Advertisement

ಆನೆಗುಂದಿಯಲ್ಲಿ ಉಪ ಕಚೇರಿ ಆರಂಭಕ್ಕೆ ಹವಾಮಾ ಹಿಂದೇಟು ಸ್ಥಳೀಯರ ಆಕ್ರೋಶ

01:08 PM Apr 27, 2022 | Team Udayavani |

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆಯಾಗಿರುವ ಆನೆಗೊಂದಿ ಭಾಗದ 15 ಗ್ರಾಮಗಳ ಜನರ  ದಶಕಗಳ ಬೇಡಿಕೆಯಾಗಿರುವ ಆನೆಗುಂದಿಯಲ್ಲಿ ಉಪ ಕಚೇರಿ ಆರಂಭಕ್ಕೆ ಹವಾಮಾ ಕಚೇರಿ ಆರಂಭಕ್ಕೆ ಹಿಂದೇಟು ಹಾಕಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಯಾಗಿರುವ ಹಂಪಿಯ ಸುತ್ತಲಿನ ಪ್ರದೇಶವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದು ಇಲ್ಲಿ ಅಭಿವೃದ್ಧಿ ಕಾರ್ಯಗಳು ವೈಯಕ್ತಿಕ ಮನೆ ನಿರ್ಮಾಣ ಶೌಚಾಲಯ ನಿರ್ಮಾಣ ಮಾಡಲು ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿರಾಪೇಕ್ಷಣ ಪತ್ರ ಪಡೆಯುವುದು ಕಡ್ಡಾಯವಾಗಿದೆ.ಇದಕ್ಕಾಗಿ ಆನೆಗೊಂದಿ , ಮಲ್ಲಾಪುರ, ಸಾಣಾಪುರ ಮತ್ಸಂತು ಸಂಗಾಪೂರ ಗ್ರಾಪಂಗಳ ವ್ಯಾಪ್ತಿಯ 15 ಹಳ್ಳಿಯ ಜನರು ತಾಲ್ಲೂಕಿನ ಕಮಲಾಪುರಕ್ಕೆ ನಿತ್ಯವೂ ಜನರು ಅಲೆದಾಡುವುದನ್ನು ಜತೆಗಿನ ತಪ್ಪಿಸಲು ಆನೆಗುಂದಿಯಲ್ಲಿ ಹಂಪಿ ಪ್ರಾಧಿಕಾರದ ಉಪ ಕಚೇರಿ ಆರಂಭಿಸುವ ಬೇಡಿಕೆಯನ್ನು ದಶಕಗಳಿಂದ ಇಲ್ಲಿ ಜೋರು ಮಾಡಿದರು ಮತ್ತು ಶಾಸಕರು ಸಂಸದರು ಈ ಬಗ್ಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಮತ್ತು ನಗರಾಭಿವೃದ್ಧಿ ಇಲಾಖೆಗೆ ಮೇಲಿಂದ ಮೇಲೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ .ಇದೀಗ ಸ್ವತಃ ಪ್ರವಾಸೋದ್ಯಮ ಸಚಿವರು ಹೇಳಿಕೆಯನ್ನು ನೀಡಿ ಸದ್ಯ ಆನೆಗುಂದಿಯಲ್ಲಿ ತಾಂತ್ರಿಕ ತೊಂದರೆಯ ಕಾರಣ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಆನೆಗೊಂದಿಯಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದು ಆನೆಗೊಂದಿ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಆನೆಗುಂದಿಯಲ್ಲಿ ಪ್ರಾಧಿಕಾರದ ಕಚೇರಿ ಆರಂಭವಾಗಲೇಬೇಕು: ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಆನೆಗೊಂದಿ ಭಾಗದ 15 ಕ್ಕೂ ಹೆಚ್ಚು ಹಳ್ಳಿಗಳು ಸೇರ್ಪಡೆಯಾಗಿರುವುದರಿಂದ ಜನರ ನಿತ್ಯದ ಕೆಲಸ ಮತ್ತು ದಾಖಲೆಗಳನ್ನು ಪಡೆಯುವ ಸಲುವಾಗಿ ಆನೆಗೊಂದಿಯಲ್ಲಿ ಹಂಪಿ ಅಭಿವೃದ್ಧಿ  ಪ್ರಾಧಿಕಾರದ ಉಪ ಕಚೇರಿ ಆರಂಭ ಮಾಡಬೇಕು .ಇಲ್ಲದಿದ್ದರೆ ಆನೆಗೊಂದಿ ಭಾಗದ ಎಲ್ಲಾ ಹಳ್ಳಿಗಳಿಗೆ ಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ ಎಂದು ಆನೆಗುಂದಿ ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ಬಾಳೆಕಾಯಿ ಉದಯವಾಣಿಗೆ ಮಾತನಾಡಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next