Advertisement

ಲೋಡ್‌ ಶೆಡ್ಡಿಂಗ್‌ಗೆ ಜನ ಹೈರಾಣ:ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

07:29 PM Mar 05, 2021 | Team Udayavani |

ಕೆಂಭಾವಿ: ಕಳೆದ ಒಂದು ವಾರದಿಂದ ಉಂಟಾಗುತ್ತಿರುವ ಅನ ಧಿಕೃತ ಲೋಡ್‌ ಶೆಡ್ಡಿಂಗ್‌ನಿಂದ ಜನರು ಹೈರಾಣಾಗಿದ್ದಾರೆ. ಕಲಬುರಗಿಯಿಂದ ಗುರುವಾರ ತಾಂತ್ರಿಕ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಪಟ್ಟಣದ 110 ಕೆವಿ ವಿದ್ಯುತ್‌ ಕೇಂದ್ರದಲ್ಲಿ ಸಾಮರ್ಥ್ಯಕ್ಕಿಂತಲೂ ಅ ಧಿಕ ಒತ್ತಡ ಬೀಳುತ್ತಿರುವುದೆ ಈ ಅನ ಧಿಕೃತ ಕರೆಂಟ್‌ ಕಟ್‌ ಆಗಲು ಕಾರಣ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Advertisement

ವಿದ್ಯುತ್‌ ಕೇಂದ್ರದಲ್ಲಿ 10 ಮೆಗ್ಯಾವ್ಯಾಟ್‌ ಶಕ್ತಿಯ ಟ್ರಾನ್ಸ್‌ಫಾರ್ಮರ್‌ ಇದ್ದು ನಿತ್ಯ ಇದಕ್ಕೆ ಶೇ.75ರಷ್ಟು ಮಾತ್ರ ಅಂದರೆ 7 ರಿಂದ 7.5ರ ವರೆಗೆ ವಿದ್ಯುತ್‌ ಸಾಮರ್ಥ್ಯ ಹಾಕಬೇಕು ಎಂಬ ಕೆಪಿಟಿಸಿಎಲ್‌ ನಿಯಮವಿದೆ. ಆದರೆ ಈ ಶಕ್ತಿಯ ವಿರುದ್ಧವಾಗಿ ಈ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ 12 ಪಟ್ಟಣಗಳಿಗೆ ವಿದ್ಯುತ್‌ ಒದಗಿಸಲು ಪ್ರತ್ಯೇಕ μàಡರ್‌ಗಳನ್ನು ಅಳವಡಿಸಿದ್ದು, ಎಲ್ಲ μàಡರ್‌ಗಳಲ್ಲಿ ನಿತ್ಯ 1 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆ ಬರುತ್ತಿದೆ.

ಇದರಿಂದ ಸರಾಸರಿ 12 ಮೆಗಾವ್ಯಾಟ್‌ ವಿದ್ಯುತ್‌ ಶಕ್ತಿಯ ಬೇಡಿಕೆ ಇರುವುದೆ ಇದಕ್ಕೆಲ್ಲ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಕೆಂಭಾವಿ ಪಟ್ಟಣ, ತಾಲೂಕು ಕೇಂದ್ರವಾದ ಹುಣಸಗಿ, ನಗನೂರ, ಮಲ್ಲಾ, ಚಾಮನಾಳ, ಹೆಗ್ಗನದೊಡ್ಡಿ, ಮುದನೂರ, ಯಕ್ತಾಪೂರ, ಯಾಳಗಿ, ಮಂಗಳೂರ ಮೈನ್ಸ್‌ ಸೇರಿದಂತೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಮತ್ತು ಅಸ್ಕಿ ಪಟ್ಟಣಗಳಿಗೂ ಇದೇ 110 ಕೇಂದ್ರದಿಂದ ವಿದ್ಯುತ್‌ ಸರಬರಾಜು ಮಾಡುತ್ತಿದ್ದು, ಇದರಿಂದ ಭಾರಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ರೈತರಿಗೆ ನೀಡಬೇಕಾದ ಏಳು ಗಂಟೆಯ ವಿದ್ಯುತ್‌ ಸರಬರಾಜಿನಲ್ಲೂ ಕೋತಾ ಮಾಡಲಾಗಿದ್ದು, ಇದರಿಂದ ಬೆಳೆಗಳಿಗೆ ನೀರೊದಗಿಸಲು ರೈತರು ಹರಸಾಹಸ ಮಾಡಬೇಕಾದ ಸ್ಥಿತಿ ಬಂದಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ 110 ವಿದ್ಯುತ್‌ ಕೇಂದ್ರಕ್ಕೆ ಕಲಬುರಗಿಯಿಂದ ತಾಂತ್ರಿಕ ತಂಡ ಆಗಮಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next