Advertisement

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

01:13 AM Jun 03, 2024 | Team Udayavani |

ಶ್ರೀನಗರ: ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಲಾಂಚ್‌ ಪ್ಯಾಡ್‌ಗಳಲ್ಲಿ 60-70 ಭಯೋತ್ಪಾದಕರು ಸಕ್ರಿಯರಾಗಿದ್ದು, ಭಾರತದ ಒಳಕ್ಕೆ ನುಸುಳಲು ಸಜ್ಜಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ರಶ್ಮಿ ರಂಜನ್‌ ಸ್ವೆ„ನ್‌ ಹೇಳಿದ್ದಾರೆ.  ಪಾಕಿಸ್ಥಾನವು ನುಸುಳುಕೋರರನ್ನು ಹಾಗೂ ವಸ್ತುಗಳನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸುವ ನೀಚಬುದ್ಧಿಯನ್ನು ಇನ್ನೂ ಮುಂದುವರಿಸಿದೆ. ಆದರೂ ಎದುರಾಳಿಗಳ ನುಸುಳುವಿಕೆ ಯತ್ನಗಳನ್ನು ತಡೆಯಲಾಗುತ್ತಿದೆ. ಗಡಿ ರಕ್ಷಣೆಗಾಗಿ ಪೊಲೀಸ್‌, ಸೇನೆ ಹಾಗೂ ಇನ್ನಿತರ ಭದ್ರತಾ ಪಡೆಗಳೆಲ್ಲವು ಗಳು ಬದ್ಧವಾಗಿವೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next