ಕುಷ್ಟಗಿ: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಅ. 22ಕ್ಕೆ ನಿಗದಿಯಾಗಿದೆ. ಈ ಗದ್ದುಗೆ ಗುದ್ದಾಟದಲ್ಲಿ ಕಾಂಗ್ರೆಸ್‌ಗೆ ಇಬ್ಬರು ಸದಸ್ಯರು ಕೈ ಕೊಟ್ಟಿದ್ದು, ಬಿಜೆಪಿ ಅಧಿಕಾರಿದ ಗದ್ದುಗೇರುವುದು ನಿಶ್ಚಳವಾಗುತ್ತಿದೆ.
ಪುರಸಭೆಯ 23 ವಾರ್ಡ್‌ಗಳಿಗೆ ಕಾಂಗ್ರೆಸ್‌ನಿಂದ 12, ಬಿಜೆಪಿಯಿಂದ8, ಪಕ್ಷೇತರರು 2, ಒಬ್ಬ ಸದಸ್ಯ ಅವಿರೋಧವಾಗಿ ಆಯ್ಕೆಯಗಿದ್ದಾರೆ. ಕಾಂಗ್ರೆಸ್ 12 ಸದಸ್ಯರಲ್ಲಿ ಮೂರನೇ ವಾರ್ಡ್ ಸದಸ್ಯೆ ಗೀತಾ ಶರಣಪ್ಪ ತುರಕಾಣಿಸಂಪರ್ಕ ಕಡಿದುಕೊಂಡಿದ್ದಾರೆ.ಕಾಂಗ್ರೆಸ್ ಪಾಳಯದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ 17ನೇ ವಾರ್ಡ್ ಸದಸ್ಯ ವೀರೇಶಗೌಡ ಬೆದವಟ್ಟಿ ಕಳೆದ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟು ಆಘಾತ ನೀಡಿದ್ದಾರೆ. ಈ ಬೆಳವಣಿಗೆಯಿಂದ ಮೂವರು ಪಕ್ಷೇತರರು ಸೇರಿದಂತೆ ಇಬ್ಬರು ಕಾಂಗ್ರೆಸ್ ಸದಸ್ಯರು ಬಿಜೆಪಿಯತ್ತ ಒಲವು ತೋರಿದ್ದಾರೆ.
ಅಜ್ಞಾತ ಸ್ಥಳಕ್ಕೆ ಪ್ರವಾಸಕ್ಕೆ ಹೋದವರಲ್ಲಿ ಕಾಂಗ್ರೆಸ್ 11 ಸದಸ್ಯರಲ್ಲಿ 17 ವಾರ್ಡ್ ಸದಸ್ಯ ಸಂಪರ್ಕ ಕಡಿದುಕೊಂಡಿದ್ದು, ಸದಸ್ಯ ಬಲ 10ಕ್ಕೆ ಕುಗ್ಗಿದೆ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆ ಬಿಜೆಪಿ 8 ಸದಸ್ಯರು ಹಾಗೂ ಮೂವರು ಪಕ್ಷೇತರರೂ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಕೈ ಕಟ್ಟಿದ: ಕಾಂಗ್ರೆಸ್ ಸದಸ್ಯರಲ್ಲಿ ಒಮ್ಮತ ಮೂಡದಿರುವುದು, ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಅವರು ಸ್ಥಳೀಯ ಸಂಸ್ಥೆಯ ಆಡಳಿತವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಅಧಿಕಾರವನ್ನು ಕಮಲಕ್ಕೆ ಕೊಟ್ಟು ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ.
ಕಾಂಗ್ರೆಸ್ ಸದಸ್ಯರು ಒಗ್ಗಟ್ಟಾಗಿರಲು ಸೂಚಿಸಲಾಗಿತ್ತು. ಆದರೂ ಇಬ್ಬರು ಸಂಪರ್ಕ ಕಡಿದುಕೊಂಡಿದ್ದಾರೆ. ಇಬ್ಬರು ಸದಸ್ಯರು ಸಂಪರ್ಕ ಸಾಧಿಸಿ ಅಧಿಕಾರ ಹಿಡಿಯುವ ವಿಶ್ವಾಸವಿದೆ. ಪಕ್ಷದ ನಿಯಮದಂತೆ 12 ಸದಸ್ಯರಿಗೂ ವಿಪ್ ಜಾರಿ ಮಾಡಲಾಗುತ್ತಿದ್ದು, ಇಬ್ಬರು ಸದಸ್ಯರ ಮನೆ ಬಾಗಿಲಿಗೆ ವಿಪ್ ನೋಟಿಸ್ ಅಂಟಿಸಲಾಗುವುದು.
–ದೇವೇಂದ್ರಪ್ಪ ಬಳೂಟಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಬಿಜೆಪಿ ಈ ಬಾರಿ ಆಡಳಿತ ಚುಕ್ಕಾಣಿ ಹಿಡಿಯಲಿದ್ದು, ನಮ್ಮ ಸದಸ್ಯರಿಗೂ ವಿಪ್ ಜಾರಿ ಮಾಡುತ್ತಿದ್ದೇವೆ. ನಮ್ಮ ಸದಸ್ಯರೆಲ್ಲರೂ ಪಕ್ಷಕ್ಕೆ ನಿಷ್ಠರಾಗಿದ್ದು, ಪಕ್ಷೇತರರು, ಕಾಂಗ್ರೆಸ್ ಸದಸ್ಯರ ಬೆಂಬಲವಿದೆ.
–ಬಸವರಾಜ್ ಹಳ್ಳೂರು, ಬಿಜೆಪಿ ತಾಲೂಕು ಅಧ್ಯಕ್ಷ