Advertisement

ಉದ್ಯಾನವನವಾಗಿದ್ದ ಸ್ಥಳವೀಗ ವಾಹನ ಪಾರ್ಕಿಂಗ್‌

01:00 AM Mar 13, 2019 | Harsha Rao |

ಉಡುಪಿ: ನಗರದ ಬಸ್‌ನಿಲ್ದಾಣ ರಸ್ತೆಯ ಎಡ ಪಾರ್ಶ್ವದಲ್ಲಿ ಪ್ರಸ್ತುತ ಇರುವ ದ್ವಿಚಕ್ರವಾಹನ ಪಾರ್ಕಿಂಗ್‌ ಸ್ಥಳವು ಸುಮಾರು 30 ವರ್ಷಗಳ ಹಿಂದೆ ಮಕ್ಕಳು ಆಟವಾಡುವ ಉದ್ಯಾನವನವಾಗಿತ್ತು.

Advertisement

ನಗರ ಬೆಳೆದಂತೆ ಜನಸಂದಣಿ, ವಾಹನ ದಟ್ಟಣೆ ಹೆಚ್ಚಿದ ಕಾರಣ ನಗರದ ಮಧ್ಯಭಾಗವಾದ ಬಸ್‌ನಿಲ್ದಾಣ ಸಮೀಪದಲ್ಲಿ ಮಕ್ಕಳು ಆಟವಾಡಲು ಉದ್ಯಾನವನ ಇರುವುದು ಸುರಕ್ಷಿತವಲ್ಲ ಎನ್ನುವ ನೆಲೆಯಲ್ಲಿ ಇದನ್ನು ಬದಲಾಯಿಸಿ ದ್ವಿಚಕ್ರವಾಹನ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಡಿಸಲಾಗಿದೆ. 

ಮಕ್ಕಳಿಗೆ ಸುರಕ್ಷಿತವಾಗಿರಲಿಲ್ಲ
ಈ ಪಾರ್ಕ್‌ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಅನನುಕೂಲವಾಗಿದೆ. 
ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ನಗರಸಭೆ ಈ ನಿರ್ಧಾರ ತಳೆದಿರುವುದು ಸೂಕ್ತ ಎನ್ನುತ್ತಾರೆ ಸ್ಥಳೀಯ ಹಿರಿಯರು.

ನಗರದ ಕೆಲವೆಡೆ ಇನ್ನಷ್ಟು ಖಾಲಿ ಸ್ಥಳಗಳಿದ್ದರೆ ಅವುಗಳನ್ನು ಅವಶ್ಯಕತೆಗೆ ಅನುಗುಣವಾಗಿ ವಾಹನ ಸ್ಥಳವಾಗಿ ಮಾರ್ಪಡಿಸಿದರೆ ವಾಹನ ನಿಲುಗಡೆಗೆ ಅನುಕೂಲವಾಗುವುದಲ್ಲದೆ ಅಂಗಡಿ ಮುಂಗಟ್ಟುಗಳ ಎದುರಿನಲ್ಲಿ ನಿಲ್ಲಿಸುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ನಗರಸಭೆ ಚಿಂತನೆ ನಡೆಸಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next