ಸಸಿಹಿತ್ಲು: ಕಡಲ ಮೀನುಗಾರಿಕೆಗೆ ತೆರಳಿ ವಾಪಸಾಗುತ್ತಿದ್ದ ನಾಡದೋಣಿಯೊಂದು ಸಮುದ್ರದ ಮಧ್ಯೆ ಮರಳದಿಬ್ಬಕ್ಕೆ ಸಿಲುಕಿ ಅಪಾರ ನಷ್ಟ ಸಂಭವಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲು ಮುಂಡಾ ಅಳಿವೆ ಬಳಿ ಶುಕ್ರವಾರ ಸಂಜೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಸಿಹಿತ್ಲು ಕದಿಕೆ ಲಚ್ಚಿಲ್ ನ ದೇವಿ ಅನುಗ್ರಹ ಹೆಸರಿನ ಬೋಟ್ ಅವಘಡಕ್ಕೆ ಈಡಾಗಿದ್ದು, ದೋಣಿಯಲ್ಲಿದ್ದ ಸುಮಾರು ಎರಡು ಟನ್ ಮೀನು ಸಮುದ್ರಪಾಲಾಗಿದೆ.
ದೋಣಿಯು ಅಲೆಗಳ ರಭಸಕ್ಕೆ ಸಿಲುಕಿ ಮುಕ್ಕಾಲು ಭಾಗ ಮುಳುಗುವ ಹಂತಕ್ಕೆ ತಲುಪಿತ್ತು.
ಇದನ್ನೂ ಓದಿ:ಕಾಪು ಕಡಲ ತೀರದಲ್ಲಿ ಮೀನಿನ ಸುಗ್ಗಿ
ಮರಳದಿಬ್ಬಕ್ಕೆ ಸಿಲುಕಿದ ದೋಣಿಯಲ್ಲಿದ್ದ ಮೀನುಗಾರರು ಇತರ ದೋಣಿಯ ಸಿಬ್ಬಂದಿಗಳ ಸಹಾಯದಿಂದ ಭಾರಿ ಪ್ರಯಾಸದಿಂದ ದೋಣಿಯನ್ನು ದಡ ಸೇರಿಸಿದರು.
ಈ ಮಧ್ಯೆ ರಜಾದಿನದ ಮೋಜಿಗಾಗಿ ಬಂದಿದ್ದ ಪ್ರವಾಸಿಗರು ಸಮುದ್ರದಲ್ಲಿ ತೇಲಿ ಬರುತ್ತಿದ್ದ ಭಾರಿ ಪ್ರಮಾಣದ ಮೀನುಗಳನ್ನು ಕೈಯಲ್ಲಿ ಹಿಡಿದು ಮನೆಗೆ ತೆಗೆದುಕೊಂಡು ಹೋದರು.