Advertisement

ಪುರಸಭೆ ಗದ್ದುಗೆ ಗುದ್ದಾಟಕ್ಕೆ ತಿರುವು

04:17 PM Oct 28, 2020 | Suhan S |

ಮುದ್ದೇಬಿಹಾಳ: ತೀವ್ರ ಕುತೂಹಲ ಮೂಡಿಸಿದ್ದ ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯು ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರ ಸದಸ್ಯರ ತಂಡ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಸೋಮವಾರ ಸಂಜೆ ಭೇಟಿ ಮಾಡಿದ ನಂತರ ತಿರುವು ಪಡೆದುಕೊಂಡಂತಾಗಿದೆ.

Advertisement

ಪುರಸಭೆಗೆ 23 ಸದಸ್ಯರಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ತಲಾ 8, ಜೆಡಿಎಸ್‌ 2, ಪಕ್ಷೇತರರು 5 ಸ್ಥಾನ ಗಳಿಸಿದ್ದಾರೆ. ಐವರು ಪಕ್ಷೇತರ ಸದಸ್ಯರು ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಪರಿಗಣಿಸಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿಯವರನ್ನು ಬೆಂಬಲಿಸುತ್ತಾರೆ. ಹೀಗಾಗಿ ಪುರಸಭೆ ಆಡಳಿತಾ ಧಿಕಾರ ಬಿಜೆಪಿಗೆ ದೊರಕುತ್ತದೆ ಎನ್ನುವ ಮಾತು ಮೊದಲೆಲ್ಲ ಕೇಳಿ ಬರುತ್ತಿತ್ತು. ಆದರೆ ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರ ಸದಸ್ಯರ ಒಗ್ಗಟ್ಟು ಪ್ರದರ್ಶನ ಬಿಜೆಪಿ ವಲಯದಲ್ಲಿ ನಿರಾಸೆ ಮೂಡಿಸಿದಂತಾಗಿದೆ.

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ಹೊರ ಬಿದ್ದ ಮೂರು ದಿನಗಳ ನಂತರದಿಂದ ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರ ಸದಸ್ಯರು ಒಟ್ಟಾಗಿಅಜ್ಞಾತ ಸ್ಥಳದಲ್ಲಿದ್ದರು. ಈಗ ಚುನಾವಣೆಗೆ ಎರಡುದಿನ ಇರುವಂತೆಯೇ ಸೋಮವಾರ ರಾತ್ರಿ ಎಲ್ಲರೂಡಿಕೆಶಿ ಭೇಟಿ ಮಾಡಿ ಒಗ್ಗಟ್ಟು ಪ್ರದರ್ಶಿಸಿದ ಫೋಟೊ ಬಹಿರಂಗಗೊಂಡು ಪುರಸಭೆ ಆಡಳಿತ ಗಾದಿಗೆ ಸ್ಪಷ್ಟತೆ ನೀಡಿದಂತಾಗಿದೆ.

ಏತನ್ಮಧ್ಯೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಜೆಡಿಎಸ್‌ ಸದಸ್ಯೆ ಪ್ರತಿಭಾ ಅಂಗಡಗೇರಿ ಅವರು ಡಿಕೆಶಿ ಸಮ್ಮುಖ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌, ಪಕ್ಷೇತರ ಸದಸ್ಯರು ಇವರನ್ನೇಬೆಂಬಲಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ದು ಇದಕ್ಕೆ ಸ್ಪಷ್ಟತೆ ಅ. 28ರ ಮಧ್ಯಾಹ್ನದ ನಂತರ ದೊರಕಲಿದೆ.

ಮೀಸಲಾತಿಯ ಲಾಭ: ಈ ಪುರಸಭೆಗೆ 31-8-2018ರಂದು ಚುನಾವಣೆ ನಡೆದು 3-9-2018ರಂದು ಮತ ಎಣಿಕೆ ನಂತರ ಫಲಿತಾಂಶ ಘೋಷಣೆ ಆಗಿತ್ತು. ಆಗ ಯಾವ ಪಕ್ಷಕ್ಕೂ ಬಹುಮತ ಲಭಿಸದೆ ಅತಂತ್ರ ಸ್ಥಿತಿ ನಿರ್ಮಾಣಗೊಂಡಿತ್ತು. ಬಿಜೆಪಿ, ಜೆಡಿಎಸ್‌, ಪಕ್ಷೇತರರ ಬಳಿ ಇರದ, ಕಾಂಗ್ರೆಸ್‌ ಬಳಿ ಮಾತ್ರ ಇದ್ದ ಮಹಿಳಾ ಎಸ್ಸಿ ಮೀಸಲಾತಿಗೆ ಅಧ್ಯಕ್ಷ ಸ್ಥಾನ ದೊರಕುವಂತೆ ಆಗಿನ ಸಮ್ಮಿಶ್ರ ಸರ್ಕಾರ ಆದೇಶ ಹೊರಡಿಸಿತ್ತು.

Advertisement

ಆಗ ಕಾಂಗ್ರೆಸ್‌ ಗೆಲುವಿನ ನಗೆ ಬೀರಿತ್ತು. ಇದೇ ಅ. 9ರಂದು ಬಿಜೆಪಿ ಸರ್ಕಾರ ಹೊಸ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದಾಗ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಯಿತು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಾಗೂ ಪಕ್ಷೇತರರಲ್ಲಿ ಈ ಮೀಸಲಾತಿಯಆಕಾಂಕ್ಷಿಗಳು ಇದ್ದರು. ಅಂತಿಮವಾಗಿ ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರರು ಒಗ್ಗಟ್ಟು ಪ್ರದರ್ಶಿಸಿ ಮತ್ತೇ ಕಾಂಗ್ರೆಸ್‌ಗೆ ಅ ಧಿಕಾರ ಹಿಡಿಯುವ ಯೋಗ ಒಲಿದಂತಾಗಿದೆ.

 

-ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next