ನರಗುಂದ: ತಾಲೂಕಿನ 13 ಗ್ರಾಪಂಗಳ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧೆ ಬಯಸಿ 166 ಸ್ಥಾನಗಳಿಗೆ 544 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾದ ಶನಿವಾರ 377 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, 6 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ 13 ಗ್ರಾಪಂಗಳ ಪೈಕಿ ಒಟ್ಟು 545 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಒಂದು ನಾಮಪತ್ರ ತಿರಸ್ಕೃತಗೊಂಡು 544 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದವು. ಶನಿವಾರ 161 ನಾಮಪತ್ರ ಹಿಂದಕ್ಕೆ ಪಡೆಯಲಾಗಿದೆ.
ರಡ್ಡೇರನಾಗನೂರ ಗ್ರಾಪಂ ವ್ಯಾಪ್ತಿಯಲ್ಲಿ 1 ಹಾಗೂ ಕಣಕಿಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಐವರು ಸೇರಿ ಒಟ್ಟು 6 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಚುನಾವಣಾ ಕಣದಲ್ಲಿ 377 ಅಭ್ಯರ್ಥಿಗಳು ಉಳಿದಿದ್ದಾರೆ.
ಗ್ರಾಪಂವಾರು: 8 ಸ್ಥಾನ ಹೊಂದಿದ ವಾಸನಗ್ರಾಪಂನಲ್ಲಿ 24 ಜನರು, 25 ಸ್ಥಾನಗಳನ್ನು ಹೊಂದಿದ ಕೊಣ್ಣೂರ ಗ್ರಾಪಂನಲ್ಲಿ 61 ಜನರು, 23 ಸ್ಥಾನ ಹೊಂದಿದ ಶಿರೋಳ ಗ್ರಾಪಂನಲ್ಲಿ 48 ಮಂದಿ, 8 ಸ್ಥಾನ ಹೊಂದಿದ ರಡ್ಡೇರನಾಗನೂರ ಗ್ರಾಪಂನಲ್ಲಿ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 11 ಸ್ಥಾನ ಹೊಂದಿದ ಹದಲಿ ಗ್ರಾಪಂನಲ್ಲಿ 28 ಜನರು, 9 ಸ್ಥಾನ ಹೊಂದಿದ ಭೈರನಹಟ್ಟಿ ಗ್ರಾಪಂನಲ್ಲಿ 19 ಮಂದಿ, 8 ಸ್ಥಾನ ಹೊಂದಿದ ಸುರಕೋಡ ಗ್ರಾಪಂನಲ್ಲಿ 22 ಜನರು, 13 ಸ್ಥಾನ ಹೊಂದಿದ ಬನಹಟ್ಟಿ ಗ್ರಾಪಂನಲ್ಲಿ 30 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
15 ಸ್ಥಾನ ಹೊಂದಿದ ಹುಣಸೀಕಟ್ಟಿ ಗ್ರಾಪಂನಲ್ಲಿ 34 ಜನರು, 11 ಸ್ಥಾನ ಹೊಂದಿದ ಕಣಕಿಕೊಪ್ಪ ಗ್ರಾಪಂನಲ್ಲಿ 13 ಜನರು, 11 ಸ್ಥಾನ ಹೊಂದಿದಚಿಕ್ಕನರಗುಂದ ಗ್ರಾಪಂನಲ್ಲಿ 22 ಮಂದಿ, 14 ಸ್ಥಾನ ಹೊಂದಿದ ಹಿರೇಕೊಪ್ಪ ಗ್ರಾಪಂನಲ್ಲಿ 33 ಜನರು, 10 ಸ್ಥಾನ ಹೊಂದಿದ ಬೆನಕನಕೊಪ್ಪ ಗ್ರಾಪಂನಲ್ಲಿ 24 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.