Advertisement

ಸೋಂಕಿತರ ಪತ್ತೆ ಮಾಡಿ

12:26 PM Aug 30, 2020 | Suhan S |

ರಾಮನಗರ: ಕೋವಿಡ್‌ 19 ಸೋಂಕು ಕಾರಣ ಮರಣ ಪ್ರಮಾಣ ತಗ್ಗಿಸಲು ಹೆಚ್ಚು ಪರೀಕ್ಷೆ ನಡೆಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಜೆ.ಜಗದೀಶ್‌ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೋವಿಡ್‌ -19 ನಿಯಂತ್ರಣ ಕ್ರಮಗಳ ವಿಚಾರದಲ್ಲಿ ಮಾಹಿತಿ ಪಡೆದ ವೇಳೆ ಮಾತನಾಡಿದರು. ಸೋಂಕು ಲಕ್ಷಣವುಳ್ಳವರ ಬಗ್ಗೆ ಹೆಚ್ಚು ಗಮನ ಹರಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ. ಜನತೆ ಪ್ರಾಣ ಉಳಿಸುವ ನಿಟ್ಟಿ ನಲ್ಲಿ ಹೆಚ್ಚು ಶ್ರಮ ವಹಿಸಿ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ, ನಿರ್ಮಿತಿ ಕೇಂದ್ರದಿಂದ ಹೊಸದಾಗಿ 4 ಆ್ಯಂಬುಲೆನ್ಸ್‌ ಮತ್ತು ಇನ್ನಿತರ ಮೂಲಗಳಿಂದ 8 ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಈಗ ಒಟ್ಟು 16 ಆ್ಯಂಬುಲೆನ್ಸ್‌ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಪಂ ಸಿಇಒ ಇಕ್ರಂ ಮಾತನಾಡಿ, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದಿರುವವರ ಪತ್ತೆ ಕಾರ್ಯಕ್ಕೆ ಗ್ರಾಪಂ ಮಟ್ಟದಲ್ಲಿ ಗ್ರಾಮ ಸಹಾಯಕರು, ಗ್ರಾಪಂ ಜಾಗೃತ ಸಮಿತಿ ಗಳೂ ಸಹಾಯ ಮಾಡುತ್ತಿವೆ ಎಂದು ತಿಳಿಸಿದರು.ಡಿಎಚ್‌ಒ ಡಾ.ನಿರಂಜನ್‌ ಮಾತನಾಡಿ, ಸದ್ಯದ ಪರಿಸ್ಥಿತಿ ನಿಭಾಯಿಸಲು ಹಾಲಿ ಸಾಕಷ್ಟು ಹಾಸಿಗೆ ಲಭ್ಯವಿದೆ. 4ತಾಲೂಕುಗಳಲ್ಲಿ ಹೆಚ್ಚುವರಿ 880 ಹಾಸಿಗೆಗಳಿಗೆ ವ್ಯವಸ್ಥೆ, ಅಗತ್ಯವಿರುವಷ್ಟು ಔಷಧಿ ಮತ್ತು ಆಕ್ಸಿಜನ್‌ ಲಭ್ಯವಿದೆ ಎಂದು ತಿಳಿಸಿದರು.

ಸ್ವ್ಯಾಬ್‌ ಸಂಗ್ರಹಕ್ಕಾಗಿ ಬಿಎಸ್ಸಿ ಮಾಡಿರುವ ವಿದ್ಯಾರ್ಥಿಗಳಿಗೆ ತರಬೇತಿ ಕೊಟ್ಟು, ಬಳಸಿಕೊಳ್ಳುತ್ತಿರುವುದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಕಡಿಮೆಯಾಗಿದೆ ಎಂದು ಡಿಎಚ್‌ಒ ತಿಳಿಸಿದರು. ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌, ಆರ್‌ ಸಿಎಚ್‌ ಅಧಿಕಾರಿ ಡಾ.ಪದ್ಮಾ ಇದ್ದರು.

Advertisement

ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣಗೊಳಿಸಿ : ಚನ್ನಪಟ್ಟಣ: ತಾಲೂಕಿನ ಅಕ್ಕೂರು ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಗೊಳಿ ಸಲು ಜಲ್ಲಿ ಹಾಕಿ ತಿಂಗಳು ಕಳೆದರೂ ಕಾಮಗಾರಿ ಪೂರ್ಣವಾಗದೇ ವಾಹನ, ಪಾದಚಾರಿಗಳಿಗೆ ಸಮಸ್ಯೆ ಸೃಷ್ಟಿಸಿದೆ. ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಸಿಎಂ ಆಗಿದ್ದ ವೇಳೆ ಬಿಡುಗಡೆ ಯಾದ ಅನುದಾನದಲ್ಲಿ ನಿರ್ಮಾಣವಾ ಗುತ್ತಿರುವ ರಸ್ತೆ ಇದಾಗಿದೆ. ಅಕ್ಕೂರು ಹೊಸಹಳ್ಳಿ ದೊಡ್ಡಿಯಿಂದ ಅಕ್ಕೂರು ಗ್ರಾಮದವರೆಗೂ ಗುತ್ತಿಗೆದಾರ, ರಸ್ತೆಯಲ್ಲಿ ಜಲ್ಲಿ ಹರಡಿ ಹಲವಾರು ದಿನವಾದರೂ, ಡಾಂಬರು ಕಾಮಗಾರಿ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಜಲ್ಲಿಗಳು ಮೇಲೆದ್ದು ಮುಳ್ಳುಗಳ ರೀತಿಯಲ್ಲಿರುವುದರಿಂದ ಬೈಕ್‌, ಸೈಕಲ್‌ ಸವಾರರು, ಸರ್ಕಸ್‌ ಮಾಡಿಕೊಂಡು ತೆರಳುವ ಸ್ಥಿತಿ ನಿರ್ಮಾಣವಾಗಿದ್ದರೆ, ಪಾದಚಾರಿಗಳಂತೂ ಕೆಂಡದ ಮೇಲೆ ನಡೆಯುವಂತೆ ಭಾಸವಾಗುತ್ತಿದೆ. ಸಂತೆ ಮೊಗೇನಹಳ್ಳಿ ಅಡ್ಡರಸ್ತೆಯಿಂದ ತಾಲೂಕಿನ ಅಕ್ಕೂರು ಗ್ರಾಮದವರೆಗೂ ಪ್ರತಿ ಕಿ.ಮೀ.ವರೆಗೆ ಒಂದು ಕೋಟಿ ರೂ.ನಂತೆ ಅನುದಾನ ಬಿಡುಗಡೆಯಾಗಿದೆ. ಆದರೆ ಕಿ.ಮೀ.ಗೊಬ್ಬ ಗುತ್ತಿಗೆದಾರರು ಇರುವುದರಿಂದ ಅವರಿಗೆ ಇಷ್ಟಬಂದ ಹಾಗೆ ತಮ್ಮ ಗುತ್ತಿಗೆ ನಿರ್ವಹಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆ ಡಾಂಬರೀಕರಣಗೊಳಿಸಲು ಕ್ರಮ ಕೈಗೊಳ್ಳುವಂತೆ ಜನತೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next