Advertisement
ಅದರಂತೆ ಬೆಳ್ತಂಗಡಿ ತಾಲೂಕಿನಲ್ಲಿ ತಾ.ಪಂ. 21ಹಾಗೂ ಜಿ.ಪಂ. 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಹಿಂದೆ ತಾ.ಪಂ. 26 ಕ್ಷೇತ್ರಗಳಿದ್ದು 21ಕ್ಕೆ ಇಳಿದಿದೆ. 7 ಕ್ಷೇತ್ರಗಳಿದ್ದ ಜಿ.ಪಂ. 8 ಕ್ಷೇತ್ರಕ್ಕೆ ಏರಿಕೆಯಾಗಿದೆ. ಪ್ರತೀ ತಾ.ಪಂ. ಚುನಾವಣ ಶಾಖೆಯಿಂದ ರಾಜ್ಯ ಚುನಾವಣಾ ಆಯೋಗದ ನಿರ್ದೇ ಶನದಂತೆ ತಾ.ಪಂ. ಜಿ.ಪಂ. ವಿಂಗಡಣೆ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ.
Related Articles
Advertisement
ಪ್ರಾಥಮಿಕವಾಗಿ ಕ್ಷೇತ್ರವಾರು ವಿಂಗಡಣೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಫೆ. 17ರೊಳಗಾಗಿ ಜಿಲ್ಲಾಧಿಕಾರಿಗೆ ಒಪ್ಪಿಸಬೇಕಿದೆ. ಬಳಿಕ ಡಿಸಿ ರಾಜ್ಯ ಚುನಾವಣ ಆಯೋಗಕ್ಕೆ ಸಲ್ಲಿಸಿದ ಬಳಿಕ ರಾಜ್ಯ ಸರಕಾರವು ಕರಡು ಪ್ರತಿ ರಚಿಸಿ ಈ ತಿಂಗಳ ಒಳಗಾಗಿ ಸಾರ್ವಜನಿಕರ ಗಮನಕ್ಕೆ ತರುವ ಸಾಧ್ಯತೆ ಇದೆ. ಜೂನ್ ತಿಂಗಳಲ್ಲಿ ತಾ.ಪಂ. ಅವಧಿ ಕೊನೆಗೊಳ್ಳಲಿದ್ದು, ಶೀಘ್ರ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಪ್ರಸಕ್ತ ಪ್ರಕ್ರಿಯೆಗಳು ವೇಗ ಪಡೆಯಲಿದೆ.
ಮೇಲ್ದರ್ಜೆಗೆ ಬೇಡಿಕೆ :
ಬೆಳ್ತಂಗಡಿ ತಾಲೂಕಿನಲ್ಲಿ ಬೆಳ್ತಂಗಡಿ ಪ.ಪಂ. ಹೊರತುಪಡಿಸಿ ಅತೀ ಹೆಚ್ಚು 34 ವಾರ್ಡ್ ಹಾಗೂ ಜನಸಂಖ್ಯೆ ಆಧಾರವಾಗಿ ನೋಡಿದಲ್ಲಿಯೂ ಉಜಿರೆ ಗ್ರಾ.ಪಂ. ಅತೀ ದೊಡ್ಡ ಗ್ರಾ.ಪಂ. ಆಗಿದೆ. ಉಜಿರೆಯನ್ನು ನಗರ ಸ್ಥಳೀಯ ಸಂಸ್ಥೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಕೂಗು ಕೇಳಿಬಂದಿತ್ತು. ಆದರೂ ಮೇಲ್ದರ್ಜೆಗೇರಿಲ್ಲ. ಈ ಮಧ್ಯೆ ಮತ್ತೆ ತಾ.ಪಂ. 5 ಕ್ಷೇತ್ರಗಳು ಇಳಿಕೆಯಾಗಿದ್ದು, 1 ಜಿ.ಪಂ.ಕ್ಷೇತ್ರ ಏರಿಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಪುನರ್ ವಿಂಗಡಣೆ ಪ್ರಕ್ರಿಯೆಯಿಂದಾಗಿ ರಾಜಕೀಯ ಪಕ್ಷಗಳು ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ತಾ.ಪಂ. 5 ಕ್ಷೇತ್ರಗಳು ಇಳಿಕೆಯಾಗಿದ್ದು, ಜಿ.ಪಂ. 1 ಕ್ಷೇತ್ರ ಏರಿಕೆಯಾಗಿದೆ. ಪುನರ್ ವಿಂಗಡಣೆಗೆ ಬೇಕಾದ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ರಾಜ್ಯ ಸರಕಾರದ ಸೂಚನೆಯಂತೆ ಪ್ರಕ್ರಿಯೆ ನಡೆಸಲಾಗುತ್ತದೆ.–ಮಹೇಶ್ ಜೆ., ತಹಶೀಲ್ದಾರ್