Advertisement

Sullia: ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

12:08 AM Nov 05, 2024 | Team Udayavani |

ಸುಳ್ಯ: ಮೈಸೂರು ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಸುಳ್ಯದಲ್ಲಿ ತಪ್ಪಿಸಿಕೊಂಡು ಓಡಿ ಹೋಗುವ ವೇಳೆ ಊರವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ರವಿವಾರ ಸಂಜೆ ಸಂಭವಿಸಿದೆ.

Advertisement

ಬ್ಯಾಂಕ್‌ ಖಾತೆ ಹ್ಯಾಕ್‌ ಮತ್ತು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ ಆರೋಪಿಯೋರ್ವನನ್ನು ಮೈಸೂರಿನ ಕ್ರೈಂ ವಿಭಾಗದ ಪೊಲೀಸರು ಹೆಚ್ಚಿನ ತನಿಖೆ ಹಾಗೂ ಮಹಜರು ಮಾಡಲು ಇಲಾಖೆಯ ವಾಹನದಲ್ಲಿ ಮಂಗ
ಳೂರಿಗೆ ಕರೆದುಕೊಂಡು ಬರುತ್ತಿದ್ದರು. ಮಾರ್ಗ ಮಧ್ಯೆ ಸುಳ್ಯದ ಓಡಬಾಯಿ ಎನ್ನುವಲ್ಲಿ ಚಹಾ ಕುಡಿಯಲು ನಿಲ್ಲಿಸಿದ್ದು, ಈ ವೇಳೆ ಪೊಲೀಸರೊಂದಿಗೆ ಆರೋಪಿ ಕೂಡ ಚಹಾ ಕುಡಿದು ತಿಂಡಿ ತಿಂದಿದ್ದಾನೆ.

ಕೈ ತೊಳೆಯಲು ಹೋದ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಅಲ್ಲಿದ್ದವರು ಬೊಬ್ಬೆ ಹಾಕಿದ್ದು, ಆರೋಪಿ ಅಲ್ಲೇ ಸಮೀಪದ ಪಯಸ್ವಿನಿ ನದಿಗೆ ಹಾರಿ ಇನ್ನೊಂದು ಭಾಗದ ದೊಡ್ಡೇರಿ ಪ್ರದೇಶಕ್ಕೆ ಓಡಿದ್ದ. ಬಟ್ಟೆಯಲ್ಲಿ ಕೆಸರು ನೀರು ಆಗಿರುವ ವ್ಯಕ್ತಿ ಓಡಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆತನ ಬಗ್ಗೆ ಸಂಶಯಪಟ್ಟು, ಅಲ್ಲಿನ ಯುವಕರಿಗೆ ಮಾಹಿತಿ ನೀಡಿದ್ದರು. ಅವರು ಆತನನ್ನು ಹಿಡಿದು ವಿಚಾರಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಇದೇ ವೇಳೆ ಮೈಸೂರು ಪೊಲೀಸರು ಈ ಸ್ಥಳಕ್ಕೆ ಬಂದಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತಮ್ಮೊಂದಿಗೆ ಕರೆದೊಯ್ದರು.

ಮರುಕಳಿಸಿದ ಘಟನೆ
ಕೆಲವು ಸಮಯಗಳ ಹಿಂದೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋದ ಘಟನೆ ಸುಳ್ಯದಲ್ಲಿ ನಡೆದಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಆತನನ್ನು ಪೊಲೀಸರು ಮತ್ತೆ ಬಂಧಿಸಿದ್ದರು. ಇದೀಗ ಮತ್ತೆ ಸುಳ್ಯದಲ್ಲಿ ಮೈಸೂರು ಪೊಲೀಸರ ವಶದಲ್ಲಿನ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಕೆಲವು ವರ್ಷಗಳ ಹಿಂದೆ ಕೂಡ ಒಂದೆರಡು ಇಂತಹ ಘಟನೆ ಸುಳ್ಯದಲ್ಲಿ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next