಾರ ನಡೆದ ಕೋವಿಡ್‌ ಕಾರ್ಯಪಡೆ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ.

ಲೋಪವಾಗದಂತೆ ಕ್ರಮ
ಕೋವಿಡ್‌ ಕಾರ್ಯಪಡೆ ಸಭೆಯಲ್ಲಿ ಕೋವಿಡ್ 19 ನಿಯಂತ್ರಣ ನಿಟ್ಟಿನಲ್ಲಿ ತಪಾಸಣೆ, ತ್ವರಿತ ಪರೀಕ್ಷಾ ವರದಿ, ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

Advertisement

ತಪಾಸಣೆ ಮತ್ತು ಪರೀಕ್ಷೆ ಪ್ರಮಾಣ ಹೆಚ್ಚಳ, ಸಿಎಂ ಸೂಚನೆ ನೀಡಿರುವಂತೆ ಆಯಾ ವಿಧಾನ ಸಭೆ ಕ್ಷೇತ್ರ ಮತ್ತು ವಾರ್ಡ್‌ ಮಟ್ಟದಲ್ಲೇ ಸೋಂಕುಪೀಡಿತರಿಗೆ ಚಿಕಿತ್ಸೆ ದೊರೆಯುವಂತೆ ಮಾಡುವುದು.

ಪರೀಕ್ಷೆ ಹೆಚ್ಚಳ, ಸೋಂಕು ಕಡಿಮೆ
ರಾಜ್ಯದಲ್ಲಿ ಸೋಮವಾರ ಹಿಂದೆಂದಿಗಿಂತಲೂ ಅತೀ ಹೆಚ್ಚು 36,473 ಜನರನ್ನು ಕೋವಿಡ್ 19 ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನೊಂದೆಡೆ ಕಳೆದ ಎರಡು ದಿನಗಳಲ್ಲಿ ನಾಲ್ಕು ಸಾವಿರದ ಗಡಿಯಲ್ಲಿದ್ದ ಸೋಂಕು ಪ್ರಕರಣಗಳು ಇಳಿಕೆಯಾಗಿದೆ.

3,648 ಮಂದಿಗೆ ಹೊಸದಾಗಿ ಸೋಂಕು ತಗಲಿದ್ದು, 72 ಸೋಂಕುಪೀಡಿತರು ಮೃತಪಟ್ಟಿದ್ದಾರೆ. ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳು 67,420ಕ್ಕೆ, ಸಾವಿಗೀಡಾದವರ ಸಂಖ್ಯೆ 1,403ಕ್ಕೆ, ಗುಣಮುಖರಾದವರ ಸಂಖ್ಯೆ 23,795ಕ್ಕೆ ಏರಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು 1,452 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, 31 ಮಂದಿ ಮೃತಪಟ್ಟಿದ್ದಾರೆ.

ಭರವಸೆ ಮೂಡಿಸಿದ ಆಕ್ಸ್‌ಫ‌ರ್ಡ್‌ ಲಸಿಕೆ
ಲಂಡನ್: ಆಕ್ಸ್‌ ಫ‌ರ್ಡ್‌ ವಿಶ್ವವಿದ್ಯಾನಿಲಯ ಸಂಶೋಧಿಸಿರುವ ಕೋವಿಡ್ 19 ಲಸಿಕೆಯ ಆರಂಭಿಕ ಎರಡು ಹಂತಗಳ ಪ್ರಯೋಗ ಫ‌ಲಿತಾಂಶಗಳು ಭರವಸೆ ಮೂಡಿಸಿವೆ. ಆಕ್ಸ್‌ ಫ‌ರ್ಡ್‌ ತಜ್ಞರು ಶೋಧಿಸಿದ ‘ಎಝೆಡ್‌ಡಿ1222’ ಲಸಿಕೆಯನ್ನು ಪಡೆದ ಹಲವರಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಯಾವುದೇ ಅಡ್ಡ ಪರಿಣಾಮ ಉಂಟು ಮಾಡದೆ ಲಸಿಕೆ ಸೋಂಕು ಪೀಡಿತನ ದೇಹದಲ್ಲಿ ಕೆಲಸ ಮಾಡಿದೆ. ಕೋವಿಡ್ 19 ವಿರುದ್ಧ ಪ್ರಬಲವಾಗಿ ಹೋರಾಡುವ ಟಿ- ಸೆಲ್‌ ರೋಗ ನಿರೋಧಕಗಳನ್ನು ಹೆಚ್ಚಿಸುವಲ್ಲಿ ಸಫ‌ಲವಾಗಿದೆ.

ಜಾಗತಿಕ ಸೋಂಕು ಪೀಡಿತರ ಸಂಖ್ಯೆ : 1,47,41,412

ಒಟ್ಟು ಸಾವು (ಜಗತ್ತು): 6,10,747


ಭಾರತ (ಸೋಂಕು): 11,52,355


ಚೇತರಿಕೆ : 7,24,494


ಸಾವು (ಭಾರತ) : 28,078


ಕರ್ನಾಟಕ (ಸೋಂಕು): 67,420

Advertisement

Udayavani is now on Telegram. Click here to join our channel and stay updated with the latest news.

Next