ದೇವನಹಳ್ಳಿ: ಚುನಾವಣಾ ಆಯೋಗ ಗ್ರಾಪಂ ಚುನಾವಣೆಗಳನ್ನು ಎರಡು ಹಂತದಲ್ಲಿ ನಡೆಸಲುಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಾಜಕೀಯಚಟುವಟಿಕೆ ಗರಿಗೆದರಿದ್ದು, ಮೂರು ಪಕ್ಷಗಳಲ್ಲೂ ಸಿದ್ಧತೆ ಪ್ರಾರಂಭಗೊಂಡಿದೆ.
ಪಕ್ಷ ರಹಿತ ಚುನಾವಣೆ ನಡೆಯಲಿದೆ. ಆದರೆ, ಪಕ್ಷದಡಿ ಚುನಾವಣೆ ಎದುರಿಸುವುದರಿಂದ ಸ್ಪರ್ಧಿಗಳು ಮೂರೂ ಪಕ್ಷಗಳ ಮುಖಂಡರ ದುಂಬಾಲು ಬಿದ್ದಿದ್ದಾರೆ. ಗ್ರಾಪಂಚುನಾವಣೆ ಸ್ಥಳೀಯ ಚುನಾವಣೆ ಆಗಿರುವುದರಿಂದಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳ ಬಾರಿ ಚುನಾವಣೆಯಲ್ಲಿ ಮಹಿಳಾ ಮೀಸಲು ಸ್ಥಾನ ಹೆಚ್ಚಾಗಿದ್ದು, ಯುವಕರಿಗೂ ನಾಯಕರು ಮನ್ನಣೆ ನೀಡುವತ್ತ ಆಸಕ್ತಿ ವಹಿಸುತ್ತಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಸಿಂಬಲ್ ಮೇಲೆ ಸ್ಪರ್ಧಿಸುವಂತಿಲ್ಲ. ತೆರೆಯ ಹಿಂದೆ ಯಾವುದಾದರೂ ಒಂದು ರಾಷ್ಟ್ರೀಯ ಪಕ್ಷ ಬೆಂಬಲಿಸುವ ವ್ಯಕ್ತಿಯೇ ಗ್ರಾಪಂ ಚುನಾವಣೆಯಲ್ಲೂ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಈಗಾಗಲೇ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು ಯಾರು ಸ್ಪರ್ಧಿಸುತ್ತಾರೆಂಬುದು ಗ್ರಾಮಸ್ಥರಲ್ಲಿ ಚರ್ಚೆಗೆಗ್ರಾಸವಾಗುತ್ತಿದೆ.
ಜಿಲ್ಲೆಯಲ್ಲಿ ಕೋವಿಡ್ ಅಬ್ಬರ ತಣ್ಣಗಾಗುತ್ತಿದ್ದಂತೆ, ಗ್ರಾಪಂ ಚುನಾವಣೆ ಬಿಸಿ, ಗ್ರಾಮೀಣ ಭಾಗದಲ್ಲಿ ಇದೀಗ ಸದ್ದು ಮಾಡತೊಡಗುತ್ತದೆ. ಕಳೆದ ವ್ಯಕ್ತಿಗಳೇ ಮತ್ತೇ ಅಖಾಡಕ್ಕಿಳಿಯಲು ಸ್ಥಳೀಯರ ಮಟ್ಟದಲ್ಲಿ ಮುಖಂಡರ ಮನವೊಲಿಕೆಗೆ ಮುಂದಾಗಿದ್ದಾರೆ. ಇನ್ನೂ ಕೆಲವೆಡೆ ಹೊಸ ಮುಖಗಳನ್ನು ಪರಿಚಯಿಸುವ ಕಾರ್ಯಕ್ಕೂ ಮುಖಂಡರು ಚಿಂತನೆ ನಡೆಸುತ್ತಿದ್ದಾರೆ. ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಪಂ ಚುನಾವಣೆ ಬಗ್ಗೆ ರಾಜಕೀಯ ಚರ್ಚೆ ಜೋರಾಗಿದ್ದು, ಗ್ರಾಮ ಮಟ್ಟದ ಮುಖಂಡರು ಈಗಾಗಲೇ ಗ್ರಾಮಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖಂಡರ ಮನೆಬಾಗಿಲಿಗೆ ಆಕಾಂಕ್ಷಿಗಳು ಎಡತಾಕುತ್ತಿದ್ದಾರೆ. ಜತೆಗೆ ಗ್ರಾಮಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಪಕ್ಷದ ಮುಖಂಡರು ಮುಂದಾಗಿದ್ದಾರೆ.
ದೇವನಹಳ್ಳಿಯಲ್ಲಿ ಜೆಡಿಎಸ್ ಶಾಸಕರು ಇರುವುದರಿಂದ ಅಭಿವೃದ್ಧಿ ಕಾರ್ಯ ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಶಾಸಕರು ಇಲ್ಲದಿದ್ದರೂ ಈ ಹಿಂದಿನ ಸಿದ್ದರಾಮಯ್ಯ ನೇತƒತ್ವದ ಸರ್ಕಾರದಲ್ಲಿ ಆಗಿ ರುವ ಜನಪರ ಕಾರ್ಯಕ್ರಗಳನ್ನು ಜನರಿಗೆ ತಿಳಿಸುವುದರ ಮೂಲಕ ಚುನಾವಣೆ ಎದುರಿಸಲಿದೆ. ಅಲ್ಲದೇ, ಕೇಂದ್ರ-ರಾಜ್ಯ ಸರ್ಕಾರದ ಜನಪರಕಾರ್ಯಕ್ರಮಗಳನ್ನು ತಿಳಿಸುವ ಮೂಲಕ ಚುನಾವಣೆಯನ್ನು ಎದುರಿಸಲು ಬಿಜೆಪಿಸಿದ್ಧಗೊಂಡಿದೆ.ಏನೇಇರಲಿಈ ಬಾರಿ ರಾಜಕೀಯ ಪಕ್ಷಗಳ ಚಟುವಟಿಕೆ ಗರಿಗೆದರಿದ್ದು, ಚುನಾವಣೆಗೆ ಅಭ್ಯರ್ಥಿಗಳು ಯಾರಾಗುತ್ತಾರೆಂಬುವುದು ಜನರಲ್ಲಿ ಕುತೂಹಲ ಮೂಡಿಸಿದೆ.
-ಎಸ್.ಮಹೇಶ್