Advertisement

ಕಠಿನ ಲಾಕ್‌ಡೌನ್‌: ಬ್ರಿಸ್ಬೇನ್‌ ಟೆಸ್ಟ್‌ ಅನುಮಾನ

12:28 AM Jan 09, 2021 | Team Udayavani |

ಬ್ರಿಸ್ಬೇನ್‌: ಭಾರತ-ಆಸ್ಟ್ರೇಲಿಯ ನಡುವಿನ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯ ಮತ್ತೆ ಇಕ್ಕಟ್ಟಿಗೆ ಸಿಲುಕಿದೆ. ಇಲ್ಲಿ 4ನೇ ಟೆಸ್ಟ್‌ ನಡೆಸಿಯೇ ತೀರುವ ಇಂಗಿತ ಹೊಂದಿರುವ “ಕ್ರಿಕೆಟ್‌ ಆಸ್ಟ್ರೇಲಿಯ’ಕ್ಕೆ ಮತ್ತೂಂದು ಕಂಟಕ ಎದುರಾಗಿದೆ.

Advertisement

ಬ್ರಿಸ್ಬೇನ್‌ನಲ್ಲಿ ಕೊರೊನಾ ಪ್ರಕರಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕ್ವೀನ್ಸ್‌ಲ್ಯಾಂಡ್‌ ಸರಕಾರ ಮುಂದಿನ ಮೂರು ದಿನಗಳ ಕಾಲ ಕಠಿನ ಲಾಕ್‌ಡೌನ್‌ ಘೋಷಿಸಿದೆ. ಇದು 4ನೇ ಟೆಸ್ಟ್‌ ಪಂದ್ಯಕ್ಕೆ ತೊಡಕಾಗಿ ಪರಿಣಮಿಸುವ ಸಾಧ್ಯತೆ ಇದೆ. ಆದರೆ “ಕ್ರಿಕೆಟ್‌ ಆಸ್ಟ್ರೇಲಿಯ’ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಈ ಪಂದ್ಯ ಜ. 15ರಿಂದ ಆರಂಭವಾಗಬೇಕಿದೆ.

ಬ್ರಿಸ್ಬೇನ್‌ನ ಕಠಿನ ಕ್ವಾರಂಟೈನ್‌ ನಿಯಮದಿಂದ ನಮ್ಮ ಆಟಗಾರರಿಗೆ ತೊಂದರೆಯಾಗಲಿದೆ, ಇದನ್ನು ಸಡಿಲಗೊಳಿಸಿ ಎಂದು ಬಿಸಿಸಿಐ “ಕ್ರಿಕೆಟ್‌ ಆಸ್ಟ್ರೇಲಿಯ’ಕ್ಕೆ ಪತ್ರ ಬರೆದ 24 ಗಂಟೆಗಳಲ್ಲೇ ಈ ನಿಯಮ ಇನ್ನಷ್ಟು ಬಿಗಿಗೊಂಡಿರುವುದು ವಿಪರ್ಯಾಸ.  ಅಕಸ್ಮಾತ್‌ ಬ್ರಿಸ್ಬೇನ್‌ನಲ್ಲಿ ಈ ಪಂದ್ಯ ನಡೆಯದೇ ಹೋದರೆ ಆಗ ಅಂತಿಮ ಟೆಸ್ಟ್‌ ಕೂಡ ಸಿಡ್ನಿಯಲ್ಲೇ ನಡೆಯುವ ಸಾಧ್ಯತೆ ಹೆಚ್ಚು.

Advertisement

Udayavani is now on Telegram. Click here to join our channel and stay updated with the latest news.

Next