Advertisement
ಬಜೆಟ್‌ನ ಮೊತ್ತ 26.79 ಕೋಟಿ ರೂ. ಆಗಿದ್ದು, ವೆಚ್ಚ 26.28 ಕೋಟಿ ರೂ., ಉಳಿತಾಯ 51 ಲಕ್ಷ ರೂ. ಆಗಿದೆ. ಬಜೆಟ್ ಮಂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ನಾಗೇಶ್ ಮಾತನಾಡಿ, ಪಟ್ಟಣದ ಸರ್ವತೋ ಮುಖ ಅಭಿವೃದ್ಧಿಗಾಗಿ ಮೂಲ ಸೌಕರ್ಯಕ್ಕೆ ಒತ್ತು, ಕುಡಿಯುವ ನೀರಿನ ಪೂರೈಕೆ ಸೇರಿ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡಿಸಲಾಗಿದೆ ಎಂದರು.
Related Articles
Advertisement
ಅವ್ಯವಹಾರ ಆಗಬಾರದು: ಪುರಸಭಾ ಸದಸ್ಯ ಎನ್.ರಘು ಮಾತನಾಡಿ, ಕೋವಿಡ್-19 ಕಾಯಿಲೆಯಿಂದ ಮರಣಹೊಂದಿರುವ ಬಿಪಿಎಲ್ ಬಡಕುಟುಂಬಗಳಿಗೆ 10 ಸಾವಿರ ರೂ. ವಿಳಂಬ ಮಾಡದೆ ನೀಡಬೇಕು. ಅರ್ಹರಿಗೆ ತಲುಪಿಸುವಕೆಲಸವಾಗಬೇಕು. ಇದರಲ್ಲಿ ಯಾವುದೇ ಅವ್ಯವಹಾರ ಆಗಬಾರದು ಎಂದು ವಿವರಿಸಿದರು.
ಮುಕ್ತಿ ವಾಹನ, ಶವಪೆಟ್ಟಿಗೆ ಖರೀದಿ: ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ಮುಕ್ತಿ ವಾಹನ ಮತ್ತು ಶವ ಸಂಸ್ಕರಣಾ ಪೆಟ್ಟಿಗೆ ಖರೀದಿಸಲು ಸದಸ್ಯರ ಸಭೆ ಕರೆದು ತೀರ್ಮಾನದ ಪತ್ರ ಕಳುಹಿಸಿಕೊಡುವಂತೆ ಡೀಸಿ ತಿಳಿಸಿದ್ದಾರೆ. ಆನ್ ಲೈನ್‌ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ, ಕೂಡಲೇ ಮುಕ್ತಿವಾಹನ ಮತ್ತು ಶವ ಸಂಸ್ಕರಣಾ ಪೆಟ್ಟಿಗೆ ಖರೀದಿಸಲಾಗುವುದು ಎಂದು ಹೇಳಿದರು.
ಪುರಸಭಾ ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀ ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆಯಲ್ಲಿ ಸದಸ್ಯರಾದ ಜಿ.ಎ.ರವೀಂದ್ರ, ರತ್ನಮ್ಮ ರವಿಕುಮಾರ್, ಎನ್.ರಘು, ಎಸ್.ಸಿ.ಚಂದ್ರಪ್ಪ, ಮಂಜುನಾಥ್, ಬಾಲರಾಜ್, ಮುನಿಕೃಷ್ಣ,ಗೋಪಿ, ಲಕ್ಷ್ಮೀ ಅಂಬರೀಶ್, ರುದ್ರೇಶ್, ಗೀತಾಶ್ರೀಧರ್, ಲೀಲಾವತಿ ಶಿವಕುಮಾರ್, ಕೋಮಲಾ, ಸುಮಿತ್ರಾ ಸಿಬ್ಬಂದಿ ಉಪಸ್ಥಿತರಿದ್ದರು.