ಉಡುಪಿ: ಕೋಡಿಬೇಂಗ್ರೆ ಶಾಲೆಯ ಹೆಚ್ಚುವರಿ ಶಿಕ್ಷಕರೊಬ್ಬರನ್ನು ವರ್ಗಾವಣೆಗೊಳಿಸದಂತೆ ಆಗ್ರಹಿಸಿ ಸ್ಥಳೀಯರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಮಟ್ಟದ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆ ಡಯಟ್ ನಲ್ಲಿ ನಡೆಯುತ್ತಿದ್ದು, ಇದಕ್ಕೆ ಅಡ್ಡಿಪಡಿಸದಂತೆ ಪೊಲೀಸರು ಎಚ್ಚರಿಕೆ ನೀಡಿದರು. ಸ್ಥಳೀಯರು ಪಟ್ಟು ಬಿಡದೇ ನ್ಯಾಯ ಸಿಗುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರು, ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.
ಕೋಡಿಬೇಂಗ್ರೆ ಹೆಚ್ಚುವರಿ ಶಿಕ್ಷಕರನ್ನು ಉಳಿಸಿಕೊಳ್ಳುವ ಬಗ್ಗೆ:
ನಮ್ಮ ಶಾಲೆಯಲ್ಲಿ ಈಗ ಕೇವಲ ಮೂರು ಜನ ಖಾಯಂ ಶಿಕ್ಷಕರಿದ್ದು ಒಂದರಿಂದ 7ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆಯನ್ನು ಮಾಡುತ್ತಿದ್ದಾರೆ, ಆದರೆ ಈ ಬಾರಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ಮೂರು ಜನ ಶಿಕ್ಷಕರಲ್ಲಿ ಒಬ್ಬರನ್ನು ವರ್ಗಾವಣೆ ಮಾಡಿದರೆ ಶಾಲೆಯ ಶೈಕ್ಷಣಿಕ ಸ್ಥಿತಿ ತೀರಾ ಕೆಳಗಿಳಿ ರ ನಾವು ಪೋಷಕರು ಶಿಕ್ಷಕರ ಮೇಲಿನ ಭರವಸೆಯಿಂದ ಹಾಗೂ ನಮ್ಮೂರ ಶಾಲೆಯ ಮಕ್ಕಳ ಸಂಖ್ಯೆ 215 ಇಳೆದು ಶಾಲೆ ಅಳಿವಿನ ಅಂಚಿನಲ್ಲಿರುವ ಸಮಯದಲ್ಲಿ ಕೋಡಿ ಬೆಂಗ್ರೆ ಮತ್ತು ಪಡುತೋನ್ಸೆ ಗ್ರಾಮದವರು ಸೇರಿ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಿಂದ ಬಿಡಿಸಿ ಇಲ್ಲಿಗೆ ಸೇರ್ಪಡೆ ಮಾಡಿದ್ದರಿಂದ 21 ಇದ್ದ ಮಕ್ಕಳ ಸಂಖ್ಯೆ 12ಕ್ಕೆ ಏರಿತು. ತದನಂತರ ನಾಲ್ಕು ನಾಯಂ ಶಿಕ್ಷಕರಲ್ಲಿ ಒಬ್ಬ ಶಿಕ್ಷಕರು ಬೇರೆ ಶಾಲೆಗೆ ವರ್ಗಾವಣೆಗೊಂಡು ಅವರ ಬದಲಿಗೆ ಇನ್ನೂ ಕೂಡ ಯಾವುದೇ ಶಿಕ್ಷಕರು ನಮ್ಮ ಶಾಲೆಗೆ ಬಂದಿರುವುದಿಲ್ಲ. ಅಲ್ಲದೆ 2020-21ನೇ ಸಾಲಿನ ಸ್ಕಾಟ್ ಅಂಕಿ ಅಂಶದ ಪ್ರಕಾರ ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದುದರಿಂದ ಇದರ ಆಧಾರದ ಮೇಲೆ ಈಗ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಮಾಡುವುದು ಎಷ್ಟು ಸರಿ ? ಏಕೆಂದರೆ ಈಗ 2022-2023ರ ಸ್ಯಾಟ್ ಅಂಕಿ ಅಂಶದ ಪ್ರಕಾರ ಮಕ್ಕಳ ಸಂಖ್ಯೆ 67 ಇದೆ, ಶಿಕ್ಷಕರ ಕೊರತೆಯ ಕಾರಣದಿಂದ ನಮ್ಮ ಮಕ್ಕಳ ಭವಿಷ್ಯ ಚಿಂತಾಜನಕವಾಗಿದೆ. ನಮ್ಮ ಪ್ರದೇಶವು ಬೌಗೋಳಿಕವಾಗಿ ದ್ವೀಪ ಪ್ರದೇಶವಾಗಿದೆ ಇದು ಮೂರು ಕಡೆ ನದಿ ಸಮುದ್ರಗಳಿಂದ ಆವತಗೊಂಡಿದೆ. ಅಲ್ಲದೆ ಇದು ತಂಬಾಕು ಮುಕ್ತ ಗ್ರಾಮವಾಗಿದೆ ಊರಿನಲ್ಲಿರುವ ಒಂದೇ ಒಂದು ಶಾಲೆಯು ಮುಂದಿನ ದಿನಗಳಲ್ಲಿ ಮುಚ್ಚುವ ಸಂಭವವಿರುತ್ತದೆ. ಆದುದರಿಂದ ತಾವು ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೆಚ್ಚುವರಿ ಶಿಕ್ಷಕರ ವರ್ಗಾಚಣೆಯನ್ನು ವಿಶೇಷ ಗ್ರಾಮವೆಂದು ಪರಿಗಣಿಸಿ ಈ ನೀತಿಯನ್ನು ಕೈ ಬಿಡಬೇಕೆಂದು ಪೋಷಕರಾದ ನಾವು ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.