ಹುಣಸೂರು: ನಗರಸಭೆಯ ವಾರ್ಡ್ ಮೀಸಲು ಪಟ್ಟಿ ಪ್ರಕಟಿಸಿರುವ ಸರ್ಕಾರ ನಗರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಹೆಚ್ಚುವರಿಯಾಗಿ 4 ವಾರ್ಡ್ ಸೇರಿದಂತೆ ಒಟ್ಟು 31 ವಾರ್ಡ್‌ಗಳನ್ನಾಗಿಸಿ ಗುರುವಾರ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎಲ್.ಬಾಗಲವಾಡೆ ಅಂತಿಮ ಆದೇಶ ಹೊರಡಿಸಿದ್ದಾರೆ.
ನಾಲ್ಕು ವಾರ್ಡ್: ನಗರಸಭೆಯಾದ ನಂತರ ಜನಸಂಖ್ಯೆಗನುಗುಣವಾಗಿ 4 ವಾರ್ಡ್‌ಗಳನ್ನು ಹೆಚ್ಚಿಸಿದೆ. ಕಳೆದ ಬಾರಿ 27 ವಾರ್ಡ್‌ಗಳ ಪೈಕಿ 12 ಸಾಮಾನ್ಯ, ಬಿಸಿಎಂ(ಎ) 7, ಎಸ್‌ಸಿ 4 ಹಾಗೂ ಎಸ್‌ಟಿ 2 ಸ್ಥಾನ ಮೀಸಲು ಕಲ್ಪಿಸಲಾಗಿತ್ತು.
ಈ ಬಾರಿ 16 ಸಾಮಾನ್ಯ(8 ಸಾ.ಮ), 6 ಬಿಸಿಎಂ(ಎ) (3 ಮಹಿಳೆ), ಎಸ್‌ಸಿ 5 (2 ಮಹಿಳೆ), ಎಸ್.ಟಿ 3 (1 ಮಹಿಳೆ) ಹಾಗೂ ಬಿಸಿಎಂ(ಬಿ)ಗೆ ಒಂದು ಸ್ಥಾನವನ್ನು ಮೀಸಲಿರಿಸಲಾಗಿದೆ. ಕಳೆದ ಬಾರಿ 27 ವಾರ್ಡ್‌ಗಳಲ್ಲಿ 9 ಮಹಿಳೆಯರಿಗೆ ಮೀಸಲಾಗಿತ್ತು. ಈ ಬಾರಿ 14 ಮಂದಿ ಮಹಿಳಾ ವಾರ್ಡ್‌ಗಳಾಗಿರುವುದು ಹಾಗೂ ಬಿಸಿಎಂ(ಬಿ)ಗೂ ಒಂದು ಸ್ಥಾನ ಕಲ್ಪಿಸಿರುವುದು ವಿಶೇಷವಾಗಿದೆ.
17 ವಾರ್ಡ್ ಮೀಸಲು ಬದಲಾವಣೆ: ಜೂನ್ 12ರಂದು ಪ್ರಕಟವಾಗಿದ್ದ ಮೀಸಲಾತಿ ಪೈಕಿ ಆಕ್ಷೇಪಣೆ ಸಲ್ಲಿಸಿದ್ದರಿಂದ ಹಾಗೂ ಸರಕಾರದ ಪ್ರಭಾವದಿಂದ ಅಂತಿಮ ಪ್ರಕಟಣೆಯಲ್ಲಿ 17 ವಾರ್ಡ್‌ಗಳ ಮೀಸಲಾತಿ ಬದಲಾಗಿದ್ದು, ಕೆಲ ಸದಸ್ಯರಿಗೆ ಕ್ಷೇತ್ರ ಸ್ಪರ್ಧಿಸಲು ಅವಕಾಶ ಸಿಕ್ಕಂತಾಗಿದೆ. ಆದರೆ ಹಾಲಿ ಅಧ್ಯಕ್ಷರೂ ಸೇರಿದಂತೆ ಹಲವು ಸದಸ್ಯರಿಗೆ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಸ್ಪರ್ಧಿಸದಂತಾಗಿದ್ದು, ಇತರೆ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ.
ವಾರ್ಡ್‌ವಾರು ಮೀಸಲು ವಿವರ: 1.ಪರಿಶಿಷ್ಟ ಪಂಗಡ, 2.ಪರಿಶಿಷ್ಟ ಪಂಗಡ ಮಹಿಳೆ 3.ಹಿಂದುಳಿದ ವರ್ಗ (ಎ)ಮಹಿಳೆ 4.ಹಿಂದುಳಿದ ವರ್ಗ (ಎ) ಮಹಿಳೆ 5.ಹಿಂದುಳಿದ ವರ್ಗ ಎ. 6.ಪರಿಶಿಷ್ಟ ಪಂಗಡ 7.ಸಾಮಾನ್ಯ 8.ಸಾಮಾನ್ಯ 9.ಹಿಂದುಳಿದ ವರ್ಗ (ಎ)ಮಹಿಳೆ 10.ಪರಿಶಿಷ್ಟ ಜಾತಿ 11.ಹಿಂದುಳಿದ ವರ್ಗ(ಎ) 12.ಸಾಮಾನ್ಯ, 13.ಹಿಂದುಳಿದ ವರ್ಗ (ಎ) 14.ಸಾಮಾನ್ಯ (ಮಹಿಳೆ)
15.ಸಾಮಾನ್ಯ (ಮಹಿಳೆ) 16.ಸಾಮಾನ್ಯ 17.ಪರಿಶಿಷ್ಟಜಾತಿ 18.ಹಿಂದುಳಿದ ವರ್ಗ (ಬಿ) 19.ಸಾಮಾನ್ಯ 20.ಸಾಮಾನ್ಯ (ಮಹಿಳೆ) 21.ಪರಿಶಿಷ್ಟಜಾತಿ (ಮಹಿಳೆ) 22.ಸಾಮಾನ್ಯ 23.ಪರಿಶಿಷ್ಟ ಜಾತಿ (ಮಹಿಳೆ) 24.ಸಾಮಾನ್ಯ (ಮಹಿಳೆ 25.ಪರಿಶಿಷ್ಟ ಜಾತಿ 26.ಸಾಮಾನ್ಯ 27.ಸಾಮಾನ್ಯ( ಮಹಿಳೆ ) 28.ಸಾಮಾನ್ಯ (ಮಹಿಳೆ ) 29.ಸಾಮಾನ್ಯ (ಮಹಿಳೆ) 30.ಸಾಮಾನ್ಯ ( ಮಹಿಳೆ 31.ಸಾಮಾನ್ಯ)